Advertisement

ತಲಪಾಡಿ ಟೋಲ್‌: ಸ್ಥಳೀಯರಿಗೆ ರಿಯಾಯಿತಿ ನೀಡದಿದ್ದರೆ ಹೋರಾಟ

01:00 AM Mar 06, 2019 | Team Udayavani |

ಹೊಸಂಗಡಿ: ಕೇರಳದ ಭೂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ರಾಜ್ಯದ ಎಡರಂಗ ಸರಕಾರವು ಭೂ ಸ್ವಾಧೀನಪಡಿಸುವಿಕೆಯಲ್ಲಿ ತೋರುತ್ತಿರುವ ವಿಳಂಬ ನೀತಿಯಿಂದ ಜನರು ತೊಂದರೆ ಅನುಭವಿಸು ವಂತಾಗಿದೆ ಎಂದು ಭಾರತೀಯ ಜನತಾ ಯುವಮೋರ್ಚಾದ ಮಂಜೇಶ್ವರ ಮಂಡಲ ಸಮಿತಿಯ ಸಭೆಯು ಆರೋಪಿಸಿದೆ. 

Advertisement

ತಲಪಾಡಿ ಟೋಲ್‌ ಗೇಟ್‌ನಲ್ಲಿ ಸ್ಥಳೀಯರಿಗೆ ಇದ್ದ ರಿಯಾಯಿತಿ ಇದೀಗ ನೀಡಲು ಸಾಧ್ಯವಿಲ್ಲ ಎನ್ನುತ್ತಿರುವುದು ಟೋಲ್‌ ವ್ಯವಸ್ಥಾಪಕರ ಉದ್ಧಟತನವಾಗಿದೆ. ಇಲ್ಲಿ ಆಧಾರ್‌ ಕಾರ್ಡ್‌ ಹಾಗೂ ವಾಹನ ದಾಖಲೆಗಳ ಅಸಲಿ ಪ್ರತಿ ಕೇಳುತ್ತಿರುವುದು ಕಾನೂನು ಬಾಹಿರವಾಗಿದೆ. ಟೋಲ್‌ ಕಾರ್ಮಿಕರಿಗೆ ಹಾಗೂ ಅದರ ವ್ಯವಸ್ಥಾಪಕರಿಗೆ ವಾಹನಗಳ ಹಾಗೂ ಆಧಾರ್‌ ಕಾರ್ಡ್‌ನ ಅಸಲಿ ಪ್ರತಿ ಕೇಳುವ ಅನುಮತಿ ಇಲ್ಲ ಎಂಬುದನ್ನು ಯುವಮೋರ್ಚಾ ಸಭೆಯಲ್ಲಿ ತಿಳಿಸಲಾಯಿತು. 

ಟೋಲ್‌ ಪ್ರತಿನಿಧಿಗಳು ಉದ್ಧಟತನ ಪ್ರದರ್ಶಿಸಿದರೆ ಹಾಗೂ ವಾಹನ ಚಾಲಕರನ್ನು, ಮಾಲಕರನ್ನು ಬೆದರಿಸುವುದು ಮುಂದುವರಿದರೆ ಟೋಲ್‌ ಮುಂದೆ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಯುವಮೋರ್ಚಾ ಎಚ್ಚರಿಸಿದೆ. ಮಂಜೇಶ್ವರ ತಾಲೂಕಿನ ಜನರು ಇಲ್ಲದ ರಸ್ತೆಗೆ ಟೋಲ್‌ ಕಟ್ಟಬೇಕಾದ ಪರಿಸ್ಥಿತಿ ಖಂಡನೀಯ. ಟೋಲ್‌ ಅಧಿಕೃತರ ದುರಹಂಕಾರ ಧೋರಣೆಗೆ ಸೂಕ್ತ ಉತ್ತರ ನೀಡಲಾಗುವುದು. ಇದರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ಕೊಡಲು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್‌ ಬಿ.ಎಂ. ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಯುವಮೋರ್ಚಾ ಮಂಡಲಾಧ್ಯಕ್ಷ  ಚಂದ್ರಕಾಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಧನರಾಜ್‌ ಬೀಟಿಗದ್ದೆ, ಸಂತೋಷ್‌ ದೈಗೋಳಿ, ಸುಮಿತ್‌ರಾಜ್‌ ಪೆರ್ಲ, ಪ್ರಜ್ವಿತ್‌ ಶೆಟ್ಟಿ  ಹಾಗೂ ಯುವಮೋರ್ಚಾ ನೇತಾರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next