ಚತ್ತಿಸ್ ಗಡ : ದೇಶಾದ್ಯಂತ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಯುವಕ ಯುವತಿಯರು ಸೇರಿದಂತೆ 18 ವರ್ಷ ಮೇಲ್ಪಟ್ಟವರು ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಇನ್ನು ಕೆಲವು ಸ್ವಯಂ ಸೇವಕರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಉಡುಗೊರೆ ನೀಡುವ ಮೂಲಕ ಉತ್ತೇಜನ ನೀಡುತ್ತಿದ್ದಾರೆ.
ಇದೇ ನಿಟ್ಟಿನಲ್ಲಿ ಚತ್ತೀಸ್ ಗಡದ ಬಿಜಪುರ ಗ್ರಾಮದಲ್ಲಿ ಕೋವಿಡ್ ಲಸಿಕೆ ಪಡೆದವರಿಗೆ ಟೊಮೆಟೊ ನೀಡುವ ಮೂಲಕ ಲಸಿಕೆ ಸಭಿಯಾನಕ್ಕೆ ಉತ್ತೇಜನ ನೀಡಿದ್ದಾರೆ. ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆದ ಮಹಿಳೆಯರಿಗೆ ಟೊಮೆಟೊ ಗಿಫ್ಟ್ ನೀಡುವ ಮೂಲಕ ಬಿಜಾಪುರ ಸ್ವಯಂ ಸೇವಕರು ಗಮನ ಸೆಳೆದಿದ್ದಾರೆ.
ಈ ಬಗ್ಗೆ ANI ಸುದ್ದಿ ಸಂಸ್ಥೆಯು ವರದಿ ಮಾಡಿದ್ದು, ಲಸಿಕೆ ಪಡೆದ ಮಹಿಳೆಯರಿಗೆ ಟೊಮೆಟೊ ನೀಡುತ್ತಿರುವುದಾಗಿ ತಿಳಿಸಿದೆ. ಇದು ಲಸಿಕೆ ಅಭಿಮಾನಕ್ಕೆ ಉತ್ತೇಜನ ನೀಡಲು ಈ ರೀತಿ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಟೊಮೆಟೊ ವಿತರಕ ಪುರುಷೋತ್ತಮ್ ಸಲ್ಲೂರ್, ಜನರಿಗೆ ಈ ಮೂಲಕವಾಗಿ ನಾವು ಎನ್ ಕರೇಜ್ ಮಾಡುತ್ತಿದ್ದೇವೆ. ತರಕಾರಿ ಬೆಳಗಾರರಲ್ಲಿ ನಾವುಗಳು ಮಾತುಕತೆ ನಡೆಸಿದ್ದು, ಬೆಳೆಗಾರರು ಕೂಡ ಟೊಮೆಟೊಗಳನ್ನು ಪೂರೈಕೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಹಲವಾರು ಮಂದಿ ಬಿಜಾಪುರ ಪಟ್ಟಣದ ಈ ಕಾರ್ಯದ ಬಗ್ಗೆ ಸಂತೋಷ ಪಟ್ಟಿದ್ದಾರೆ. ಇನ್ನು ಕೆಲವು ಮಂದಿ ಈ ರೀತಿಯ ಉತ್ತೇಜನವನ್ನು ಸರ್ಕಾರ ಮಾಡಿದರೆ ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ.