Advertisement

ಆರೋಗ್ಯ ತಪಾಸಣೆ ಲಾಭ ಪಡೆಯಿರಿ

04:56 PM Mar 12, 2018 | |

ಕೆಂಭಾವಿ: ಗ್ರಾಮೀಣ ಬಡ ಜನರು ಅತ್ಯಾಧುನಿಕ ಆರೋಗ್ಯ ತಪಾಸಣೆಗೆ ನಗರ ಪ್ರದೇಶಗಳಿಗೆ ಹೋಗಿ ಬರುವುದರಿಂದ ಆರ್ಥಿಕ ಹೊರೆಯೊಂದಿಗೆ ಹಲವು ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ. ಇದನ್ನು ಮನಗಂಡು ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಕೈಗೊಳ್ಳಲಾಗಿದ್ದು, ಜನತೆ ಇದನ್ನು ಸದುಪಯೋಗ ಪಡೆದುಕೊಳ್ಳುವಂತೆ ಖ್ಯಾತ ಮಕ್ಕಳ ತಜ್ಞ ಡಾ| ಸುದತ್‌ ದರ್ಶನಾಪುರ ಕರೆ ನೀಡಿದರು.

Advertisement

ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಸ್ಪರ್ಶ ಆಸ್ಪತ್ರೆ ಬೆಂಗಳೂರು, ಬಾಪುಗೌಡ ದರ್ಶನಾಪೂರ ಎಜುಕೇಶನ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಸ್ಪಂದನ ಆಸ್ಪತ್ರೆ ಶಹಾಪುರ ಅವರ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂಬರುವ ದಿನಗಳಲ್ಲಿ ಗ್ರಾಮೀಣ ಜನತೆ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳುವುದರ ಜೊತೆಗೆ ಟ್ರಸ್ಟ್‌ ವತಿಯಿಂದ ಗ್ರಾಮೀಣ ಭಾಗದ ಜನರ ಮನೆಬಾಗಿಲಿಗೆ ಉಚಿತ ಉತ್ತಮ ಆರೋಗ್ಯ ಸೇವೆ ನೀಡುವ ಕನಸು ನಮ್ಮದಾಗಿದೆ ಎಂದ ಅವರು, ಪಟ್ಟಣದಲ್ಲಿ ಪ್ರತಿವರ್ಷ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
 
ಖ್ಯಾತ ಮೂಳೆ ತಜ್ಞ ಡಾ| ವೀರೇಶ ಜವಳಿ ಮಾತನಾಡಿ, ಇಂದಿನ ಆಧುನಿಕ ವೈದ್ಯಪದ್ಧತಿ ಸಾಕಷ್ಟು ಬೆಳವಣಿಗೆ ಹೊಂದಿದ್ದು, ಸೂಕ್ತ ಚಿಕಿತ್ಸೆ ಪಡೆಯುವುದರ ಮೂಲಕ ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ
ನೀಡಿದರು. 

ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಮಕ್ಕಳ ಕಾಯಿಲೆ, ಮೆದುಳು ಮತ್ತು ಬೆನ್ನು ಹುರಿ, ಎದೆಗೂಡಿನ ಸಮಸ್ಯೆ ಸೇರಿದಂತೆ ಹಲವು ರೋಗಗಳಿಗೆ ಉಚಿತ ತಪಾಸಣೆ ಮಾಡಲಾಯಿತು.

ಡಾ| ಎಸ್‌.ಆರ್‌. ಸಿನ್ನೂರ, ಡಾ|ಅನಮೋಲ್‌, ಡಾ| ಸೌಮ್ಯ, ಡಾ| ಕುಲಜೀತ್‌, ಡಾ| ಮುಖೇಶ, ಡಾ| ಕಟ್ಟಿಮನಿ, ಡಾ| ಕಿರಣ ಜಕರಡ್ಡಿ ಸೇರಿದಂತೆ ಹಲವು ತಜ್ಞ ವೈದ್ಯರಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಶಿಬಿರದ ಸದುಪಯೋಗ ಪಡೆದುಕೊಂಡರು. 

Advertisement

20 ಜನರನ್ನು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಉಚಿತ ಹೃದಯ ಶಸ್ತ್ರ ಚಿಕಿತ್ಸೆಗೆ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಾಂತಗೌಡ ನೀರಲಗಿ, ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ನಿರ್ದೇಶಕ ವೈ.ಟಿ. ಪಾಟೀಲ್‌, ಶರಣಬಸ್ಸು ಡಿಗ್ಗಾವಿ, ಸಂಗನಗೌಡ ಮರಡ್ಡಿ, ಶಿವರಾಜ
ಬೂದೂರು, ಡಾ| ಯಂಕನಗೌಡ ಪಾಟೀಲ್‌, ಮೋಹನರಡ್ಡಿ ಡಿಗ್ಗಾವಿ, ಗುರುಪಾದಪ್ಪ ಕುಂಬಾರ, ಅಶೋಕ ಭಂಗ್‌, ಗೌಡಪ್ಪಗೌಡ ಯಡಿಯಾಪೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next