Advertisement
ಖಾಸಗಿ ವಾಹನ ಕುರಿತ ಗೊಂದಲಹಲವು ವಿದ್ಯಾಸಂಸ್ಥೆಗಳು ತಮ್ಮ ಮಕ್ಕಳನ್ನು ಶಾಲೆಗೆ ಕರೆತಂದು ಮರಳಿ ಬಿಡಲು ಶಾಲಾ ವಾಹನ ವ್ಯವಸ್ಥೆ ಮಾಡಿಕೊಳ್ಳುತ್ತವೆ. ಆದರೆ ಶಾಲಾ ವಾಹನಗಳಲ್ಲಿ ಬರುವ ಮಕ್ಕಳ ಪ್ರಮಾಣ ಶೇ.30ರಷ್ಟು ಮಾತ್ರ ಇದೆ. ಉಳಿದಂತೆ ಶೇ. 70ರಷ್ಟು ಮಕ್ಕಳು ಸರಕಾರಿ ಬಸ್ಸುಗಳು, ಖಾಸಗಿ ಬಾಡಿಗೆ ರಿಕ್ಷಾ, ಜೀಪುಗಳನ್ನು ಅವಲಂಬಿಸಿದ್ದಾರೆ. ಗ್ರಾಮಾಂತರ ಮಕ್ಕಳು ಈ ವ್ಯವಸ್ಥೆಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಕ್ಕಳನ್ನು ಕರೆದೊಯ್ಯುವಾಗ ಶಾಲಾ ಬಸ್ಸುಗಳು ಅನುಸರಿಸಬೇಕಾದ ಕ್ರಮಗಳ ಕುರಿತು RTO ಮೂಲಕ ನಿರ್ದೇಶನ ನೀಡಲಾಗಿದೆ.
– ಶಾಲಾ ಬಸ್ಸಿನ ಹಿಂಭಾಗ ಹಾಗೂ ಮುಂಭಾಗದಲ್ಲಿ ಕಡ್ಡಾಯವಾಗಿ ಶಾಲಾ ಬಸ್ಸು ಎಂದು ಬರೆದಿರಬೇಕು.
– ವಿದ್ಯಾಸಂಸ್ಥೆಗಳು ಶಾಲಾ ಬಸ್ಸಿನ ವ್ಯವಸ್ಥೆ ಕಲ್ಪಿಸಿದ್ದರೆ ಬಸ್ಸು ಶಾಲಾ ಕರ್ತವ್ಯದಲ್ಲಿದೆ ಎಂಬ ಮಾಹಿತಿಯನ್ನು ಪ್ರದರ್ಶಿಸಬೇಕು.
– ನಿಗದಿಪಡಿಸಿದ ಆಸಗಳಿಗಿಂತ ಹೆಚ್ಚು ಆಸನಗಳನ್ನು ಅಳವಡಿಸಬಾರದು
– ಪ್ರಥಮ ಚಿಕಿತ್ಸಾ ಬಾಕ್ಸ್‌ನ್ನು ಹೊಂದಿರಬೇಕು
– ಕಿಟಕಿಗಳಿಗೆ ಕಬ್ಬಿಣದ ಸರಳುಗಳನ್ನು ಅಳವಡಿಸಿರಬೇಕು
– ಅಗ್ನಿಶಮನ ಉಪಕರಣ ಹೊಂದಿರಬೇಕು
- ಶಾಲೆಯ ಹೆಸರು ಹಾಗೂ ದೂರವಾಣಿ ಸಂಖ್ಯೆ ಬರೆದಿರಬೇಕು
- ಬಾಗಿಲುಗಳು ಸಮರ್ಪಕ ಲಾಕ್ ಹೊಂದಿರಬೇಕು
- ಚಾಲಕರು 5 ವರ್ಷಗಳ ಘನ ವಾಹನ ಚಾಲನಾನುಭವ ಹೊಂದಿರಬೇಕು ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ ದಾಖಲೆ ಹೊಂದಿರಬಾರದು.
- ಸೀಟುಗಳ ಕೆಲಭಾಗದಲ್ಲಿ ಶಾಲಾ ಬ್ಯಾಗ್ ಗಳನ್ನು ಇರಿಸಲು ವ್ಯವಸ್ಥೆ ಇರಬೇಕು.
- ಬಸ್ಸುಗಳಲ್ಲಿ ಶಾಲಾ ಬೆಂಗಾವಲು ಇರಬೇಕು ಹಾಗೂ ಶಿಕ್ಷಕರೋರ್ವರು ಸುರಕ್ಷತಾ ಕ್ರಮವನ್ನು ಪರಿಶೀಲನೆ ನಡೆಸಬೇಕು.
- ಮಕ್ಕಳ ರಕ್ತ ಮಾದರಿಯ ಮಾಹಿತಿ ಇರಬೇಕು.
Related Articles
- ಮೋಟಾರು ವಾಹನ ಕಾಯಿದೆ 1988 ಕಲಂ 74ರ ಪ್ರಕಾರ ವಾಹನ ರಹದಾರಿ ಹೊಂದಿರಬೇಕು
- ವಾಹನದ ಆಸನ ಸಾಮರ್ಥ್ಯ 12+1 ಮೀರಬಾರದು. ನಿಗದಿತ ಆಸನ ಸಾಮರ್ಥ್ಯ ಬದಲಾವಣೆ ಮಾಡಿರಬಾರದು
- ಅನುಮೋದಿತ ಸ್ಪೀಡ್ ಗವರ್ನರ್ ಅಳವಡಿಸಿದ್ದು, ವೇಗಮಿತಿ ಕಿ.ಮೀ.40ಕ್ಕೆ ನಿಯಂತ್ರಿತವಾಗುವಂತೆ ಇರಬೇಕು.
- ವಾಹನವು ನೋಂದಣಿ ದಿನಾಂಕದಿಂದ 15 ವರ್ಷ ಮೀರಿರಬಾರದು
- ವಾಹನಕ್ಕೆ ಹೆದ್ದಾರಿ ಹಳದಿ ಬಣ್ಣ ಬಳಿಯಬೇಕು ಹಾಗೂ ಇತರ.
Advertisement
ಜಿಲ್ಲಾ ಸಭೆ ಕರೆದಿದ್ದೇವೆಮಕ್ಕಳ ಸುರಕ್ಷತೆಯ ಶಾಲಾ ಪ್ರಯಾಣದ ದೃಷ್ಟಿಯಿಂದ ಶಾಲೆಗಳು, ಪೋಷಕರು, ಪೊಲೀಸ್ ಇಲಾಖೆ, RTO ಸಮನ್ವಯತೆಯ ಜವಾಬ್ದಾರಿ ತೋರಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಮತ್ತು ಇತರ ಇಲಾಖೆಗಳ ಜಿಲ್ಲಾ ಸಭೆ ಕರೆದಿದ್ದೇವೆ. ತಾಲೂಕು ವ್ಯಾಪ್ತಿಗಳಲ್ಲೂ ಸೂಕ್ತ ನಿರ್ದೇಶನ ನೀಡಲಿದ್ದೇವೆ.
– ಶಶಿಕಾಂತ ಸೆಂಥಿಲ್, ದ.ಕ. ಜಿಲ್ಲಾಧಿಕಾರಿ ಶಾಲೆಗಳಿಗೆ ನಿರ್ದೇಶನ
ಶಾಲೆಗಳಲ್ಲಿರುವ ಮಕ್ಕಳ ಸುರಕ್ಷಾ ಸಮಿತಿಯ ಸಭೆ ಕರೆಯಬೇಕು. ಈ ಸಮಿತಿಯಲ್ಲಿ ವಾಹನಗಳಲ್ಲಿ ಬರುವ ಮಕ್ಕಳ ಮಾಹಿತಿ, ಕೈಗೊಂಡಿರುವ ಸುರಕ್ಷತೆ ಕ್ರಮಗಳ ಕುರಿತು ಮಾಹಿತಿ ಇರಬೇಕು. ಈ ನಿಟ್ಟಿನಲ್ಲಿ ಸಭೆ ಕರೆದು ಸೂಕ್ತ ನಿರ್ದೇಶನ ನೀಡಲಾಗುವುದು.
– ಸುಕನ್ಯಾ ಡಿ.ಎನ್., ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು ನಿಯಮ ಪಾಲನೆ
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಶಾಲಾ ವಾಹನಗಳಲ್ಲಿ ಸುರಕ್ಷತೆ ಕ್ರಮಗಳನ್ನು ಅನುಷ್ಠಾನಿಸುವ ಕುರಿತ RTO ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ನಿಯಮ ಮೀರಿದವರಿಗೆ ಶಿಕ್ಷೆ, ದಂಡ ವಿಧಿಸಲಾಗುತ್ತದೆ. ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕೊಂಡೊಯ್ಯದಂತೆ ನಿಯಮವಿದ್ದರೂ ಸಣ್ಣ ನಗರಗಳಲ್ಲಿ ಸಿಟಿ ಬಸ್ಸು ವ್ಯವಸ್ಥೆ ಇಲ್ಲದಿರುವುದರಿಂದ ವಿನಾಯಿತಿ ನೀಡಲಾಗುತ್ತಿದೆ. ಆದರೆ ಮಕ್ಕಳನ್ನು ಮಿತಿಯಲ್ಲಷ್ಟೇ ಕೊಂಡೊಯ್ಯಬೇಕು.
– ಫೆಲಿಕ್ಸ್ ಡಿ’ಸೋಜಾ, RTO, ಪುತ್ತೂರು — ರಾಜೇಶ್ ಪಟ್ಟೆ