Advertisement

ಜನಪ್ರತಿನಿಧಿಗಳ ನಾಲಿಗೆ ಹಿಡಿತದಲ್ಲಿರಲಿ!

12:02 PM Dec 10, 2017 | |

ಬೆಂಗಳೂರು: ಜನಪ್ರತಿನಿಧಿಗಳು ಜನರಿಗೆ ಗೌರವ ನೀಡುವ ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೇ ವಿನಾಃ ಜನರೇ ನಮಗೆ ಗೌರವ ನೀಡಬೇಕೆಂಬ ಮನಸ್ಥಿತಿ ಹೊಂದುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅಭಿಪ್ರಾಯಪಟ್ಟರು.

Advertisement

ಹೆಬ್ಟಾಳ ವಿಧಾನಸಭೆ ಕ್ಷೇತ್ರದ ಜೆ.ಸಿ.ನಗರದಲ್ಲಿ ಬಿಬಿಎಂಪಿ ವಾರ್ಡ್‌ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ನಾಯಕರು ಹಾಗೂ ಜನಪ್ರತಿನಿಧಿಗಳ ನಾಲಿಗೆ ಹಿಡಿತದಲ್ಲಿ ಇರಬೇಕು. ಜನರಿಗೆ ಗೌರವ ನೀಡಿ ಜನ ಸೇವಕನಾಗಬೇಕು. ಜನರೇ ನಮಗೆ ಗೌರವ ನೀಡಬೇಕು ಎಂಬ ಮನೋಧರ್ಮ ಜನಪ್ರತಿನಿಧಿಯಲ್ಲಿ ಇರಬಾರದು ಎಂದು ಹೇಳಿದರು.

ಸಮಾಜದ ಹಿಂದುಳಿದ ಜನರಿಗೆ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಸೂಕ್ತ ಸಹಾಯ ಒದಗಿಸುವುದು ಜನಪ್ರತಿನಿಧಿಯ ಕರ್ತವ್ಯವಾಗಿದೆ. ಇದೊಂದು ದೇವರ ಕೆಲಸ ಮತ್ತು ಪಾಲಿಕೆ ಕಚೇರಿ ದೇವರ ಮನೆ ಇದ್ದಂತೆ. ಜನರ ಸಮಸ್ಯೆಯ  ಪರಿಹಾರದ ಕೇಂದ್ರವಾಗಬೇಕು. ಪಾಲಿಕ ಸದಸ್ಯರು ದಿನದ 24 ಗಂಟೆ ಜನರಿಗೆ ಲಭ್ಯವಿರಬೇಕು ಎಂದು ಕಿವಿಮಾತು ಹೇಳಿದರು.

ವಾರ್ಡ್‌ ವ್ಯಾಪ್ತಿಯಲ್ಲಿ ಪುನರ್‌ ನಿರ್ಮಾಣ ಗೊಂಡಿರುವ ಸಿಟಿಜನ್‌ ಉದ್ಯಾನವನ, ಹತ್ತು ಕಡೆ ಬಸ್‌ ನಿಲ್ದಾಣ, 35 ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಕಾಮಗಾರಿ ಉದ್ಘಾಟಿಸಿದ ನಂತರ ವಿಕಲಚೇತನ ಫ‌ಲಾನುಭವಿಗಳಿಗೆ ದ್ವಿಚಕ್ರ ವಾಹನ, ಬಡವರಿಗೆ ಒಂಟಿ ಮನೆ ನಿರ್ಮಾಣದ ಕಾರ್ಯಾದೇಶ ಪತ್ರ ವಿತರಿಸಿದರು. ಶಾಸಕ ವೈ.ಎ.ನಾರಾಯಣ ಸ್ವಾಮಿ, ಪಾಲಿಕೆ ಸದಸ್ಯ ಗಣೇಶ್‌ ರಾವ್‌ ಮಾನೆ ಮೊದಲಾದವರು ಉಪಸ್ಥಿತರಿದ್ದರು.

ರಾಜಕಾರಣದಲ್ಲಿ ಉದ್ವೇಗಕ್ಕೆ ಒಳಗಾಗಿ ಹಲವು ಘಟನೆ ನಡೆಯುತ್ತದೆ. ಮಹಾರಾಷ್ಟ್ರದ ಸಂಸದ ನಾನಾ ಪಟೊಲೆ ಅವರು ಪಕ್ಷದ ನಿಷ್ಠಾಂತ ಕಾರ್ಯಕರ್ತ. ಖಂಡಿತವಾಗಿಯೂ ಅವರು ಪಕ್ಷದಲ್ಲೇ ಇರುತ್ತಾರೆ. ಗುಜರಾತಿನಲ್ಲಿ ಬಿಜೆಪಿ 125ಕ್ಕೂ ಅಧಿಕ ಸೀಟುಗಳೊಂದಿಗೆ ಜಯ ಸಾಧಿಸಲಿದೆ.
-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

Advertisement

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಜನರ ರಕ್ಷಣೆಗೆ ಆದ್ಯತೆ ನೀಡಿದೆ ಇದ್ದಾಗ ಅಹಿತಕರ ಘಟನೆಗಳು ನಡೆಯುತ್ತವೆ. ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ತನಿಖೆ ಚುರುಕುಗೊಳಿಸಿ, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕು,’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next