Advertisement
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸೋಮವಾರ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಾದಕ ವಸ್ತು ವಿರೋಧಿ ಸಪ್ತಾಹ ಸಮಾರೋಪ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಪ್ರಾಣಿಗಳಿಗಿಂತ ಮನುಷ್ಯ ಬುದ್ಧಿವಂತ ದುಶ್ಚಟಗಳಿಂದ ಆಗುವ ಅನಾಹುತದ ಅರಿವು ಇರುತ್ತದೆ. ಕೆಲವರು ಇದರ ಅರಿವು ಇದ್ದರೂ ಇದರ ದಾಸರಾಗಿರುತ್ತಾರೆ. ಇದನ್ನು ಬಿಡಲು ಮನಸ್ಸು ಮುಖ್ಯ ಎಂದ ಅವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರು ಎಲ್ಲಾ ಜಿಲ್ಲೆಗಳಲ್ಲಿ ದುಶ್ಚಟಗಳಿಗೆ ಬಲಿಯಾದವರಿಗೆ ತರಬೇತಿ ನೀಡಿ ಬಿಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ರುದ್ರಪ್ಪ ಮಾತನಾಡಿ, ಜನರಿಗೆ ದುಶ್ಚಟಗಳಿಂದ ಆಗುವ ತೊಂದರೆಗಳ ಬಗ್ಗೆ ಮಂಡಳಿ ಹಲವಾರು ಕಾರ್ಯಕ್ರಮದ ಮೂಲಕ ಜಾಗೃತಿ ಉಂಟು ಮಾಡುತ್ತಿದ್ದೇವೆ ಎಂದರು. ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ವಿ.ಪಾತರಾಜು, ಸಂಯಮ ಮಂಡಳಿಯ ಕಾರ್ಯ ಯೋಜನೆಗಳನ್ನು ತಿಳಿಸಿದರು. ಸಮಾರಂಭದಲ್ಲಿ ಕುಡಿತ ಚಟಕ್ಕೆ ವಿದಾಯ ಹೇಳಿ ಉತ್ತಮ ಜೀವನ ನಡೆಸುತ್ತಿರುವ ಪ್ರತಾಪ್ ತಮ್ಮ ಅನುಭವ ಹಂಚಿಕೊಂಡರು. ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಜಿಪಂ ಸಿಇಒ ಕೆ.ಜಿ
ಶಾಂತಾರಾಮ್, ಎಸ್ಪಿ ಡಾ.ದಿವ್ಯಗೋಪಿನಾಥ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕರಾದ ನರಸಿಂಹ ಮೂರ್ತಿ, ಮುನಿಯಪ್ಪ, ನಾಗರಾಜು, ತಿಮ್ಮಪ್ಪ ನಾಯಕ್, ಡಿಡಿಪಿಐ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಾಸಂತಿ ಉಪ್ಪಾರ್ ಮತ್ತಿತರರಿದ್ದರು.
Related Articles
ಕಲಾಕ್ಷೇತ್ರದವರೆಗೆ ಆಶಾಕಾರ್ಯಕರ್ತೆಯರು,ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು. ಈ ವೇಳೆ ಜಾಥಾಗೆ ಜಿಪಂ ಸಿಇಒ ಕೆ.ಜಿ.ಶಾಂತಾರಾಮ್ ಚಾಲನೆ ನೀಡಿದರು. ನಂತರ ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚಳ ವಿಷಾದನೀಯ ಗ್ರಾಮೀಣ ಪ್ರದೇಶದಲ್ಲಿ ಬಡತನದಿಂದ ಇರುವವರು ರೈತಾಪಿ ವರ್ಗ ದಿನವೂ ಕಷ್ಟ ಪಟ್ಟು ದುಡಿದು ದುಡಿದ ಹಣವನ್ನು ಉಳಿಸದೇ ಮದ್ಯವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇಂದು ಗ್ರಾಮೀಣ ಪ್ರದೇಶಗಳಿಗಿಂತಲೂ ಪಟ್ಟಣ ಮತ್ತು ನಗರ ಪ್ರದೇಶಗಳಿಲ್ಲಿ ಮದ್ಯ ಮತ್ತು ಮಾದಕ ಪರ್ದಾಥಗಳ ವ್ಯಸನಿಗಳು ಹೆಚ್ಚುತ್ತಿರುವುದು ವಿಷಾದನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
Advertisement