Advertisement

ಸುಧಾರಿತ ಗಸ್ತು ವ್ಯವಸೆ ಲಾಭ ಪಡೆಯಿರಿ

03:21 PM Jul 06, 2017 | |

ಕಲಬುರಗಿ: ಸುಧಾರಿತ ಗಸ್ತು ವ್ಯವಸ್ಥೆಯು ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯ ಸಂಬಂಧ ಸುಧಾರಣೆಗೆ
ರಹದಾರಿಯಾಗಲಿದ್ದು, ಇದರಿಂದ ಅಪರಾಧ ತಡೆಯಲ್ಲಿ ನೆರವಾಗಲಿದೆ ಎಂದು ಎಸ್‌ಪಿ ಎನ್‌.ಶಶಿಕುಮಾರ ಹೇಳಿದರು.

Advertisement

ನಗರದ ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸುಧಾರಿತ ಗಸ್ತು ವ್ಯವಸ್ಥೆ ಹಾಗೂ 
ನಾಗರಿಕರ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಸುಧಾರಿತ ಗಸ್ತು ವ್ಯವಸ್ಥೆಯು ಜನರ ಹಾಗೂ ಪೊಲೀಸರ ಮಧ್ಯ ಸ್ನೇಹ ಸೇತುವಾಗಲಿದೆ. ಈ ವ್ಯವಸ್ಥೆ ಪೊಲೀಸ್‌ ಜನಸ್ನೇಹಿಯಾಗಲು ಸಾಧ್ಯವಾಗಲಿದೆ ಎಂದರು. ಅಪರಾಧಗಳನ್ನು ತಡೆಯುವಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಕೂಡಿ ಕೆಲಸ ಮಾಡಿದಾಗ ಮಾತ್ರ ಅದು ಸಾಧ್ಯ ಎಂದರು.

ಸ್ಟೇಷನ್‌ ಬಜಾರ್‌ ಠಾಣೆ ವ್ಯಾಪ್ತಿಯಲ್ಲಿ 50 ಬೀಟ್‌ಗಳಿವೆ. ಪ್ರತಿಯೊಂದು ಬೀಟ್‌ಗೆ ಪೊಲೀಸರು ಬಂದಾಗ ಅವರನ್ನು ಪೊಲೀಸರೆಂದು ಕಾಣದೇ ಅವರು ನಿಮ್ಮಂತೆ, ನಿಮ್ಮೊಳಗಿನವರೊಬ್ಬರು ಎಂದು ತಿಳಿದು ಅವರೊಂದಿಗೆ ಬೀಟ್‌
ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಅಪರಾಧ ಚಟುವಟಿಕೆ ಬಗ್ಗೆ ಮಾಹಿತಿ ಹಂಚಿಕೊಂಡರೆ ಅಪರಾಧ ತಡೆ ಸಾಧ್ಯ ಎಂದರು.
ಎ ಉಪವಿಭಾಗದ ಡಿಎಸ್‌ಪಿ ಜಾಹ್ನವಿ, ಸ್ಟೇಷನ್‌ ಬಜಾರ್‌ ಪಿಐ ಗಂಗಾಧರಯ್ಯ ಹಾಗೂ ಸಿಬ್ಬಂದಿ, ಪ್ರತಿ ಬೀಟ್‌
ನಿಂದ ಐವರಂತೆ ಸುಮಾರು 200 ಜನ ಸಾರ್ವಜನಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next