Advertisement

ಆರೋಗ್ಯ ಯೋಜನೆಗಳ ಲಾಭ ಪಡೆಯಿರಿ

03:13 PM Apr 27, 2022 | Team Udayavani |

ಹುಕ್ಕೇರಿ: ಪ್ರತಿಯೊಬ್ಬರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆಯುಷ್ಯಮಾನ್‌ ಭಾರತ ಆರೋಗ್ಯ ಯೋಜನೆ ಜಾರಿಗೆ ತಂದಿದ್ದರಿಂದ ಎಲ್ಲರಿಗೂ ಅನುಕೂಲವಾಗಿದೆಂದು ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

Advertisement

ಅವರು ಮಂಗಳವಾರ ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕಾ ಆಡಳಿತ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ತಾಲೂಕ ಮಟ್ಟದ ಉಚಿತ ಆರೋಗ್ಯ ಮೇಳ ಹಾಗೂ ರಾಷ್ಟೀಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಸಮಾಜಮುಖೀಯಾಗಿ ಬದುಕಲು ಆರೋಗ್ಯ ಮುಖ್ಯ. ಒತ್ತಡದ ಜೀವನದಲ್ಲಿ ಆರೋಗ್ಯದಿಂದ ದೂರ ಉಳಿಯುತ್ತಿದ್ದೇವೆ. ಆರೋಗ್ಯ ಯೋಜನೆಗಳು ಪ್ರತಿ ಮನೆಗೆ ಮುಟ್ಟಬೇಕು ಆ ದಿಶೆಯಲ್ಲಿ ಸರ್ಕಾರ ಹೆಜ್ಜೆ ಇಡಬೇಕಾಗಿದೆ. ತಾಲೂಕಿನಲ್ಲಿ ಉತ್ತಮ ಸುಸಜ್ಜಿತ ಸರಕಾರಿ ಆಸ್ಪತ್ರೆಗಳಗೆ ಮೂಲ ಭೂತ ಸೌಲಭ್ಯ ಹಾಗೂ ಪ್ರತ್ಯೇಕ ತಾಯಿ- ಮಗು ಹೊಸ ಆಸ್ಪತ್ರೆ ಮಂಜೂರಾತಿಯಲ್ಲಿ ಅರಣ್ಯ ಸಚಿವ ಉಮೇಶ ಕತ್ತಿ ಅವರ ಸೇವೆ ಅನನ್ಯವೆಂದರು.

ತಮ್ಮ ತಂದೆ ತಾಯಿ ಸ್ಮರಣಾರ್ಥ ವಿಶ್ವ ರಾಜೇಶ್ವರಿ ಟ್ರಸ್ಟ್‌ನಿಂದ ಹುಕ್ಕೇರಿ ಸರಕಾರಿ ಆಸ್ಪತ್ರೆಗೆ ಎರಡು ಡಯಾಲಿಸಿಸ್‌ ಯಂತ್ರ, ರಕ್ತ ಭಂಡಾರ, ಶುದ್ಧ ನೀರಿನ ಘಟಕ ಜೊತೆಗೆ ಆಕ್ವಾ ಗಾರ್ಡ್‌ ಹಾಗೂ ಹುಕ್ಕೇರಿ-ಸಂಕೇಶ್ವರ ಸರಕಾರಿ ಆಸ್ಪತ್ರೆಗಳ ರೋಗಿಗಳಗೆ ದಿನ ನಿತ್ಯ ಊಟದ ವ್ಯವಸ್ಥೆ ಮಾಡಲಾಗುವುದು. ತಾಲೂಕಿನ ವೈದ್ಯಾಧಿಕಾರಿಗಳ ಸಹಕಾರದಿಂದ ಜಿಲ್ಲೆಯಲ್ಲಿ ಮಾದರಿ ಸರಕಾರಿ ಆಸ್ಪತ್ರೆಯಾಗಿ ರೂಪಿಸಲು ಪ್ರಯತ್ನಿಸಲಾಗುವುದು. ಸಾರ್ವಜನಿಕರು ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಮದು ವಿನಂತಿಸಿದರು.

ಸಭೆಯಲ್ಲಿ ಬೈಲಹೊಂಗಲದ ರಾಮಣ್ಣವರ ಟ್ರಸ್ಟ್‌ಗೆ 4 ಜನ ನೇತ್ರದಾನ, 4 ಜನ ದೇಹದಾನ ಹಾಗೂ ಅಂಗಾಂಗ ದಾನ ಮಾಡಲು ಮುಂದಾದ ಒಬ್ಬರನ್ನು ಸನ್ಮಾನಿಸಲಾಯಿತು. ರಾಮಣ್ಣನವರ ಟ್ರಸ್ಟ್‌ ಅಧ್ಯಕ್ಷ ಡಾ| ರಾಮಣ್ಣವರ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಆನಂದ ಗಂಧ ಅಧ್ಯಕ್ಷತೆ ವಹಿಸಿದ್ದರು.

Advertisement

ತಹಶೀಲ್ದಾರ್‌ ಡಿ.ಎಚ್‌ ಹೂಗಾರ, ಇಓ ಉಮೇಶ ಸಿದ್ನಾಳ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಶಶಿಕಾಂತ ಮುನ್ಯಾಳ,ಡಾ..ಬಿ ಎನ್‌ ತುಕ್ಕಾರ, ಡಾ.ಶಾಮಲಾ ಪೂಜೇರಿ, ಮುಖ್ಯ ವೈದ್ಯಾಧಿಕಾರಿ ಡಾ.ಎಮ್‌ ಎಮ್‌ ನರಸನ್ನವರ ಆರೋಗ್ಯ ಸಮಿತಿ ಸದಸ್ಯರಾದ ಸತ್ಯಪ್ಪಾ ನಾಯಿಕ ,ಪರಗೌಡ ಪಾಟೀಲ. ಗುರುಕುಲಕರ್ಣಿ ,ವಿದ್ಯುತ್‌ ಸಂಘದ ನಿರ್ದೆಶಕ ಜಯಗೌಡ ಪಾಟೀಲ. ಪುರಸಭೆ ಸದಸ್ಯರಾದ ಭೀಮಸಿ ಗೋರಕನಾಥ ರಾಜು ಮುನ್ನೋಳಿ. ಮುಖ್ಯಾಕಾರಿ ಮೋಹನ ಜಾಧವ. ಬಿಇಓ ಮೋಹನ ದಂಡಿನ,ಸಿಡಿಪಿಓ ಮಂಜುನಾಥ ಪರಸನ್ನವರ, ನೋಡಲ್‌ ಅಧಿಕಾರಿ ಚಾಂದಣಿ ದೇವಡಿ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕೋಡಿ ಆಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಪ್ಪ ಗಡೆದ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಾ ಆರೋಗ್ಯಾಧಿಕಾರಿ ಡಾ.ಉದಯ ಕುಡಚಿ ಸ್ವಾಗತಿಸಿದರು. ಜನರಿಗೆ ಆಯುಷ್ಮಾನ್‌ ಭಾರತ ಕಾರ್ಡ್‌ ವಿತರಿಸಲಾಯಿತು. ವಿಶ್ವರಾಜ ಟ್ರಸ್ಟ್‌ ವತಿಯಿಂದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿನ ಆಶಾ, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು. ಜಿ.ಎ.ಕರಗುಪ್ಪಿ ನಿರೂಪಿಸಿದರು. ಬಸ್ಸಾಪುರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next