Advertisement

ಲೂಟಿಕೋರರ ವಿರುದ್ಧ ಕ್ರಮ ಕೈಗೊಳ್ಳಿ

05:10 PM May 03, 2018 | |

ವಿಜಯಪುರ: ಖಜಾನೆ ಲೂಟಿ ಎಂದು ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಮಾತಿನಲ್ಲೇ ಸಮಯ ವ್ಯರ್ಥ ಮಾಡುತ್ತಿರುವ ಲೂಟಿಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯಾರೊಬ್ಬರೂ ಹೇಳದೇ
ಜಾಣ ನಡೆ ಅನುಸರಿಸುತ್ತಿವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಬುಧವಾರ ವಿಜಯಪುರ ನಗರದ ದರಬಾರ ಹೈಸ್ಕೂಲ್‌ ಮೈದಾನದಲ್ಲಿ ಜರುಗಿದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿಗದತಿ ಸಮಯಕ್ಕಿಂತ ವಿಳಂಬವಾಗಿ ಬಂದಿದ್ದಕ್ಕೆ ಕ್ಷಮೆ ಕೋರಿ ಹೆಲಿಕಾಪ್ಟರ್‌ ಸಮಸ್ಯೆ ಸಮಯ ಮಿತಿ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಲು ಕಾರಣ ಎಂದು ಹೇಳಿ ಜನತೆಯ ಕ್ಷಮೆ
ಕೋರಿದರು. 

ರಾಜ್ಯದಲ್ಲಿ ಆರೂವರೆ ಕೋಟಿ ಜನರ ಬೆವರಿನ ತೆರಿಗೆ ಹಣವನ್ನು ಲೂಟಿ ಮಾಡಿದ್ದು, ಯಾರೊಬ್ಬರೂ ಈ ಬಗ್ಗೆ ಚಕಾರ ಎತ್ತಿಲ್ಲ. ಕೇಂದ್ರ-ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಪರಸ್ಪರ ಟೀಕೆಗಳಲ್ಲೇ ಸಮಯ ವ್ಯರ್ಥ ಮಾಡುತ್ತಿವೆ ಎಂದು ಟೀಕಾ ಪ್ರಹಾರ ನಡೆಸಿದರು.

ಆದರೆ ಈ ಎರಡು ಪಕ್ಷಗಳು ಕಾಲೆಳೆಯುವುದನ್ನು ಬಿಟ್ಟು ಲೂಟಿ ಪ್ರಕರಣಗಳು ಇವರ ಗಮನದಲ್ಲಿದ್ದರೆ ಹಣ ಲೂಟಿ ಮಾಡಿದವರು ಯಾರೆಂದು ಪತ್ತೆ ಹಚ್ಚಿ ಲೂಟಿಯಾದ ರಾಜ್ಯದ ಜನರ ತೆರಿಗೆ ಹಣವನ್ನು ಖಜಾನೆಗೆ ಮರಳಿ ಭರಿಸಬೇಕು.

ರಾಜ್ಯವನ್ನು ಲೂಟಿ ಹೊಡೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಹೊಣೆ ಯಾವ ಪಕ್ಷ ಹೊರಲು ಮುಂದಾಗುತ್ತಿಲ್ಲ. ಆ ಮೂಲಕ ರಾಜ್ಯದ ಜನತೆಗೆ ಉತ್ತರದಾಯಿ ಯಾರು ಎಂಬುದು ಸ್ಪಷ್ಟವಾಗಲಿದೆ ಎಂದು ಹೇಳಿದರು.

Advertisement

ಪ್ರಸಕ್ತ ಚುನವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಹೇಳಿರುವ ಕಾಂಗ್ರೆಸ್‌, ಮುಂದಿನ ಐದು ವರ್ಷದಲ್ಲಿ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿಯ ಭರವಸೆ ನೀಡಿದೆ. ಹಾಗಾದರೆ ರಾಜ್ಯದ ಜನರ ಅಧಿಕಾರ ಕೊಟ್ಟಿದ್ದ ಐದು ವರ್ಷದಲ್ಲಿ ಕಾಂಗ್ರೆಸ್‌ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು.

ಇನ್ನು ವಿಜಯಪುರ ಜಿಲ್ಲೆಯ ಉಸ್ತುವಾರಿ ಹೊತ್ತಿದ್ದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರಿಗೆ ಬಬಲೇಶ್ವರ ಕ್ಷೇತ್ರದ ಆಚೆಗೆ ಬೇರೆ ಯಾವ ತಾಲೂಕು ಕಾಣಿಸಲಿಲ್ಲ. ಬೇರೆ ಭಾಗದವರು ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ಕೇಳಿದರೆ ಜಲ ಸಂಪನ್ಮೂಲ ಸಚಿವರಿಗೆ ಹೆಚ್ಚಿನ ಆಸಕ್ತಿ ಇಲ್ಲ. ಅವರು ಕೇವಲ ಬಬಲೇಶ್ವರಕ್ಕೆ ಮಾತ್ರ ಸೀಮಿತವಾಗಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಮಾಜಿ ಸಚಿವ ಹಾಗೂ ವಿಜಯಪುರ ನಗರ ಕ್ಷೇತ್ರದ ಅಭ್ಯರ್ಥಿ ಎಸ್‌.ಕೆ. ಬೆಳ್ಳುಬ್ಬಿ, ಜೆಡಿಎಸ್‌ ಜಿಲ್ಲಾಧ್ಯಕ್ಷರಾದ ಸಿಂದಗಿ ಕ್ಷೇತ್ರದ ಅಭ್ಯರ್ಥಿ ಎಂ.ಸಿ. ಮನಗೂಳಿ, ಮೇಲ್ಮನೆ ಮಾಜಿ ಸದಸ್ಯ ಬಿ.ಜಿ. ಪಾಟೀಲ ಹಲಸಂಗಿ, ಬಸವನಬಾಗೇವಾಡಿ ಕ್ಷೇತ್ರದ ಅಭ್ಯರ್ಥಿ ಸೋಮನಗೌಡ ಪಾಟೀಲ, ಎಲ್‌.ಎಲ್‌.ಉಸ್ತಾದ, ದಿಲಾವರ ಖಾಜಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next