Advertisement

ಆದರ್ಶ ಜೀವನ ಸಾಗಿಸಿ

05:09 PM Oct 21, 2018 | Team Udayavani |

ದಾವಣಗೆರೆ: ದಾಂಪತ್ಯಕ್ಕೆ ಪಾದಾರ್ಪಣೆ ಮಾಡಿದ ವಧು-ವರರು ಧಾರ್ಮಿಕ ನೆಲೆಗಟ್ಟಿನಲ್ಲಿ ಪರಸ್ಪರ ಹೊಂದಾಣಿಕೆಯಿಂದ ಆದರ್ಶ ಜೀವನ ಸಾಗಿಸಬೇಕು ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.

Advertisement

ಶನಿವಾರ, ಶಿವಾಜಿನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ 20 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದ ಸುಖ, ದುಃಖಗಳಲ್ಲಿ ಸತಿ-ಪತಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳಬೇಕು. ಆಗ ಮಾತ್ರ ಜೀವನ ಸಾರ್ಥಕ ಆಗಲಿದೆ ಎಂದರು.

ಎಲ್ಲಾ ರೀತಿ ಭವ ಸಂಪತ್ತು ಕರುಣಿಸುವ ತಾಯಿ ಶ್ರೀ ದುರ್ಗಾಂಬಿಕಾ ದೇವಿ ಮಹಿಮೆಯಿಂದ ದಾವಣಗೆರೆಯಲ್ಲಿ ಕಾಲ ಕಾಲಕ್ಕೆ ಮಳೆ ಆಗುತ್ತಿದೆ. ಉತ್ತಮ ಬೆಳೆ ಪಡೆಯುವ ಮೂಲಕ ರೈತರ ಬಾಳು ಹಸನಾಗಲಿ ಎಂದು ಆಶಯ ವ್ಯಕ್ತಪಡಿಸಿದರು. 

ಕಳೆದ 15 ವರ್ಷಗಳಿಂದ ಈ ರೀತಿಯ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ಧು, ಇದಕ್ಕೆ ನಗರದ ದಾನಿಗಳ ಉದಾರ ಕೊಡುಗೆಯು ಕಾರಣವಾಗಿದೆ. ಶರನ್ನವರಾತ್ರಿಯ ದಸರಾ ಮರುದಿನ 108 ಕಳಸಗಳಿಂದ ಪೂಜೆ ಹಾಗೂ ದೇವಿಯ ಮೆರವಣಿಗೆ ಮತ್ತಷ್ಟು ಕಳೆ ಹೆಚ್ಚಿಸಿದೆ ಎಂದು ಅವರು ಬಣ್ಣಿಸಿದರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ದಾಂಪತ್ಯದಲ್ಲಿ ಗಂಡ-ಹೆಂಡತಿ ಪರಸ್ಪರ ಅನ್ಯೋನ್ಯತೆಯಿಂದಿರಬೇಕು.

ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ಸಿಟ್ಟು ಮಾಡಿಕೊಳ್ಳದೇ ಸಮಾಜಕ್ಕೆ ಮಾದರಿಯಾಗಿ ಒಳ್ಳೆಯ ಜೀವನ ನಡೆಸಿ ಎಂದು ಸಲಹೆ ನೀಡಿದರು. ಪಾಲಿಕೆ ಸದಸ್ಯ ತಿಪ್ಪಣ್ಣ, ದೇವಸ್ಥಾನ ಟ್ರಸ್ಟ್‌ನ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಮಾಜಿ ಮೇಯರ್‌ ಎಚ್‌.ಬಿ. ಗೋಣೆಪ್ಪ, ಯಶವಂತರಾವ್‌ ಸಾವಂತ್‌, ಪಿಸಾಳೆ ಸತ್ಯನಾರಾಯಣ, ಹನುಮಂತರಾವ್‌ ಜಾಧವ್‌, ರಾಮಕೃಷ್ಣ ಬಡಿಗೇರ್‌, ಗುರುರಾಜ್‌, ಉಮೇಶ್‌ ಸಾಳಂಕಿ ಸೇರಿದಂತೆ ಇತರರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

Advertisement

ಸಾಮೂಹಿಕ ವಿವಾಹದ ನಂತರ ಡೊಳ್ಳು, ಯುವಕರ ಕುಣಿತದ ಉತ್ಸಾಹದೊಂದಿಗೆ ಟ್ರಾಕ್ಟರ್‌ ನಲ್ಲಿ ದುಗಾಂಬಿಕಾ ದೇವಿಯ ಉತ್ಸವಮೂರ್ತಿ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಆದ್ಧೂರಿಯಾಗಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next