Advertisement

ಉನ್ನತ ವ್ಯಾಸಂಗದ ಲಾಭ ಪಡೆಯಿರಿ

11:55 AM Mar 31, 2018 | |

ಕಲಬುರಗಿ: ಗುರುಪಾದೇಶ್ವರ ಪದವಿ ಪೂರ್ವ ಕಾಲೇಜು ನೀಡುತ್ತಿರುವ ಸಿಇಟಿ ಮತ್ತು ನೀಟ್‌ ತರಬೇತಿ ಹಾಗೂ ಮಾರ್ಗದರ್ಶನದಿಂದ ಹೆಚ್ಚು ಅಂಕ ಪಡೆದು ಉಚಿತ ಸೀಟು ಪಡೆಯುವಂತೆ 2016ರಲ್ಲಿ ನೀಟ್‌ ಪರೀಕ್ಷೆಯಲ್ಲಿ ಅಂಗವಿಕಲ ಕೋಟಾದಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್‌ ಪಡೆದ ವಿದ್ಯಾರ್ಥಿ ಶಿವಾನಂದ ಸೊನಾವನೆ ಸಲಹೆ ನೀಡಿದರು.

Advertisement

ನಗರದ ಹಳೆ ಜೇವರ್ಗಿ ರಸ್ತೆಯಲ್ಲಿನ ಗುರುಪಾದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್‌ ಪರೀಕ್ಷಾರ್ಥಿಗಳನ್ನು ಕುರಿತು ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮದಿಂದ ಸತತವಾಗಿ ಓದಿದರೆ ಮಾತ್ರ ಮೆಡಿಕಲ್‌ ಸೀಟು ಪಡೆಯಲು ಸಾಧ್ಯ. ನನಗೆ ಮಾರ್ಗದರ್ಶನ ಮಾಡುತ್ತಿರುವ ಕಾಲೇಜಿನ ಸಂಸ್ಥಾಪಕ ಅಂಬಲಗಿ ಅವರ ಮಾರ್ಗದರ್ಶನ ಪಡೆದು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು, ವಿಶೇಷವಾಗಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ತೆರಳಬೇಕೆಂದು ಹೇಳಿದರು.

ಉದ್ಯಮಿ ಸುರೇಶ ಮಹಾಗಾಂವಕರ ಭಗವಾನ ಮಹಾವೀರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ಸಂಸ್ಥೆ ವರದಾನವಾಗಿದೆ ಎಂದರು. ಉಪನ್ಯಾಸಕ ಶಿವಕುಮಾರ ಗೋಣಗಿಕರ ಮಹಾವೀರನ ಕುರಿತು ಉಪನ್ಯಾಸ ನೀಡಿದರು.

ಸಂಸ್ಥೆಯ ಸಂಸ್ಥಾಪಕ ಎಂ.ಬಿ.ಅಂಬಲಗಿ ಮಾತನಾಡಿ, ಸಿಇಟಿ, ನೀಟ್‌ ತರಬೇತಿ ಪಡೆಯುತ್ತಿರುವವರಿಗೆ ಸಹಕರಿಸುವ ಭರವಸೆ ನೀಡಿದರು. ಸಂಸ್ಥೆಯಿಂದ ಶಿವಾನಂದ ಸೊನಾವನೆ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಪವಿತ್ರರೆಡ್ಡಿ, ಉಪನ್ಯಾಸಕರಾದ ಶೃತಿ ಮಹಾಜನ, ರೂಪಾ ಸಣ್ಣಮನಿ, ಜಗದೇವಿ ಹಿರೇಮಠ, ಪಲ್ಲವಿ ಮಠ, ರಾಚಪ್ಪ ರೊಳೆ, ಕೈಲಾಸ ಹಳ್ಳಿಕರ, ಶಾಂತಯ್ಯ ಹಿರೇಮಠ ಹಾಗೂ ಇತರರಿದ್ದರು. ಭಾಗ್ಯಶ್ರೀ ನಿರೂಪಿಸಿ, ಸ್ವಾಗತಿಸಿದರು, ಶಾಂತಯ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next