Advertisement

ತಲಕಾಡು: ಅಸ್ಪೃಶ್ಯತೆ ವಿರೋಧಿ ಬೀದಿನಾಟಕ ಪ್ರದರ್ಶನ

12:45 PM Mar 15, 2017 | |

ತಿ.ನರಸೀಪುರ: 21ನೇ ಶತಮಾನದಲ್ಲೂ ಆಚರಣೆಯಾಗುತ್ತಿರುವ ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗಿನ ಬಗ್ಗೆ ಅರಿವು ಮೂಡಿಸಲು ಬೀದಿ ನಾಟಕಗಳನ್ನು ಆಯೋಜಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಸ್ತುತ್ಯಾರ್ಹ ಎಂದು ತಲಕಾಡು ಎಎಸ್‌ಐ ನಾಗರಾಜು ಹೇಳಿದರು.

Advertisement

ತಲಕಾಡು ಗ್ರಾಮದಲ್ಲಿ ಆಯೋಜಿಸಿದ್ದ ಜಾತೀಯತೆಯನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವ ಬೀದಿನಾಟಕ ಚಾಲನೆ ನೀಡಿ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ನೋಡಿಯಾದರೂ ಜನರಲ್ಲಿ ಜಾತಿ ಭೇದ ಮರೆಯಾಗಲಿ. ಎಲ್ಲರೂ ಒಂದೇ ಎಂದು ಬಾಳ್ಳೋಣ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ಗ್ರಾಮಾಭಿವೃದ್ಧಿ ಯೋಜನೆ ನಡೆಸಲು ನಮ್ಮೆಲ್ಲರ ಸಹಕಾರ ಎಂದಿಗೂ ಇದೆ ಎಂದು ಪೋ›ತ್ಸಾಹಿಸಿದರು.

ಮಹಿಳೆಯರಲ್ಲಿ ಕುಟುಂಬದ ನಿರ್ವಹಣಾ ಜಾಣ್ಮೆ, ಹಣಕಾಸು ವ್ಯವಹಾರ ಜಾnನ, ಮಕ್ಕಳ ಶಿಕ್ಷಣ ಮತ್ತು ವೈಯಕ್ತಿಕ ಶುಚಿತ್ವ, ಪರಿಸರ ಪ್ರಜ್ಞೆ, ಸ್ವಉದ್ಯೋಗ, ನಾಗರಿಕ ಸೌಲಭ್ಯಗಳ ಬಳಕೆ ಮುಂತಾದ ವಿಷಯಗಳ ಬಗ್ಗೆ ಜಾnನವಿಕಾಸ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅರಿವು ಮೂಡಿಸುತ್ತಾ ಬಂದಿರುವ ಯೋಜನೆಯ ಕಾರ್ಯಕ್ರಮ ಬೀದಿ ನಾಟಕದ ಮೂಲಕ ಜನರಲ್ಲಿ ಜಾತಿ ತಾರತಮ್ಯ ಹೋಗಲಾಡಿಸಲು ನಾಟಕದ ಮೂಲಕ ತಿಳಿಸಲಾಗುತ್ತಿದೆ. ಇದರ ಅರ್ಥವನ್ನುತಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಬದುಕುವಂತೆ ಹೇಳಿದರು. 

ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನಾಧಿಕಾರಿ ಸುನೀತಾ ಪ್ರಭು, ತಾಪಂ ಸದಸ್ಯೆ ಶಿವಮ್ಮ, ಜಾnನ ವಿಕಾಸ ಸಮನ್ವಯಾಧಿಕಾರಿ ಆಶಾ ನಿರೂಪಿಸಿದರೆ, ಮೇಲ್ವಿಚಾರಕ . ಸುಬ್ರಹ್ಮಣ್ಯಂ ಸ್ವಾಗತಿಸಿದರು. ಸೇವಾಪ್ರತಿನಿಧಿ ತುಳಸಮ್ಮ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಭ್ರಮ ಕಲಾ ತಂಡವು ಜಾತೀಯತೆ ಆಚರಣೆ ವಿರುದ್ಧದ ಬೀದಿ ನಾಟಕವನ್ನು ಪ್ರದರ್ಶಿಸಿತು. ಸಂಭ್ರಮ ಕಲಾ ತಂಡದ ಅಧ್ಯಕ್ಷೆ ಅನುಸೂಯ, ವಲಯದ ಸೇವಾಪ್ರತಿನಿಧಿಗಳಾದ ನಿಂಗರಾಜಮ್ಮ, ಜಯಲಕ್ಷ್ಮೀ, ಜ್ಯೋತಿಕಲಾ, ಮಹದೇವಮ್ಮ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next