Advertisement

ಜವಾಬ್ದಾರಿ ಅರಿತು ಮುನ್ನಡೆಯಿರಿ: ಅಂಗಾರ 

04:05 PM Oct 31, 2017 | |

ಕಡಬ: ಪ್ರಾಮಾಣಿಕ ಮನಸ್ಸಿನಿಂದ ಜನರು ನೀಡಿದ ಅವಕಾಶವನ್ನು ಉಪಯೋಗಿಸಿಕೊಂಡು ಜನಹಿತಕ್ಕಾಗಿ
ಶ್ರಮಿಸುವ ಜನಪ್ರತಿನಿಧಿಗಳಿಗೆ ಜನರು ನಿಜವಾದ ಗೌರವವನ್ನು ಸಲ್ಲಿಸುತ್ತಾರೆ. ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕು ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌. ಅಂಗಾರ ಅವರು ನುಡಿದರು.

Advertisement

3.80 ಕೋಟಿ ರೂ. ವೆಚ್ಚದಲ್ಲಿ ಕೊಣಾಜೆಯಿಂದ ಮರ್ದಾಳವನ್ನು ಮರ್ದಾಳ- ಸುಬ್ರಹ್ಮಣ್ಯ ರಸ್ತೆಯ ಐತ್ತೂರು ಬಳಿ ಸಂಪರ್ಕಿಸುವ ಜಿ.ಪಂ. ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರ ವೇರಿಸಿ ಅವರು ಮಾತನಾಡಿದರು. ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆಯಬೇಕಾದರೆ ಊರ ಜನರ ಸಹಕಾರ ಅಗತ್ಯ. ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುವ ವೇಳೆ ಜಮೀನಿನ ತಕರಾರುಗಳು ಎದುರಾಗಿ ಕಾಮಗಾರಿಗೆ ಅಡಚಣೆಯಾಗದ ರೀತಿಯಲ್ಲಿ ಸ್ಥಳೀಯ ಪ್ರಮುಖರು ಮುತುವರ್ಜಿ ವಹಿಸಬೇಕು. ಸರಕಾರಿ ಅನುದಾನ ಸದ್ಬಳಕೆಯಾಗಬೇಕು ಎಂದು ಸಲಹೆ ನೀಡಿದರು.

ಕ್ರಮ ಕೈಗೊಳ್ಳಲಾಗುವುದು
ಈಗಾಗಲೇ ಕೊಣಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಮತ್ತಷ್ಟು ಅಭಿವೃದ್ಧಿ ಕೆಲಸಗಳ ಬೇಡಿಕೆ ಗ್ರಾಮಸ್ಥರಿಂದ ಬಂದಿದೆ. ಕಾರ್ಯಗತ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಜೆಪಿ ಕಡಬ ಶಕ್ತಿಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್‌ ಮಾತನಾಡಿ, ಶಾಸಕರ ಮೂಲಕ ಕಡಬ
ಭಾಗಕ್ಕೆ ಅನುದಾನಗಳ ಮಹಾ ಪೂರವೇ ಹರಿದುಬಂದಿವೆ. ಅನುದಾನ ಬಿಡುಗಡೆಗೆ ಮೊದಲೇ ಕಾಮಗಾರಿಗಳ ಶಂಕುಸ್ಥಾಪನೆ ನಡೆಸಿ ಬಳಿಕ ಅತ್ತ ತಿರುಗಿಯೂ ನೋಡದ ಜನಪ್ರತಿನಿಧಿಗಳ ನಡುವೆ ನೀಡಿದ ಭರವಸೆಗಳನ್ನು ಪ್ರಾಮಾಣಿಕವಾಗಿ ನೆರವೇರಿಸಿ ಕೊಡುವ ನಮ್ಮ ಶಾಸಕ ಎಸ್‌. ಅಂಗಾರ ಅವರು ಭಿನ್ನವಾಗಿ ನಿಲ್ಲುತ್ತಾರೆ. ತನ್ನ ಸ್ವಂತ
ವರ್ಚಸ್ಸಿನ ಮೂಲಕ ಅನುದಾನಗಳನ್ನು ತರಿಸಿಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡಿಸುತ್ತಿರುವ ಶಾಸಕರ ಕೆಲಸ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

 ತಾ.ಪಂ. ಸದಸ್ಯೆ ಪಿ.ವೈ. ಕುಸುಮಾ, ಎಪಿಎಂಸಿ ಸದಸ್ಯರಾದ ಪುಲಸ್ತ್ಯಾ  ರೈ, ಮೇದಪ್ಪ ಗೌಡ ಡೆಪ್ಪುಣಿ, ಕಡಬ
ಶಕ್ತಿಕೇಂದ್ರದ ಪ್ರ. ಕಾರ್ಯದರ್ಶಿ ಪ್ರಕಾಶ್‌ ಎನ್‌.ಕೆ., ಮಾಜಿ ಅಧ್ಯಕ್ಷ ಸತೀಶ್‌ ನಾಯಕ್‌ ಕಡಬ, ಕೊಣಾಜೆ ಗ್ರಾ.ಪಂ.
ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಯಶೋಧರ ಗೌಡ ಕೊಣಾಜೆ, ಸದಸ್ಯರಾದ ಚಂದ್ರಾವತಿ, ಪುಷ್ಪಕುಮಾರಿ, ಪೊಡಿಯ ಗೌಡ, ಮಾಜಿ ಸದಸ್ಯ ಸಂಜೀವ ಪೂಜಾರಿ, ವಾಸುದೇವ ಭಟ್‌ ಕಡ್ಯ, ಚಂದ್ರಶೇಖರ ಗೌಡ ಕಡಂಪಳ, ಮೋಹನದಾಸ್‌, ಸುಂದರ ಗೌಡ ದೊಡ್ಡಮನೆ, ರೋಹಿತ್‌ ಶಿರಾಡಿ, ಪದ್ಮನಾಭ ಗೌಡ ಮಳೇಲ, ಶಂಕರ ಸಿ.ಆರ್‌. ಕಾಲನಿ, ಗಿರಿಜಾ, ಯೋಗಿತಾ, ಮೀನಾಕ್ಷಿ ಕನಿಯ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next