Advertisement

ಸರ್ಕಾರಿಯೋಜನೆಗಳ ಲಾಭ ಪಡೆಯಿರಿ

12:28 PM Oct 02, 2020 | Suhan S |

ಮಾಗಡಿ: ಮಹಿಳಾ ಸಬಲೀಕರಣಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು,ಮಹಿಳಾ ಒಕ್ಕೂಟಗಳು ಯೋಜನೆಯ ಲಾಭಪಡೆದುಕೊಂಡುಆರ್ಥಿಕವಾಗಿ ಸ್ವಾವಲಂಬನೆಯಾಗುವಂತೆ ಜಿಲ್ಲಾ ಪಂಚಾಯ್ತಿ ಸಿಇಒ ಇಕ್ರಾಂ ಮಹಿಳೆಯರಿಗೆ ಸಲಹೆ ನೀಡಿದರು.

Advertisement

ತಾಲೂಕಿನ ಗುಡೇಮಾರನಹಳ್ಳಿ ಸಮುದಾಯ ಭವನದಲ್ಲಿ ಎ.ಡಿ.ಪೈ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕೆನರಾ ಬ್ಯಾಂಕ್‌ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹಾಗೂ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಅಣಬೆ ಬೇಸಾಯ ತರಬೇತಿ ಪಡೆದ ಮಹಿಳಾ ಸಂಘದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಏನು ಬೇಕಾದರು ಸಾಧಿಸಿ ತೋರಿಸುವಂತ ಶಕ್ತಿ ಮಹಿಳೆಯರಲ್ಲಿದೆ. ಅಣಬೆ ಬೇಸಾಯ ಅತ್ಯಂತ ಹೆಚ್ಚು ಆದಾಯ ತರುತ್ತದೆ. ಅಣಬೆ ಪೌಷ್ಟಿಕವಾದ ಆಹಾರ. ಇದರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಗುಣವಿದ್ದು, ಮಹಿಳಾ ಸಂಘಗಳು ಒಟ್ಟಾಗಿ ಸೇರಿ ಅಣಬೆ ಬೇಸಾಯದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇರುವುದರಿಂದನರೇಗಾಯೋಜನೆಯಡಿಸುಮಾರು 95 ಸಾವಿರ ರೂ. ವೆಚ್ಚದಲ್ಲಿ ಶೇಡ್‌ ನಿರ್ಮಿಸಿಕೊಳ್ಳಲು ಅನುದಾನ ನೀಡಲು ಜಿಲ್ಲಾ ಪಂಚಾಯ್ತಿ ಬದ್ಧವಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಅಣಬೆಗೆ ಅತ್ಯಂತ ಹೆಚ್ಚು ಬೇಡಿಕೆ ಇರುವುದರಿಂದ ಮಹಿಳಾ ಸ್ವಸಹಾಯ ಸಂಘ ಗಳು ಅಣಬೆ ಬೇಸಾಯವನ್ನು ಉದ್ಯಮವನ್ನಾಗಿ ಅಭಿವೃದ್ಧಿಪಡಿಸಿದರೆ ಮಾರುಕಟ್ಟೆ ವ್ಯವಸ್ಥೆ ಬಹಳ ಸುಲಭವಾಗುತ್ತದೆ.ಮಹಿಳೆಯರುಸಹಧನಾತ್ಮಕವಾಗಿ ಹೆಚ್ಚು ಆಸಕ್ತಿ ವಹಿಸುತ್ತಿರುವುದನ್ನು ಶ್ಲಾ ಸಿದ ಅವರು ಮಹಿಳೆಯರ ಸಬಲೀಕರಣಕ್ಕೆ ಬೇಕಾದ ಪ್ರೋತ್ಸಾಹ, ಸಹಕಾರ ನೀಡಲು ಬದ್ಧ ಎಂದು ತಿಳಿಸಿದರು. ತಾಲೂಕುಒಕ್ಕೂಟದಅಧ್ಯಕ್ಷೆಗೌರಮ್ಮಮಾತನಾಡಿ,

ಸೋಲೂರುಹೋಬಳಿ ವ್ಯಾಪ್ತಿಯಲ್ಲಿ ನಮ್ಮ ಒಕ್ಕೂಟದ ವ್ಯಾಪ್ತಿಗೆ 6 ಮಹಿಳಾ ಸಂಘಗಳು ಬರಲಿದ್ದು, 34 ಮಹಿಳಾ ಸದಸ್ಯರು ಅಣಬೆ ಬೇಸಾಯದ ತರಬೇತ ಪಡೆದುಕೊಂಡಿದ್ದೇವೆ. ಎಲ್ಲರೂ ಇದೊಂದು ಬೃಹತ್‌ ಉದ್ಯಮವನ್ನಾಗಿ ಮಾಡಲು ತುಂಬ ಆಸಕ್ತರಾಗಿದ್ದಾರೆ. ಅಧಿಕಾರಿಗಳು ಅಗತ್ಯ ಶೇಡ್‌ ಹಾಗೂ ಆರ್ಥಿಕ ನೆರವು ನೀಡಬೇಕು. ಇದರಿಂದ ಉದ್ಯಮ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಮನವಿ ಮಾಡಿದರು.

ತಾಲೂಕು ಪಂಚಾಯ್ತಿ ಇಒ ಟಿ.ಪ್ರದೀಪ್‌ ಮಾತ ನಾಡಿ, ಗುಡೇಮಾರನಹಳ್ಳಿ ಪಂಚಾಯ್ತಿಯಿಂದ ಶೇಡ್‌ ನಿರ್ಮಿಸಿಕೊಳ್ಳಲು ನಿವೇಶನ ಕೊಡಿಸುವ ಮೂಲಕಉದ್ಯಮಕ್ಕೆಪ್ರೋತ್ಸಾಹಿಸುವುದಾಗಿಮಹಿಳಾಒಕ್ಕೂಟಕ್ಕೆ ಭರವಸೆ ನೀಡಿದರು. ಗುಡೇಮಾರನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ಹೇಮಂತಕುಮಾರ್‌, ಜಿಲ್ಲಾ ವ್ಯವಸ್ಥಾಪಕ ನಾಗರಾಜು, ಭಾರತಿ, ಮೀನಾ, ತರಬೇತಿ ದಾರರಾದ ವಿಜಯಲಕ್ಷಿ ¾à ಮಹಿಳಾ ಸದಸ್ಯರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next