Advertisement

Ram Mandir: ಬ್ಯಾಗ್‌, ವಾಚ್‌ ಕಳಚಿಟ್ಟು ಮಂದಿರಕ್ಕೆ ಬನ್ನಿ: ಭಕ್ತರಿಗೆ ಮನವಿ

12:45 AM Feb 01, 2024 | Team Udayavani |

ಅಯೋಧ್ಯೆ/ಲಕ್ನೋ: ಅಯೋಧ್ಯೆಯಲ್ಲಿ ಬಾಲಕ ರಾಮನ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವತಿ ಸಹಯೋಗದಲ್ಲಿ ಫಾಸ್ಟ್‌ ಲೇನ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

Advertisement

ರಾಮ ಮಂದಿರಕ್ಕೆ ಆಗಮಿಸುವವರು ಬ್ಯಾಗ್‌ ಸೇರಿದಂತೆ ಯಾವುದೇ ವಸ್ತುಗಳನ್ನು ವಸತಿ ಗೃಹದಲ್ಲೇ ಇರಿಸಿ ಆಗಮಿಸಬೇಕು. ಶೂ, ಚಪ್ಪಲಿ, ವಾಚ್‌ಗಳನ್ನು ವಸತಿಗೃಹದಲ್ಲೇ ಇರಿಸಲು ಮನವಿ ಮಾಡಲಾಗಿದೆ.

ಜ.22ರಿಂದ ಇದುವರೆಗೆ 13 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ವೇಗವಾಗಿ ದರ್ಶನ ಪಡೆಯಲು ಅವಕಾಶ ನೀಡಲು ಫಾಸ್ಟ್‌ಲೇನ್‌ ಜಾರಿಗೊಳಿಸಲಾಗಿದೆ. ಭಕ್ತರಿಗೆ ಅನುಕೂಲವಾಗುವಂತೆ ಮಂದಿರದ ಸಮೀಪ ಇರುವ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದರು.

ಮತ್ತೆ ಆರಂಭ:
ಇದೇ ವೇಳೆ, ದೇಶಿಯ ವಿಮಾನಯಾನ ಸಂಸ್ಥೆ ಝೂಮ್‌ ಬುಧವಾರ 4 ವರ್ಷಗಳ ಬಳಿಕ ಮತ್ತೆ ತನ್ನ ಸೇವೆ ಆರಂಭಿಸಿದೆ. ನವದೆಹಲಿಯಿಂದ ಅಯೋಧ್ಯೆಗೆ ವಾರದಲ್ಲಿ 3 ಬಾರಿ ವಿಮಾನಯಾನ ಸೇವೆ ನೀಡಲಿದೆ.

ಸುಲಭದರ್ಶನಕ್ಕೆ ಮಾಡಬೇಕಾದ್ದು
ಬ್ಯಾಗ್‌ಗಳು ಅಥವಾ ಯಾವುದೇ ವಸ್ತುಗಳನ್ನು ಹೊಟೇಲ್‌, ಅತಿಥಿ ಗೃಹ, ಧರ್ಮಶಾಲೆಗಳಲ್ಲೇ ಇಟ್ಟು ಆಗಮಿಸಿ
ಶೂ, ಚಪ್ಪಲಿಗಳನ್ನು ಧರಿಸಬೇಡಿ ಹಾಗೂ ಮೊಬೈಲ್‌ ಮತ್ತು ವಾಚ್‌ಗಳನ್ನು ಕೊಂಡೊಯ್ಯಬೇಡಿ
ದೇವಸ್ಥಾನದ ಆವರಣದಲ್ಲೇ ಲಾಕರ್‌ ಸೌಲಭ್ಯ ಇದೆ ಅಗತ್ಯವಿದ್ದಲ್ಲಿ ಆ ಸೌಲಭ್ಯ ಬಳಸಿಕೊಳ್ಳಬಹುದು

Advertisement
Advertisement

Udayavani is now on Telegram. Click here to join our channel and stay updated with the latest news.

Next