Advertisement
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಲಬುರಗಿ ವಿದ್ಯುಚ್ಛಕ್ತಿ ಸರಬರಾಜು ಕಂಪನಿ 2017-18ನೇ ಸಾಲಿನ ಕಾರ್ಯನಿರ್ವಹಣೆ ಪರಿಶೀಲನೆ ಹಾಗೂ 2019-20ನೇ ಅವಧಿಯ ಕಂದಾಯ ಬೇಡಿಕೆ ಮತ್ತು ದರ ಪರಿಷ್ಕರಣೆ ಕುರಿತು ಸಾರ್ವಜನಿಕ ಅಹವಾಲುಗಳ ವಿಚಾರಣೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ತಿಂಗಳು ಕೈಗೊಂಡ ಗ್ರಾಹಕರ ಸಭೆ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ಬಹು ಮುಖ್ಯವಾಗಿ ನೀರು ಸರಬರಾಜು ಮಂಡಳಿಯಿಂದ ಜೆಸ್ಕಾಂಗೆ ಬರಬೇಕಾಗಿರುವ 2 ಕೋಟಿ ರೂ.ಗಳು ಬಾಕಿ ಹಣವನ್ನು ಜೆಸ್ಕಾಂ ಅಧಿಕಾರಿಗಳು ಕೂಡಲೇ ಪಡೆಯಬೇಕು ಎಂದು ನಿರ್ದೇಶನ ನೀಡಿದರು.
Related Articles
Advertisement
ಅಧಿಕಾರಿಗಳು ಮಾಡಿದ ತಪ್ಪಿಗೆ ಗ್ರಾಹಕರ ಮೇಲೆ ವಿದ್ಯುಚ್ಛಕ್ತಿ ದರ ಹೆಚ್ಚಳ ಮಾಡಬಾರದು. ನಿರಂತರ ಜ್ಯೋತಿ ಯೋಜನೆ ಸರಿಯಾದ ರೀತಿಯಲ್ಲಿ ವಿದ್ಯುಚ್ಛಕ್ತಿ ಗ್ರಾಹಕರಿಗೆ ತಲುಪುತ್ತಿಲ್ಲ. ಜೆಸ್ಕಾಂನಿಂದ ಉಚಿತ ಸಹಾಯವಾಣಿ ಸಂಖ್ಯೆಗೆ ವಿದ್ಯುತ್ ನಿಲುಗಡೆಯಾದಾಗ ಕರೆ ಮಾಡಿದ್ದಲ್ಲಿ ಯಾರು ಸ್ವೀಕರಿಸುವುದಿಲ್ಲ. ಬೇರೆ ಬೇರೆ ಅನ್ಯ ಮಾರ್ಗಗಳಿಂದ ವಿದ್ಯುತ್ ಸೋರಿಕೆ ಆಗುವುದನ್ನು ಜೆಸ್ಕಾಂ ಅಧಿಕಾರಿಗಳು ತಡೆಯಬೇಕು. ವಿದ್ಯುತ್ ವ್ಯತ್ಯಯದ ಮುನ್ನ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಕೆಟ್ಟು ಹೋಗಿರುವ ಟ್ರಾನ್ಸ್‌ಫಾರ್ಮರ್ ಬದಲಿಸಿ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು ಎಂದು ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯ ಎಚ್.ಡಿ. ಅರುಣಕುಮಾರ, ಎಚ್.ಎಂ. ಮಂಜುನಾಥ, ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಹೀರಾಸಿಂಗ್, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿ ಡಾ| ಪಾಂಡುರಂಗ ಬಿ. ನಾಯಕ, ಜಿ. ಕಲ್ಪನಾ, ಸಲಹಾ ಸಮಿತಿ ಸದಸ್ಯ ದೀಪಕ ಗಾಲಾ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿದ್ಯುತ್ ಗ್ರಾಹಕರಾದ ಅಪ್ಪಾರಾವ್, ಜಗದೀಶ, ಶಾಂತಗೌಡರು, ಭೀಮ ಶೇಖರ, ಬಸ್ವಂತರಾವ, ಸಿದ್ದು ಸುಬೇದಾರ, ಕಲ್ಯಾಣರಾವ, ಸುಭಾಷ ಚಂದ್ರ, ಉಮಾಪತಿ, ಚಂದ್ರಶೇಖರ ಅಹವಾಲು ಸಲ್ಲಿಸಿದರು.
ವಿದ್ಯುತ್ ದರ ಹೆಚ್ಚಳಕ್ಕೆ ವಿರೋಧಬರಗಾಲದಿಂದ ಎಲ್ಲ ಪರಿಸ್ಥಿತಿ ಕೈ ಮೀರುತ್ತಿದೆ. ಇಂತಹ ಸಂದರ್ಭದಲ್ಲಿ ಜೆಸ್ಕಾಂ ವಿದ್ಯುತ್ ದರ ಏರಿಕೆಗೆ ಸಲ್ಲಿಸಿರುವ ಪ್ರಸ್ತಾವನೆ ಅವೈಜ್ಞಾನಿಕವಾಗಿದೆ. ಜೆಸ್ಕಾಂ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ಆಗುತ್ತಿರುವ ನಷ್ಟ ಸರಿದೂಗಿಸಿಕೊಳ್ಳಲು ಗ್ರಾಹಕರ ಮೇಲೆ ಹೊರೆ ಹೊರಿಸಲು ಮುಂದಾಗಿರುವುದರಿಂದ ಯಾವುದೇ ಕಾರಣಕ್ಕೂ ವಿದ್ಯುತ್ ದರ ಪರಿಷ್ಕರಣೆ ಮಾಡಬಾರದು. ಜತೆಗೆ ಕಂಪನಿ ಸಲ್ಲಿಸಿರುವ ಬೆಲೆ ಏರಿಕೆ ಬೇಡಿಕೆ ತಿರಸ್ಕರಿಸಬೇಕು ಎಂದು ವಿದ್ಯುಚ್ಛಕ್ತಿ ಆಯೋಗಕ್ಕೆ ರೈತರು-ಗ್ರಾಹಕರು ಅಹವಾಲು ಮಂಡಿಸಿದರು. ಅಧಿಕಾರಿಗಳು ಮಾಡುವ ತಪ್ಪನಿಂದಾಗಿ ಉಂಟಾಗುವ ಹಾನಿಯನ್ನು ಜನರ ಮೇಲೆ ಹಾಕಲು ಹೊರಟಂತಿದೆ. ಹೀಗಾಗಿ ದರ ಏರಿಸಲು ಅನುಮತಿ ನೀಡಬಾರದು ಎಂದು ಆರ್‌ಟಿಐ ಕಾರ್ಯಕರ್ತ ಸಿದ್ದರಾಮಯ್ಯ ಹಿರೇಮಠ ಆಯೋಗಕ್ಕೆ ಒತ್ತಾಯಿಸಿದರೆ ಎಚ್ಕೆಸಿಸಿಐ, ರೈಲ್ವೆ, ಎಫ್ಕೆಸಿಸಿಐ, ಕಾಸಿಯಾ, ಕೈಗಾರಿಕೋದ್ಯಮಿಗಳ ಸಂಘ, ರೈತರು ಹೀಗೆ ಹಲವು ತಮ್ಮ ಆಕ್ಷೇಪಣೆ ಸಲ್ಲಿಸಿ, ನಿರಂತರವಾಗಿ ಗುಣಮಟ್ಟದ ವಿದ್ಯುತ್ ನೀಡಲ್ಲ. ಗ್ರಾಹಕರ ದೂರುಗಳಿಗೆ ಸ್ಪಂದಿಸಲ್ಲ. ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಸ್ಪಂದಿಸಲ್ಲ. ಸೋರಿಕೆ ಹಾಗೂ ಕಳ್ಳತನ ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ. ಇದನ್ನು ಮೊದಲು ಸರಿಪಡಿಸುವಂತೆ ಆಗ್ರಹಿಸಲಾಯಿತು. ಯೂನಿಟ್‌ಗೆ 98 ಪೈಸೆ ಹೆಚ್ಚಳಕ್ಕೆ ಕೋರಿಕೆ
ಸಭೆ ಆರಂಭದಲ್ಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ| ಆರ್.ರಾಗಪ್ರೀಯ ಮಾತನಾಡಿ, ಜೆಸ್ಕಾಂನಲ್ಲಿ ನಿರೀಕ್ಷಿಸುತ್ತಿರುವ 968.41 ಕೋಟಿ ರೂ.ಗಳ ಕಂದಾಯ ಕೊರತೆ ಸರಿದೂಗಿಸಲು ನೀರಾವರಿ ಪಂಪ್‌ಸೆಟ್ ಹೊರತುಪಡಿಸಿ ಉಳಿದ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 98 ಪೈಸೆ ಹೆಚ್ಚಳ ಮಾಡಲು ಅನುಮತಿ ನೀಡಿ ಆದೇಶಿಸಬೇಕು ಎಂದು ಆಯೋಗಕ್ಕೆ ಕೋರಿ ಪ್ರಸ್ತಾವನೆ ಸಲ್ಲಿಸಿದರು.