ಬಾದಾಮಿ: ಎಲ್ಲರೂ ಸೊಳ್ಳೆ ಪರದೆ ಬಳಸುವ ಮೂಲಕ ಮಲೇರಿಯಾ ರೋಗ ಹರಡದಂತೆ ಮುನ್ನಚ್ಚರಿಕೆ ವಹಿಸಬೇಕೆಂದು ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ್ ಸಲಹೆ ನೀಡಿದರು. ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ರೋಗದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು. ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ. 2025ಕ್ಕೆ ಮಲೇರಿಯಾ ಮುಕ್ತ ಸಮಾಜ ಮಾಡಲು ಪಣ ತೊಡೋಣ ಎಂದು ಹೇಳಿದರು.
ತಾಲೂಲಿ ಆರೋಗ್ಯಾಧಿಕಾರಿ ಡಾ| ಎಂ.ಬಿ.ಪಾಟೀಲ ಮಾತನಾಡಿ, ಮುಂದುವರಿದ ರಾಷ್ಟ್ರಗಳಲ್ಲಿ ಅಸಾಂಕ್ರಾಮಿಕ ರೋಗಗಳು ಹೆಚ್ಚು ಬೆಳವಣಿಗೆ ಇರುತ್ತವೆ. ಇನ್ನುಳಿದ ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ರೋಗಗಳಿಂದ ಬಳಲುವಂತಾಗಿದೆ. ಇದನ್ನು ನಿಯಂತ್ರಿಸುವುದೇ ಆರೋಗ್ಯ ಇಲಾಖೆಯ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರಾದೇಶಿಕ ಆರೋಗ್ಯ ಇಲಾಖೆಯ ಅಧಿಕಾರಿ ಡಾ| ಕೆ.ಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜ್ವರಪೀಡಿತ ರೋಗಿಗಳನ್ನು ಪತ್ತೆ ಹಚ್ಚುವುದು, ರಕ್ತ ಲೇಪನ ಸಂಗ್ರಹಿಸುವುದು, ಪರೀಕ್ಷಿಸುವುದು, ಫಲಿತಾಂಶ ಬಂದ ನಂತರ ಸೂಕ್ತ ಚಿಕಿತ್ಸೆ ನೀಡುವುದು, ನಿಂತ ನೀರಿನ ತಾಣಗಳನ್ನು ಪತ್ತೆ ಹಚ್ಚುವುದು, ಸೊಳ್ಳೆ ಮರಿಗಳನ್ನು ಪತ್ತೆ ಹಚ್ಚಿ ನಾಶ ಮಾಡುವುದು, ಸೊಳ್ಳೆಗಳು ಕಚ್ಚದಂತೆ ಸ್ವಯಂ ಪ್ರೇರಿತ ವಿಧಾನಗಳನ್ನು ಅನುಸರಿಸುವುದು ಮತ್ತು ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ನಡೆಯುವುದರಿಂದ ಮಲೇರಿಯಾ ಮುಕ್ತ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ, ಪುರಸಭೆ ಸದಸ್ಯ ನಾಗರಾಜ ಕಾಚೆಟ್ಟಿ, ಕೆ.ಪಿ. ಹಂಪಿಹೊಳಿ, ಎ.ಜಿ.ನೀಲವಾಣಿ ಮಾತನಾಡಿದರು. ಜಿಲ್ಲಾ ಕೀಟ ಶಾಸ್ತ್ರಜ್ಞರಾದ ಡಾ| ಎಲ್.ವಿ.ಹಿರೇಗೌಡರ, ಎಂ.ಎಲ್. ಹಸರಡ್ಡಿ ಉಪನ್ಯಾಸ ನೀಡಿದರು. ಜಿ.ವಿ.ಜೋಶಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಪಿ.ಎಚ್. ಮಹಾಲಿಂಗಪುರ ಸ್ವಾಗತಿಸಿದರು. ಮಂಜು ಅಂಗಡಿ ನಿರೂಪಿಸಿದರು. ಬಿ.ಎಸ್.ಹದ್ಲಿ ವಂದಿಸಿದರು.