Advertisement

ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ: ನಿಲುವು ಸಡಿಲಿಸದ ಅಮೆರಿಕ-ಚೀನ

11:37 PM Aug 05, 2022 | Team Udayavani |

ಬೀಜಿಂಗ್‌/ವಾಷಿಂಗ್ಟನ್‌: ಅಮೆರಿಕದ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಕಾವು ಈಗ ಇನ್ನಷ್ಟು ಹೆಚ್ಚಿದೆ.

Advertisement

* “ತೈವಾನ್‌ ಗಡಿಗಳನ್ನು ಪುನಾರೂಪಿಸಿದ ಬಳಿಕ ಅದಕ್ಕೆ ಇನ್ನೊಮ್ಮೆ ಪಾಠ ಹೇಳುತ್ತೇವೆ’ ಎಂಬುದಾಗಿ ಸಂಭಾವ್ಯ ಮಿಲಿಟರಿ ಆಕ್ರಮಣದ ಮುನ್ಸೂಚನೆ ನೀಡುವಂತೆ ಫ್ರಾನ್ಸ್‌ಗೆ ಚೀನದ ರಾಯಭಾರಿಯಾಗಿರುವಲು ಶಾಯೆ ಮಾತನಾಡಿದ್ದಾರೆ. ಈ ಹೇಳಿಕೆಗೆ ಜಾಗತಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

* ತೈವಾನ್‌ ವಾಯು ಪ್ರದೇಶವನ್ನು ಅತಿಕ್ರಮಿಸಿರುವ ಚೀನದ ನಡೆ ಪರಿಸ್ಥಿತಿಯ ಉದ್ವಿಗ್ನತೆಯನ್ನು ತೀವ್ರವಾಗಿ ಹೆಚ್ಚಿಸುವಂಥದ್ದು, ಅಮೆರಿಕವು ಬಿಕ್ಕಟ್ಟನ್ನು ಬಯಸುತ್ತಿಲ್ಲ ಎಂಬುದನ್ನು ಚೀನಕ್ಕೆ ಪದೇಪದೆ ಸ್ಪಷ್ಟಪಡಿಸಲಾಗಿದೆ ಎಂದು ಅಮೆರಿಕದ ವಿದೇಶ ಸಚಿವ ಆ್ಯಂಟನಿ ಬ್ಲಿಂಕೆನ್‌ ಹೇಳಿದ್ದಾರೆ.

* ಶುಕ್ರವಾರವೂ ಚೀನದ ಸಮರ ವಿಮಾನಗಳು ತೈವಾನ್‌ ಖಾರಿಯ ಮೇಲೆ ಹಾರಾಟ ನಡೆಸಿವೆ.

* ಪೆಲೋಸಿ ಅವರ ತೈವಾನ್‌ ಭೇಟಿಗೆ ಪ್ರತೀಕಾರವಾಗಿ ಶುಕ್ರವಾರ ಚೀನವು ಅಮೆರಿಕದ ಜತೆಗೆ ಜಾಗತಿಕ ಹವಾಮಾನ ಬದಲಾವಣೆ, ಮಿಲಿಟರಿ ಸಂಬಂಧಗಳು, ಮಾದಕ ದ್ರವ್ಯ ವಿರುದ್ಧ ಜಂಟಿ ಪ್ರಯತ್ನಗಳಂತಹ ಹಲವು ಮಾತುಕತೆಗಳಿಂದ ಸಂಪೂರ್ಣವಾಗಿ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದೆ. ಇನ್ನೊಂದೆಡೆ ತೈವಾನ್‌ ಸುತ್ತ ತಾನು ನಡೆಸುತ್ತಿರುವ ತೀವ್ರ ಸಮರಾಭ್ಯಾಸ ರವಿವಾರದ ವರೆಗೆ ಮುಂದುವರಿಸುವುದಾಗಿ ಚೀನ ತಿಳಿಸಿದೆ.

Advertisement

* ನ್ಯಾನ್ಸಿ ಪೆಲೋಸಿ ಮತ್ತು ಅವರ ಕುಟುಂಬದ ಮೇಲೂ ಚೀನ ನಿರ್ಬಂಧಗಳನ್ನು ವಿಧಿಸಿದೆ. ಆದರೆ ಅವುಗಳೇನು ಎಂಬುದನ್ನು ಬಹಿರಂಗಪಡಿಸಿಲ್ಲ.

* ಚೀನೀ ರಾಯಭಾರಿಗೆ ಬುಲಾವ್‌ತೈವಾನ್‌ನನ್ನು ಸುತ್ತುವರಿದು ಪ್ರಚೋದನಕಾರಿಯಾಗಿ ಸಮಾರಾಭ್ಯಾಸ ನಡೆಸುತ್ತಿರುವ ಚೀನದ ಕ್ರಮವನ್ನು ಅಮೆರಿಕ ಖಂಡಿಸಿದೆ. ಅಮೆರಿಕದಲ್ಲಿ ಚೀನದ ರಾಯಭಾರಿಯಾಗಿರುವ ಕಿನ್‌ ಗಾಂಗ್‌ ಅವರನ್ನು ಶ್ವೇತಭವನಕ್ಕೆ ಕರೆಯಿಸಿಕೊಂಡು ತೀವ್ರ ಖಂಡನೆ ವ್ಯಕ್ತಪಡಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಚೀನ, ತೈವಾನ್‌ಗೆ ನ್ಯಾನ್ಸಿ ಪೆಲೋಸಿ ಭೇಟಿ ನೀಡಿದ ತಪ್ಪನ್ನು ಸರಿಪಡಿಸಿಕೊಳ್ಳಲು ಇರುವ ಒಂದೇ ದಾರಿ ಎಂದರೆ ಕ್ಷಮೆ ಕೇಳುವುದು ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

* ಇನ್ನೊಂದೆಡೆ ಪರಿಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಈ ವಾರ ನಡೆಸಲು ಉದ್ದೇಶಿಸಿದ್ದ ಮಿನಿಟ್‌ಮ್ಯಾನ್‌ 3 ಖಂಡಾಂರ್ತಗಾಮಿ ಬೆಲಿಸ್ಟಿಕ್‌ ಕ್ಷಿಪಣಿಯ ಪರೀಕ್ಷೆಯನ್ನು ಅಮೆರಿಕ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next