Advertisement

ಹೆಚ್ಚು ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಿ; ಶಾಸಕ ಎಚ್‌.ಡಿ.ತಮ್ಮಯ್ಯ

05:56 PM Jun 19, 2024 | Team Udayavani |

■ ಉದಯವಾಣಿ ಸಮಾಚಾರ
ಚಿಕ್ಕಮಗಳೂರು: ಡೆಂಘೀ ಚಿಕಿತ್ಸೆ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆಂಬ ದೂರುಗಳು ಬರುತ್ತಿದ್ದು ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಅಶ್ವತ್‌ ಬಾಬು ಅವರಿಗೆ ಶಾಸಕ ಎಚ್‌.ಡಿ.ತಮ್ಮಯ್ಯ ಸೂಚಿಸಿದರು.

Advertisement

ಮಂಗಳವಾರ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿನ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿ ಸುವಂತೆ ಹೇಳಿದರು. ಡಾ| ಅಶ್ವತ್‌ಬಾಬು ಮಾಹಿತಿ ನೀಡಿ, ಡೆಂಘೀ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ
ಆಸ್ಪತ್ರೆಗಳಿಂದ ಪ್ರತಿನಿತ್ಯ ಮಾಹಿತಿ ಪಡೆದು ಕೊಳ್ಳಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಡೆಂಘೀ ಎಂದು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮಾಹಿತಿ ಪಡೆಯ ಲಾಗುತ್ತಿದೆ. ಅಲ್ಲಿಂದ ಬರುವ ಮಾಹಿತಿಯನ್ನು ಜಿಲ್ಲಾಸ್ಪತ್ರೆ ಯಲ್ಲಿ ಪರೀಕ್ಷೆಗೆ
ಒಳಪಡಿಸಿದಾಗ ಮೂರ್‍ನಾಲ್ಕು ಡೆಂಘೀ ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು.

ಡೆಂಘೀ ಪ್ರಕರಣಗಳು ಅಧಿಕವಾಗಿದ್ದರಿಂದ ಹಾಸಿಗೆಗಳ ಕೊರತೆ ಇದೆ ಎಂಬುದು ಗಮನಕ್ಕೆ ಬಂದಿದೆ. ಹಾಗಂತ ರೋಗಿಗಳನ್ನು ನೆಲದಲ್ಲಿ ಮಲಗಿಸಿ ಚಿಕಿತ್ಸೆ ನೀಡುತ್ತಿಲ್ಲ, ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಹಾಸಿಗೆ ಸಮಸ್ಯೆ ನಿವಾರಿಸುವಂತೆ ಜಿಲ್ಲಾ ಸರ್ಜನ್‌ ಅವರಿಗೆ ಸೂಚಿಸಲಾಗಿದೆ. ಒಂದು ವೇಳೆ ರೋಗಿಗಳ ಸಂಖ್ಯೆ ಅಧಿಕವಾದರೆ ಲೋಕೋಪಯೋಗಿ ಹಳೇ ಕಚೇರಿಯನ್ನು
ಪಡೆದುಕೊಂಡು ಅಲ್ಲಿ ಹಾಸಿಗೆ ವ್ಯವಸ್ಥೆ ಮಾಡುವ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ ಎಂದರು.

ಒಳಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿ ಕಾರಿಗಳ ಸಭೆ ನಡೆಸಲು ಬುಧವಾರ ನಗರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಆಗಮಿಸಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಈಗಾಗಲೇ ನಗರ ಸಭೆಯಲ್ಲಿ 2 ಫಾಗಿಂಗ್‌ ಯಂತ್ರಗಳಿದ್ದು, ಇನ್ನೆರಡು ಖರೀದಿಸಲು ಸೂಚಿಸಲಾಗಿತ್ತು. ಅಗತ್ಯವಿದ್ದರೆ ಮತ್ತೆರಡನ್ನು ಖರೀದಿಸಲು ತಿಳಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಅಶ್ವತ್‌ ಬಾಬು ಮಾಹಿತಿ ನೀಡಿ ಜನವರಿಯಿಂದ ಇಲ್ಲಿಯವರಗೆ ಒಟ್ಟು 385 ಡೆಂಘೀ ಪ್ರಕರಣ
ಪತ್ತೆಯಾಗಿವೆ. 195 ಪ್ರಕರಣಗಳಲ್ಲಿ 170 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 25 ಸಕ್ರಿಯ ಪ್ರಕರಣಗಳಲ್ಲಿ 10ಕ್ಕೆ ಇಳಿಮುಖವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ 4 ಪ್ರಕರಣಗಳಿವೆ. ಚಿಕ್ಕಮಗಳೂರು ತಾಲೂಕಿನಲ್ಲಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 3 ಸಭೆಗಳು ನಡೆದಿವೆ. ಡೆಂಘೀ ಪ್ರಕರಣದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

Advertisement

ಜಿಲ್ಲಾ ಸರ್ಜನ್‌ ಡಾ| ಸಿ.ಮೋಹನ್‌ಕುಮಾರ್‌ ಮಾತನಾಡಿ, ಪ್ರತಿದಿನ ಜ್ವರದ ಪ್ರಕರಣಗಳು ಬರುತ್ತಿದ್ದು, ಅವುಗಳು ವಿಷಮಶೀತ ಜ್ವರಗಳಾಗಿವೆ. ಡೆಂಘೀ ಪ್ರಕರಣದಲ್ಲಿ 9-10 ಜನರಿಗೆ ಪ್ಲೇಟ್‌ಲೆಟ್‌ ಕಡಿಮೆಯಾಗಿತ್ತು. ಈಗ ಒಬ್ಬರಿಗೆ ಮಾತ್ರ ಇದೆ ಎಂದು ತಿಳಿಸಿದರು. ತಾಲೂಕು ವೈದ್ಯಾಧಿಕಾರಿ ಡಾ| ಸೀಮಾ, ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ|ಚಂದ್ರಶೇಖರ್‌, ಡಾ| ಭರತ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next