Advertisement
ಜೆಕ್ ಗಣರಾಜ್ಯದ ಮಾರಿ ಬೌಜ್ಕೋವಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಆಟಗಾರ್ತಿ ಎನಿಸಿದರು. ರವಿವಾರದ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಕ್ಯಾರೊಲಿನಾ ಗಾರ್ಸಿಯಾ ವಿರುದ್ಧ 7-5, 6-2 ಅಂತರದ ಗೆಲುವು ಸಾಧಿಸಿದರು. ಗಾರ್ಸಿಯಾ, ಎಮ್ಮಾ ರಾಡುಕಾನೊ ಅವರನ್ನು ಮಣಿಸಿದ ಉತ್ಸಾಹದಲ್ಲಿದ್ದರು.
Related Articles
3ನೇ ಸುತ್ತಿನ ಮುಖಾಮುಖಿಯಲ್ಲಿಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ಗ್ರೀಕ್‌ನ 4ನೇ ಶ್ರೇಯಾಂಕದ ಆಟಗಾರ ಸ್ಟೆಫನಸ್ ಸಿಸಿಪಸ್ ಅವರನ್ನು ಕೆಡವಿ ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾದರು. 4 ಸೆಟ್‌ಗಳ ದಿಟ್ಟ ಆಟದಲ್ಲಿ 2 ಸೆಟ್ ಟೈ ಬ್ರೇಕರ್‌ಗೆ ವಿಸ್ತರಿಸಲ್ಪಟ್ಟಿತು. ಮೊದಲ ಟೈ ಬ್ರೇಕರ್ ಸೆಟ್ ಸಿಸಿಪಸ್ ಪಾಲಾದರೆ, ಕೊನೆಯ ಸೆಟ್‌ನಲ್ಲಿ ಕಿರ್ಗಿಯೋಸ್ ಗೆದ್ದರು. ಅಂತರ 6-7 (2-7), 6-4, 6-3, 7-6 (9-7). ಇದು ಶ್ರೇಯಾಂಕ ರಹಿತ ಕಿರ್ಗಿಯೋಸ್ ಅವರ ಗ್ರ್ಯಾನ್‌ಸ್ಲಾಮ್ ಬಾಳ್ವೆಯ ಅತ್ಯುತ್ತಮ ಗೆಲುವಾಗಿತ್ತು. ಇವರ ಮುಂದಿನ ಎದುರಾಳಿ ಅಮೆರಿಕದ ಬ್ರ್ಯಾಂಡ್ ನ್ ನಕಾಶಿಮ. ಇವರು ಕೊಲಂಬಿಯಾದ ಡೇನಿಯಲ್ ಇಲಾಹಿ ಗಾಲನ್ ವಿರುದ್ಧ 6-4, 6-4, 6-1 ಅಂತರದ ಜಯ ಸಾಧಿಸಿದರು.
Advertisement
ನಡಾಲ್ ಗೆಲುವಿನ ಓಟನೆಚ್ಚಿನ ಆಟಗಾರ ರಫೆಲ್ ನಡಾಲ್ 10ನೇ ಸಲ ವಿಂಬಲ್ಡನ್ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಅವರು ಇಡಲಿಯ ಲೊರೆಂಜೊ ಸೊನೆಗೊ ವಿರುದ್ಧ 6-1, 6-2, 6-4 ಅಂತರದಿಂದ ಗೆದ್ದು ಬಂದರು. ಮುಂದಿನ ಎದುರಾಳಿ ನೆದರ್ಲೆಂಡ್ಸ್‌ನ 21ನೇ ಶ್ರೇಯಾಂಕದ ಬೋಟಿಕ್ ವಾನ್ ಡೆ ಝಾಂಡ್‌ಶಪ್. ಅವರು ಫ್ರಾನ್ಸ್‌ನ ಹಿರಿಯ ಆಟಗಾರ ರಿಚರ್ಡ್ ಗಾಸ್ಕೆಟ್‌ಗೆ 7-5, 2-6, 7-6 (9-7), 6-1 ಅಂತರದ ಸೋಲುಣಿಸಿದರು. ಕಳೆದ ಫ್ರೆಂಚ್ ಓಪನ್‌ನಲ್ಲೂ ನಡಾಲ್-ಝಾಂಡ್‌ಶಪ್ ಮುಖಾಮುಖೀಯಾಗಿದ್ದರು. ಇಲ್ಲಿ ನಡಾಲ್ ಸುಲಭ ಗೆಲುವು ಒಲಿಸಿಕೊಂಡಿದ್ದರು. ಸೆಂಟರ್ ಕೋರ್ಟ್ “ಸೆಂಚುರಿ’
ರವಿವಾರದ ಪಂದ್ಯದ ವೇಳೆ “ವಿಂಬಲ್ಡನ್ ಸೆಂಟರ್ ಕೋರ್ಟ್’ ನೂರನೇ ವರ್ಷಾಚರಣೆಯನ್ನು ಆಚರಿಸಲಾಯಿತು. ಟೆನಿಸ್ ಲೆಜೆಂಡ್‌ಗಳಾದ ಬಿಲ್ಲಿ ಜೀನ್ ಕಿಂಗ್, ರೋಜರ್ ಫೆಡರರ್, ಬೋರ್ಗ್, ನೊವಾಕ್ ಜೊಕೋವಿಕ್, ವೀನಸ್ ವಿಲಿಯಮ್ಸ್ ಮೊದಲಾದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.