Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾದರಿ ನೀತಿ ಸಂಹಿತೆ ಜಾರಿ ತಂಡ, ತಾಲೂಕುವಾರು ನೋಡಲ್ ಅಧಿಕಾರಿಗಳು, ಸಹಾಯಕ ಚುಣಾವಣಾಧಿಕಾರಿಗಳು ಮತ್ತು ತಹಶೀಲ್ದಾರರ ಸಭೆ ನಡೆಸಿದ ಅವರು ಚುನಾವಣಾ ಅಕ್ರಮಗಳ ಸ್ವರೂಪ ಬದಲಾಗುತ್ತಿದ್ದು, ಅಧಿಕಾರಿಗಳು ಚಾಣಾಕ್ಷತೆಯಿಂದ ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕು ಎಂದರು.
Related Articles
Advertisement
ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಸ್ವತ್ಛತೆ ಹಾಗೂ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇರಲೇಬೇಕು. ಗ್ರಾಮ ಪಂಚಾಯತಿ ಪಿಡಿಓಗಳು ಇದನ್ನು ಖಾತರಿಪಡಿಸಬೇಕು. ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಆಯಾಯ ಮತಗಟ್ಟೆಗಳಲ್ಲಿ ಕಾಫಿ,ಟೀ, ಊಟ, ತಿಂಡಿಗಳ ಪೂರೈಕೆಯಾಗಬೇಕು. ಇದಕ್ಕಾಗಿ ಅಕ್ಷರದಾಸೋಹ ಅಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.
ಮದ್ಯ ಮಾರಾಟದ ಮೇಲೆ ವಿಶೇಷ ನಿಗಾ: ಜಿಲ್ಲಾದ್ಯಂತ ಅಕ್ರಮ ಮದ್ಯಸಾಗಾಟ ಮತ್ತು ಮಾರಾಟದ ಬಗ್ಗೆ ಹದ್ದಿನ ಕಣ್ಣು ಇರಿಸಬೇಕು ಎಲ್ಲಾ ವಿಧದ ಪರವಾನಗಿಗಳಿಗೆ ವಿಧಿಸಿರುವ ಷರತ್ತುಗಳು ಕಡ್ಡಾಯವಾಗಿ ಪಾಲನೆಯಾಗಬೇಕು. ನಿಯಮ ಉಲ್ಲಂಘನೆಯಾಗುವ ಪ್ರಕರಣಗಳಲ್ಲಿ ಪರವಾನಗಿ ರದ್ದು ಪಡಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ.
ವೈನ್ ಸ್ಟೋರ್ ಮತ್ತು ಎಂಎಸ್‌ಐಎಲ್‌ನಲ್ಲಿ ಕೇವಲ ಮಧ್ಯ ಪಾರ್ಸಲ್ ಮಾರಾಟ ಮಾಡಬಹುದು, ಅಲ್ಲಿಯೇ ಕುಡಿಯಲು ನೀಡುವಂತಿಲ್ಲ. ಬಾರ್‌ಗಳಲ್ಲಿ ಮದ್ಯ ಅಲ್ಲೇ ಮಾರಾಟ ಮಾಡಬೇಕಿದ್ದು, ಹೊರಗೆ ಪಾರ್ಸಲ್‌ಗಳನ್ನು ನೀಡಲು ಅವಕಾಶವಿಲ್ಲ. ಅದೇ ರೀತಿ ರೆಸಾರ್ಟ್ ಲಾಡ್ಜ್ಗಳಲ್ಲಿ ನಿರ್ಧಿಷ್ಟ ನಿಯಮಗಳಿದ್ದು ಅದನ್ನು ಪಾಲಿಸಲೇಬೇಕು. ಮಾರಾಟ, ಎತ್ತುವಳಿ, ಸ್ಟಾಕ್ ವಹಿ, ರಶೀದಿಗಳು ತಾಳೆಯಾಗುವಂತಿರಬೇಕು. ಟೋಕನ್ ನೀಡಿ ಮದ್ಯ ಪಡೆಯುವ ಪ್ರಕಿಯೆಗಳ ಬಗ್ಗೆ ವಿಶೇಷ ನಿಗಾ ವಹಿಸಬೇಕು ಎಂದು ಅವರು ತಿಳಿಸಿದರು.
ಪೆಟ್ರೋಲ್ ಬಂಕ್‌ಗಳಲ್ಲಿ ಉಚಿತ ಅಥವಾ ಟೋಕನ್ ವ್ಯವಸ್ಥೆಯಲ್ಲಿ ಪೆಟ್ರೋಲ್ ಹಾಕುವುದು. ವಾಣಿಜ್ಯ ಮಳಿಗೆಗಳಲ್ಲಿ ಗಿಫ್ಟ್ ನೀಡಿಕೆಗೆ ಕೂಪನ್ ಆದಾರದಲ್ಲಿ ಸರಕು ನೀಡಿಕೆಗಳ ನಡೆಯಬಹುದು ಅದರ ಬಗ್ಗೆ ಎಚ್ಚರ ವಹಿಸಬೇಕು. ಸಹಾಯಕ ಚುನಾವಣಾಧಿಕಾರಿಗಳು ಮತ್ತು ತಹಶೀಲ್ದಾರರು ಎಲ್ಲಾ ಮತಗಟ್ಟೆಗಳ ಸುಸ್ಥಿತಿ ಬಗ್ಗೆ ಖಾತರಿ ನೀಡಬೇಕು. ಏ.4 ರೊಳಗೆ ಲಿಖೀತ ವರದಿ ಸಲ್ಲಿಸಬೇಕು ಎಂದು ಅವರು ಹೇಳಿದರು.
ನಗದು ವ್ಯವಹಾರ ಹಾಗೂ ಹಣ ವರ್ಗಾವಣೆ ಬಗ್ಗೆ ಕಣ್ಗಾವಲು: ಎಲ್ಲಾ ಬ್ಯಾಂಕ್‌ಗಳಲ್ಲಿ ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ವವಾಟು ಮತ್ತು ಹಣ ವರ್ಗಾವಣೆ ಬಗ್ಗೆ ಕಣ್ಗಾವಲು ವಹಿಸಬೇಕು. ಒಂದು ಖಾತೆಯಿಂದ ಹಲವು ಖಾತೆಗೆ ಹಣವರ್ಗಾವಣೆಯಾಗುತ್ತಿದ್ದರೆ ಅದನ್ನು ವರದಿ ಮಾಡಬೇಕು. ವವಾಟುಗಳೇನೂ ನಡೆಯದೇ ಇದ್ದರೆ ಆ ಬಗ್ಗೆಯೂ ಲಿಖೀತ ದೃಢೀಕರಣವನ್ನು ನೀಡಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.
ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಎಂ.ಎಲ್. ವೈಶಾಲಿ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಪ್ರಿಯಾಂಕ, ವಿವಿಧ ಸಮಿತಿಗಳ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ತಹಶೀಲ್ದಾರರು ಸಭೆಯಲ್ಲಿ ಹಾಜರಿದ್ದರು.
ಸಭೆ, ಸಮಾರಂಭದ ಮಾಹಿತಿ ನೀಡಲು ಸೂಚನೆಹಾಸನ: ಲೋಕಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಲು ವಿವಿಧ ತಂಡಗಳನ್ನು ನೇಮಿಸಲಾಗಿದೆ. ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನಡೆಸುವ ಸಭೆ, ಸಮಾರಂಭಗಳಿಗೆ ನಿಮ್ಮ ಹಂತದಲ್ಲಿಯೇ ಅನುಮತಿ ನೀಡಲಾಗುತ್ತಿದೆ. ರಾಜಕೀಯ ಪಕ್ಷಗಳ, ಅಭ್ಯರ್ಥಿಗಳಿಗೆ ಅನುಮತಿ ನೀಡಲಾಗುವ ಸಭೆ, ಸಮಾರಂಭಗಳ ವಿರಗಳನ್ನು ಒಂದು ದಿನ ಮುಂಚಿತವಾಗಿ ಕಡ್ಡಾಯವಾಗಿ ತಮ್ಮ ಕಚೇರಿಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಸೂಚಿಸಿದ್ದಾರೆ. ಸಭೆ, ಸಮಾರಂಭಗಳಿಗೆ ನಿಯೋಜಿಸಲ್ಪಡುವ ಪ್ಲೆçಯಿಂಗ್ ಸ್ಕ್ವಾಡ್ ಮತ್ತು ವಿಡಿಯೋ ಚಕ್ಷಣಾ ತಂಡದ ಅಧಿಕಾರಿಗಳ ವಿವರಗಳ ಮಾತಿಯನ್ನೂ ತಮ್ಮ ಕಚೇರಿಯ ಗಮನಕ್ಕೆ ತರಬೇಕು ಎಂದು ನಿರ್ದೇಶನ ನೀಡಿದ್ದಾರೆ.