ರಾಣಿಬೆನ್ನೂರ: ಕೃಷಿಯಿಂದ ಬೇಸತ್ತು ವಿಮುಕ್ತಿ ಹೊಂದುತ್ತಿರುವ ಸಂದರ್ಭದಲ್ಲಿ ಇಲ್ಲೊಬ್ಬ ರೈತ ತೋಟಗಾರಿಕೆ ಇಲಾಖೆ ಮಾರ್ಗದರ್ಶನ ಪಡೆದು ನರೇಗಾ ಯೋಜನೆಯಡಿ ಒಂದು ಎಕರೆ ಜಮೀನಿನಲ್ಲಿ ತೈವಾನ್ ಪಿಂಕ್ ತಳಿಯ ಪೇರಲು ಹಣ್ಣು ಬೆಳೆದು ವರ್ಷಕ್ಕೆ ಒಂದು ಲಕ್ಷ ರೂ.ವರೆಗೆ ಆದಾಯ ಪಡೆದು ಇತರರಿಗೆ ಮಾದರಿಯಾಗಿದ್ದಾರೆ.
Advertisement
ರಾಣಿಬೆನ್ನೂರು ತಾಲೂಕಿನ ಸುಣಕಲ್‌ಬಿದರಿ ಗ್ರಾಮದ ಮಂಜಪ್ಪ ಸಿರಿಗೇರಿ ಎಂಬುವರು ಪೇರಲ ಬೆಳೆದು ಯಶಸ್ಸು ಕಂಡಿದ್ದಾರೆ. ಇವರು ಮೊದಲು ತಮ್ಮ ಒಂದು ಎಕರೆ ಜಮೀನಿನಲ್ಲಿ ಹತ್ತಿ ಅಥವಾ ಮೆಕ್ಕೆಜೋಳ ಬೆಳೆಯುತ್ತಿದ್ದರು. ಅದರಿಂದ ವರ್ಷಕ್ಕೆ ಖರ್ಚು ವೆಚ್ಚ ತೆಗೆದು 30ರಿಂದ 40 ಸಾವಿರ ರೂ. ಗಳಿಸಲು ಮಾತ್ರ ಸಾಧ್ಯವಾಗುತ್ತಿತ್ತು. ಆದರೆ ಗ್ರಾಪಂ ಮಾರ್ಗದರ್ಶನದಲ್ಲಿ ನರೇಗಾ ಯೋಜನೆಯಡಿ ಒಂದು ಎಕರೆ ಜಮೀನಿನಲ್ಲಿ ಕಳೆದ ವರ್ಷ 500 ಪೇರಲ ಸಸಿ ನಾಟಿ ಮಾಡಿದ್ದಾರೆ.
Related Articles
●ಮಂಜಪ್ಪ ಸಿರಿಗೇರಿ,
ಸುಣಕಲ್‌ಬಿದರಿ ರೈತ.
Advertisement
ತಾಲೂಕಿನ ಸುಣಕಲ್‌ಬಿದರಿ ಗ್ರಾಮದ ಮಂಜಪ್ಪ ಸಿರಿಗೇರಿ ಅವರು ತೈವಾನ್ ಪಿಂಕ್ ತಳಿಯ ಪೇರಲ ಬೆಳೆದು ಯಶಸ್ವಿಯಾಗಿದ್ದಾರೆ. ಪೇರಲು ಬೆಳೆಗೆ ರೋಗ ನಿಯಂತ್ರಣ ಮಾಡಲು ಸೋಲಾರ್ ವ್ಯವಸ್ಥೆಯಲ್ಲಿ ಪತಂಗ ಆಕರ್ಷಣೀಯ ಬುಟ್ಟಿ ಅಳವಡಿಸಿದ್ದರಿಂದ ಪೇರಲದ ಹಣ್ಣುಗಳು ಯಾವುದೇ ಚುಕ್ಕೆ ಅಥವಾ ಕಾಯಿ ಕೊರಕ ರೋಗದ ಬಾಧೆಗೆ ತುತ್ತಾಗಿಲ್ಲ. ಕೀಟನಾಶಕ ಬಳಸದ ಕಾರಣ ಈ ಹಣ್ಣು ಆರೋಗ್ಯ ರಕ್ಷಣೆಗೆ ಉತ್ತಮ.●ನೂರಅಹ್ಮದ್ ಹಲಗೇರಿ, ಹಿರಿಯ ಸಹಾಯಕ
ನಿರ್ದೇಶಕ, ತೋಟಗಾರಿಕೆ ಇಲಾಖೆ ■ ಮಂಜುನಾಥ ಎಚ್ ಕುಂಬಳೂರ