ಉಳ್ಳಾಲ: ಕ್ವಾರಂಟೈನ್‌ನಲ್ಲಿರು ವವರ ಗಂಟಲು ದ್ರವ ಪರೀಕ್ಷೆಯ ವರದಿ ಬಾರದೆ ಅವರನ್ನು ಮನೆಗೆ ಕಳುಹಿಸಬೇಡಿ. ಬೋಳಿಯಾರ್ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಬೇಕಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಇಲಾಖೆ ಇಂತಹ ತಪ್ಪುಗಳನ್ನು ಮಾಡಬಾರದು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಬೋಳಿಯಾರ್ ಗ್ರಾ.ಪಂ. ಕಚೇರಿಯಲ್ಲಿ ರವಿವಾರ ಕೋವಿಡ್-19 ಸಂಬಂಧಿಸಿ ಆರೋಗ್ಯ ಇಲಾಖೆ, ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಬೋಳಿಯಾರ್ ಕಾಪಿಕಾಡ್‌ನ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಮತ್ತು ಎರಡನೇ ಸಂಪರ್ಕದ ಜನರು ಯಾವುದೇ ಮುಚ್ಚುಮರೆಯಿಲ್ಲದೆ ಮಾಹಿತಿ ನೀಡಿ ಎಂದ ಅವರು, ಹೆದರಿಕೆಯಿಂದ ಪರೀಕ್ಷೆಗೆ ಒಳಪಡದೆ ಮುಂದಿನ ದಿನಗಳಲ್ಲಿ ಅಪಾಯವನ್ನು ಆಹ್ವಾನಿಸಿಕೊಳ್ಳದಿರಿ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಸುಜಯ್ ಭಂಡಾರಿ ಮಾತನಾಡಿ, ಈ ಹಿಂದಿನ ಮಾರ್ಗಸೂಚಿ ಬದಲಾಗಿದ್ದು, ಈಗ ಸೋಂಕಿತ ವ್ಯಕ್ತಿಯ ಸುತ್ತಮುತ್ತಲಿನ ಮನೆಗಳನ್ನು ಮಾತ್ರ ಸೀಲ್‌ಡೌನ್ ಮಾಡಲಾಗುತ್ತದೆ ಎಂದರು.
ಗ್ರಾ. ಪಂ. ಅಧ್ಯಕ್ಷ ಸತೀಶ್ ಆಚಾರ್ಯ, ಕೊಣಾಜೆ ಪೊಲೀಸ್ ಇನ್‌ಸ್ಪೆಕ್ಟರ್ ಮಧುಸೂದನ್, ಜಿ. ಪಂ. ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯ ಜಬ್ಟಾರ್ ಬೋಳಿಯಾರ್, ಉಪಾಧ್ಯಕ್ಷೆ ಕಮಲಾ ಟಿ.ಎಂ., ಪಿಡಿಒ ಕೃಷ್ಣ ಕುಮಾರ್ ಕೆಮ್ಮಾಜೆ, ಗ್ರಾಮ ಕರಣಿಕ ಲಾವಣ್ಯಾ ಮಂಚಿ, ಗ್ರಾ. ಪಂ.ಸದಸ್ಯ ಪ್ರಶಾಂತ್ ಗಟ್ಟಿ ಅಮ್ಮೆಂಬಳ, ರಮೇಶ್ ಶೆಟ್ಟಿ, ರಿಯಾಝ್, ರೋಹಿನಾಥ್ ಶೆಟ್ಟಿ, ಆಶಾ ಕಾರ್ಯಕರ್ತರಾದ ದೇವಕಿ ಎಸ್., ಚಿತ್ರಾ ಕೆ., ಎಎನ್‌ಎಂ ರತ್ನಾವತಿ ಮತ್ತಿತರರು ಉಪಸ್ಥಿತರಿದ್ದರು.