Advertisement

2ವರ್ಷಗಳ ಬಳಿಕಸ್ಥಳಕ್ಕೆ ತಹಶೀಲ್ದಾರ್‌ ಭೇಟಿ:ಪರಿಶೀಲಿಸಲುಸರ್ವೆಗೆಸೂಚನೆ

11:38 AM Jul 21, 2018 | Team Udayavani |

ನೆಲ್ಯಾಡಿ: 2 ವರ್ಷಗಳ ಹಿಂದೆ ಪ್ರಾಕೃತಿಕವಾಗಿ ಸರಕಾರಿ ದಾಖಲೆಯಲ್ಲಿ ಪರಂಬೋಕು ಎಂದು ದಾಖಲಾಗಿರುವ ತೋಡನ್ನು ತಿರುಗಿಸಿ ಬಡ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದ ಬಗ್ಗೆ ಉದಯವಾಣಿ ಸುದಿನ ವರದಿ ಮಾಡಿತ್ತು. ದಯಾಮರಣಕ್ಕಾಗಿ ಅರ್ಜಿ ಸಲ್ಲಿಸುವುದೊಂದೇ ದಾರಿ
ಎಂದು ಅಹವಾಲು ತೋಡಿಕೊಂಡ ಪಟ್ರಮೆ ಗ್ರಾಮದ ಕಲ್ಕೊಡಂಗೆ ನಿವಾಸಿ ಏಕನಾಥ್‌ ಭಟ್‌ ಕುಟುಂಬ ಕೊನೆಯದಾಗಿ ಮಾಧ್ಯಮದ ಮೊರೆಹೋಗಿದ್ದರು.

Advertisement

2 ವರ್ಷಗಳಿಂದ ನ್ಯಾಯಕ್ಕಾಗಿ ಜನ ಪ್ರತಿನಿಧಿ ಗಳ, ಕಂದಾಯ ಅ ಧಿಕಾರಿಗಳ, ಗ್ರಾ.ಪಂ. ಹೀಗೆ ಎಲ್ಲ ಕಡೆ ದೂರು ನೀಡಿದರೂ ಸಮಸ್ಯೆ ಪರಿಹಾರವಾಗದೇ ಈ ವರ್ಷ ಕೃಷಿಯ ಜತೆಗೆ ಮನೆ, ಕೊಟ್ಟಿಗೆಯೂ ಕುಸಿತಕ್ಕೊಳಗಾಗುವ ಆತಂಕ ಎದುರಾಗಿತ್ತು. ಇಷ್ಟೇ ಅಲ್ಲದೇ ಕುಡಿಯುವ ನೀರು ಬಳಸುತ್ತಿದ್ದ ಹೊಂಡದ ಬಗೆಗೂ ತಕರಾರು ತೆಗೆದು ಬಡ ಕುಟುಂಬದ ಎಲ್ಲ ಜಾಗವೂ ತನ್ನದೇ ಎಂದು ಬೆದರಿಕೆ ಒಡ್ಡುತ್ತಿದ್ದ ಘಟನೆ ನಡೆದಿತ್ತು. ಈ ಬಗ್ಗೆ ಉದಯವಾಣಿ ಜು.11ರಂದು ವಿಸ್ಕೃತ ವರದಿ ಪ್ರಕಟಿಸಿತ್ತು. ಮಾಧ್ಯಮ ವರದಿ ನೋಡಿ ಎಚ್ಚೆತ್ತ ಅಧಿಕಾರಿಗಳು ಬಡ ಕುಟುಂಬದ ಸಮಸ್ಯೆ ಪರಿಹರಿಸಲು ಮುಂದಾಗಿದ್ದಾರೆ. ಈ ಕುರಿತಾಗಿ 5 ದಿನಗಳ ಹಿಂದೆ ಗ್ರಾಮ ಕರಣಿಕರು ತಾಲೂಕು ದಂಡಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದರು. 

ಗ್ರಾಮ ಕರಣಿಕರು ವರದಿ ನೀಡಿದ ಬಳಿಕ ಗುರುವಾರ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ತಾಲೂಕು ದಂಡಾಧಿಕಾರಿಗಳು ಪರಿಶೀಲನೆ ನಡೆಸಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ಸರ್ವೇ ಇಲಾಖೆಗೆ ಗಡಿಗುರುತು ಮಾಡಲು ಆದೇಶ ನೀಡಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಾಲೂಕು ದಂಡಾಧಿಕಾರಿ ಮದನ್‌ ಮೋಹನ್‌ ಅವರು ತಿಳಿಸಿದ್ದಾರೆ. ಈ ಸಂದರ್ಭ ಬೆಳ್ತಂಗಡಿ ಕಂದಾಯ ನಿರೀಕ್ಷಕ ಪ್ರತೀಶ್‌, ಗ್ರಾಮ ಕರಣಿಕ ರೂಪೇಶ್‌, ಗ್ರಾ. ಸಹಾಯಕ ಮೋಹನ್‌, ಮೊದಲಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next