Advertisement

ಸೋಂಕು ತಡೆಗೆ ಮುಂಜಾಗ್ರತಾ ಕ್ರಮ ವಹಿಸಿ

01:49 PM Oct 18, 2020 | Suhan S |

ಹುಬ್ಬಳ್ಳಿ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಹಾಗೂ ವಾರ್ತಾ ಇಲಾಖೆ ಆಶ್ರಯದಲ್ಲಿ ಶನಿವಾರ ನಡೆದ ಕೋವಿಡ್ ಜಾಗೃತಿ ಜಾಥಾ ಅಭಿಯಾನಕ್ಕೆ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ದೇವಿಂದ್ರಪ್ಪ ಬಿರಾದಾರ ಚಾಲನೆ ನೀಡಿದರು.

Advertisement

ನೂತನ ನ್ಯಾಯಾಲಯ ಆವರಣದಲ್ಲಿ ಕೋವಿಡ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಯಾ, ವಾಚಾ, ಮನಸ್ಸಿನಿಂದ ಮಹಾಮಾರಿ ಕೋವಿಡ್ ತಡೆಗಟ್ಟಲು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕೆಂದರು. ಜನರು ಮಾಸ್ಕ್, ಸ್ಯಾನಿಟೈಸರ್‌ ಬಳಕೆ ಅಥವಾ ಸಾಬೂನಿನಿಂದ ಕೈತೊಳೆಯುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೋಗ ಹೊಡೆದೋಡಿಸಬೇಕೆಂದರು.ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧಿಧೀಶ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ನಾಗರಾಜ ಎ.ಕೆ ಮಾತನಾಡಿ, ನ್ಯಾಯಾಲಯಕ್ಕೆ ಬರುವ ನ್ಯಾಯಾ ಧೀಶರು, ಜನಸಾಮಾನ್ಯರು, ಕಸ್ಟಡಿದಾರರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸ ರ್‌ ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದರು.

ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಅಶೋಕಬಳಿಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ವಿಶ್ವದಾದ್ಯಂತ ಹರುಡುತ್ತಿರುವ ಕೊರೊನಾದಿಂದ ನಾವು ಮುಂಜಾಗ್ರತೆ ಕೈಗೊಳ್ಳುವುದು ಅವಶ್ಯ ಎಂದರು. ಡಾ| ಶ್ರೀಕಾಂತ ಮಾಯಣ್ಣವರ ಕೋವಿಡ್ ಕುರಿತಾದ ಮುಂಜಾಗ್ರತಾ ಕ್ರಮ ಹಾಗೂ ರೋಗ ತಡೆಯಲು ವೈದ್ಯಕೀಯ ಉಪಚಾರ ಕುರಿತು ಹೇಳಿದರು.

ಜಿಲ್ಲಾ ನ್ಯಾಯಾಧೀಶ ಔದ್ಯಮಿಕ ನ್ಯಾಯಾಧಿಕರಣ ಅಧ್ಯಕ್ಷ ಜಿ.ಎ.ಮೂಲಿಮನಿ, ಜಿಲ್ಲಾ ಹಾಗೂ ಪ್ರಧಾನ ಮತ್ತು ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶರಾದ ಸುಮಂಗಲಾ ಎಸ್‌.ಬಸವಣ್ಣೂರ, 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಗಂಗಾಧರ ಕೆ.ಎನ್‌.ಪ್ರಭಾರ ಸಿವಿಲ್‌ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಮಾದೇಶ ವಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ, ವಾರ್ತಾ ಇಲಾಖೆ ಅಧೀಕ್ಷಕ ವಿನೋದಕುಮಾರ ಸೇರಿದಂತೆ ಆಶಾ ಕಾರ್ಯಕರ್ತೆಯರು ಜಾಥಾ ಪಾಲ್ಗೊಂಡಿದ್ದರು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ :

Advertisement

ಕಲಘಟಗಿ: ಕೋವಿಡ್ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ವೈರಸ್‌ಹರಡದಂತೆ ತಡೆಗಟ್ಟಲು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಆಹಾರ ಉಪಯೋಗಿಸಬೇಕೆಂದು ಹಿರಿಯ ದಿವಾಣಿ ನ್ಯಾಯಾ ಧೀಶೆ ಜಿ.ಕೆ.ದಾಕ್ಷಾಯಿಣಿ ಕರೆ ನೀಡಿದರು.

ಕೋವಿಡ್ ವೈರಸ್‌ ಹರಡುವುದನ್ನು ತಡೆಗಟ್ಟಲು ಜನಾಂದೋಲನಕಾರ್ಯಕ್ರಮದ ಅರಿವು ಮೂಡಿಸುವ ಪ್ರಚಾರಾಂದೋಲನ ವಾಹನಕ್ಕೆ ನ್ಯಾಯಾಲಯದ ಆವರಣದಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ವೈರಸ್‌ ಹರಡುವುದನ್ನು ತಡೆಗಟ್ಟಲು ಸರ್ಕಾರವು ಉತ್ತಮ ಚಿಕಿತ್ಸೆ ಹಾಗೂ

ಔಷಧೋಪಚಾರವನ್ನು ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜತೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮುಖಗವಸುಧರಿಸುವುದರೊಂದಿಗೆ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದರು.

ಸಿವಿಲ್‌ ನ್ಯಾಯಾಧಿಧೀಶ ರಾಜಶೇಖರ ತಿಳಗಂಜಿ ಮಾತನಾಡಿ, ಕೋವಿಡ್ ಹರಡದಂತೆ ತಡೆಗಟ್ಟಲು ಚಿಕಿತ್ಸೆಗೋಸ್ಕರ ಆಸ್ಪತ್ರೆ, ನಿಗದಿತ ಪ್ರತ್ಯೇಕಿಸಿದ ಸ್ಥಳ ಇಲ್ಲವೇ ಮನೆಗಳಲ್ಲಿ ಪ್ರತ್ಯೇಕಿಸಿದಾಗ ದೈಹಿಕಆರೋಗ್ಯ ಜತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಯಾವುದೇಸಂದರ್ಭದಲ್ಲಿ ಖನ್ನತೆ, ಆತಂಕ ಹಾಗೂ ಒತ್ತಡಕ್ಕೊಳಗಾಗದೇ ಆತ್ಮ ಬಲ ಹೆಚ್ಚಿಸಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕೆಂದರು. ನಂತರ ಪ್ರತಿಜ್ಞಾ ವಿಧಿ ಬೋಧಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ,ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ, ಅಭಿಯೋಜನಾಇಲಾಖೆ, ಪಪಂ ಹಾಗೂ ತಾಲೂಕು  ವಕೀಲರ ಸಂಘದ ಸಂಯುಕ್ತಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಶಿವನಗೌಡ್ರ, ಸಹಾಯಕ ಸರ್ಕಾರಿ ಅಭಿಯೋಜಕಿ ಕವಿತಾ ಕಮಡೊಳ್ಳಿ, ಪಪಂ ಮುಖ್ಯಾಧಿಕಾರಿ ಬಿ. ಚಂದ್ರಶೇಖರ, ಆರೋಗ್ಯಾಧಿಕಾರಿ ಡಾ| ಕಳಸಣ್ಣವರ, ಹಿರಿಯ ನ್ಯಾಯವಾದಿಗಳಾದ ಎಸ್‌.ಜಿ. ಕುಲಕರ್ಣಿ, ಬಿ.ವಿ.ಪಾಟೀಲ, ಎಸ್‌. ಜೆ.ಸುಂಕದ, ಆರ್‌.ಎಸ್‌.ಉಡಪಿ, ಎಸ್‌ .ಟಿ.ತೆಗ್ಗಿಹಳ್ಳಿ, ಎಮ್‌.ಎಸ್‌.ಧನಿಗೊಂಡ,ಜಿ.ಬಿ.ನೇಕಾರ, ಕೆ.ಬಿಗುಡಿಹಾಳ, ಎಮ್‌.ಎಮ್‌.ಚಲವಾದಿ, ವಿ.ಆರ್‌. ಗಾಣಿಗೇರ, ವಾಸಂತಿ ಖಾನಾಪೂರ ಸ್ವಾಬ್‌ ಟೆಸ್ಟ್‌ ತಂಡದ ಮಂಜುಳಾ ಕಟ್ಟಿಮನಿ, ಕೆ.ದೊಡ್ಡಮ್ಮ, ಸದಾನಂದ, ಶೋಭಾ ಸಂತಬಾನವರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next