ಲೋಕಾಪುರ: ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಖ್ಯಾತನೇತ್ರ ತಜ್ಞ ಡಾ| ಎನ್.ಬಿ. ಮುನ್ನೋಳ್ಳಿ ಹೇಳಿದರು. ನಾಗಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಂದಾಲ್ ಕಂಪನಿ ವತಿಯಿಂದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನ ದೇಹದಲ್ಲಿ ಕಣ್ಣು ಅತೀ ಸೂಕ್ಷ್ಮ ವಸ್ತುವಾಗಿದೆ. ಕಣ್ಣಿನಲ್ಲಿ ಹಲವಾರು ದೋಷಗಳನ್ನು ಕಂಡು ಬರುತ್ತವೆ.
ಪ್ರತಿಯೊಬ್ಬರು ಉತ್ತಮ ಆಹಾರ ಸೇವಿಸಿ ತಮ್ಮ ಕಣ್ಣಿನ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ವಯೋವೃದ್ಧರಿಗೆ, ಜಿಂದಾಲ್ ಕಂಪನಿ ವತಿಯಿಂದ ಗ್ರಾಮಸ್ಥರಿಗೆ ಅನುಕೂಲವಾಗಲು ಎಂದು ಉಚಿತ ಕಣ್ಣಿನ ತಪಾಸಣೆ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಯುವ ಮುಖಂಡ ಬಾಬಾಗೌಡ ಪಾಟೀಲ ಮಾತನಾಡಿ ಮನುಷ್ಯ ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಜಿಂದಾಲ್ ಕಂಪನಿ ಆಯೋಜಿಸಿರುವ ಉಚಿತ ಕಣ್ಣಿನ ತಪಾಸಣಾ ಶಿಬಿರಗಳು ಜನತೆಗೆ ಸಹಕಾರಿಯಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಲು ಹೇಳಿದರು.
ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ತಪಾಸಣೆ ಮಾಡಿದ ಶಿಬಿರಾರ್ಥಿಗಳಿಗೆ ಮುಧೋಳದ ಮುನ್ನೋಳ್ಳಿ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಿತು. ಜಿಂದಾಲ್ ಕಂಪನಿ ವ್ಯವಸ್ಥಾಪಕ ಚಿದಾನಂದ ಪಡೆದಪ್ಪನವರ, ಶಿವನಗೌಡ ಪಾಟೀಲ, ಸುಭಾಷ ಪಾಟೀಲ, ಪುಂಡಲೀಕ ಪಾಟೀಲ, ಲೋಕಣ್ಣ ಕೃಷ್ಣ ಗೌಡರ, ಲೋಕಣ್ಣ ಪಾಟೀಲ, ಮುಖ್ಯಶಿಕ್ಷಕ ಆರ್.ಡಿ. ತುಂಗಳ, ಶಿಕ್ಷಕ ವೃಂದ, ಶಿಬಿರಾರ್ಥಿಗಳು, ಗ್ರಾಮಸ್ಥರು ಇದ್ದರು.