Advertisement

ತಾಜ್‌ಮಹಲ್‌-2 ಟ್ರೇಲರ್‌ ಸದ್ಯದಲ್ಲೆ

02:47 PM Sep 11, 2021 | Team Udayavani |

ಶ್ರೀ ಗಂಗಾಂಬಿಕೆ ಎಂಟರ್‌ ಪ್ರೈಸಸ್‌ ಲಾಂಛನದಲ್ಲಿ ನಿರ್ಮಾಣವಾಗಿರುವ, ದೇವರಾಜ್‌ ಕುಮಾರ್‌ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ತಾಜ್‌ ಮಹಲ್‌-2 ಚಿತ್ರದ ಟ್ರೇಲರ್‌ ಸದ್ಯದಲ್ಲೇ ಬಿಡುಗಡೆಯಾಗಲಿದೆ.

Advertisement

ದೇವರಾಜ್‌ ಕುಮಾರ್‌ ಈ ಹಿಂದೆ ಡೇಂಜರ್‌ಜೋನ್‌, ನಿಶ್ಯಬ್ದ 2 ಹಾಗೂ ಅನುಷ್ಕಾ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ವಿಭಿನ್ನ ಕಥಾ ಹಂದರದ ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಗಗನಚುಕ್ಕಿ, ಬರಚುಕ್ಕಿ ಮುಂತಾದ ಕಡೆ 65 ದಿನಗಳ ಚಿತ್ರೀಕರಣ ನಡೆದಿದೆ.

ದೇವರಾಜ್‌ ಕುರ್ಮಾ ಅವರಿಗೆ ನಾಯಕಿಯಾಗಿ ಸಮೃದ್ಧಿ ಶುಕ್ಲ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ.
ಮನವರ್ಷಿ ನವಲಗುಂದ ಹಾಡುಗಳನ್ನು ಬರೆದಿದ್ದು, ವಿಕ್ರಂ ಸೆಲ್ವ ಸಂಗೀತ ನೀಡಿದ್ದಾರೆ. ವೀನಸ್‌ ಮೂರ್ತಿ ಛಾಯಾಗ್ರಹಣ,ವಿಜಯ್‌ ಸಂಕಲನ ಹಾಗೂ ಬಿ.ಧನಂಜಯ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ:ಖ್ಯಾತ ಮಲಯಾಳಂ ನಟ ರಮೇಶ್ ವಲಿಯಸಲಾ ಆತ್ಮಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next