Advertisement

ತಹಶೀಲ್ದಾರ್‌ ಕಚೇರಿ ಕಟ್ಟಡಕ್ಕಿಲ್ಲ ನಾಮಫಲಕ!

03:27 PM Apr 26, 2022 | Team Udayavani |

ಗುರುಮಠಕಲ್‌: ತಾಲೂಕು ರಚನೆಯಾಗಿ 6 ವರ್ಷಗಳಾದರೂ ತಹಶೀಲ್ದಾರ್‌ ಕಚೇರಿಗೆ ಸ್ವಂತ ಕಟ್ಟಡವಿಲ್ಲ. ತಾತ್ಕಲಿಕವಾಗಿ ಪುರಸಭೆ ಸಮುದಾಯ ಭವನಕ್ಕೆ ತಹಶೀಲ್ದಾರ್‌ ಕಚೇರಿ ಸ್ಥಳಾಂತರಗೊಂಡಿದೆ.

Advertisement

ಹಳೆ ಕಚೇರಿಯಿಂದ ಸ್ಥಳಾಂತರಿಸಿದ ಮಾಹಿತಿ ಜನರಿಗೆ ತಿಳಿಸಿಲ್ಲ ಮತ್ತು ಕಾರ್ಯ ನಿರ್ವಾಹಿಸುತ್ತಿರುವ ಕಚೇರಿಗೂ ನಾಮಫಲಕವಿಲ್ಲದೇ ತಹಶೀಲ್ದಾರ್‌ ಕಚೇರಿಯನ್ನು ಜನರು ಹುಡುಕುವಂತಾಗಿದೆ ಎಂದು ಜನರು ದೂರಿದ್ದಾರೆ.

ಗುರುಮಠಕಲ್‌ ತಾಲೂಕು 70 ಗ್ರಾಮಗಳನ್ನು ಹೊಂದಿದೆ. ಇದರಲ್ಲಿ 2 ಮುಖ್ಯ ಹೋಬಳಿಗಳಿವೆ. ಆದರೆ ತಾಲೂಕಿನಿಂದ ಬರುವ ಜನರಿಗೆ ತಹಶೀಲ್ದಾರ್‌ ಕಚೇರಿ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಯಾಕೆಂದರೆ ಸ್ಥಳಾಂತರಗೊಂಡಿರುವ ಮಾಹಿತಿ ಮತ್ತು ಕಟ್ಟಡಕ್ಕೆ ನಾಮಫಲಕ ಇಲ್ಲದಿರುವ ಕಾರಣ ಜನರಿಗೆ ಗೊಂದಲವಾಗಿದೆ.

ತಹಶೀಲ್ದಾರ್‌ರು ಮತ್ತು ಉಪತಹಶೀಲ್ದಾರ್‌ರ ಕಾರ್ಯಗಳು ಹೊಸ ಸಮುದಾಯ ಭವನದಲ್ಲಿ ನಡೆಯುತ್ತಿದ್ದು, ಪಹಣಿ ಮತ್ತು ನೆಮ್ಮದಿ ಕೇಂದ್ರ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಹಳೆ ಕಟ್ಟಡ ಕಚೇರಿಗೆ ಬಂದು ತಹೀಲ್ದಾರ್‌ ರನ್ನು ಭೇಟಿ ಮಾಡಬೇಕು ಎಂದು ಕೇಳಿದರೆ ಸಿಬ್ಬಂದಿ ಹೊಸ ಕಚೇರಿಗೆ ಹೋಗಿ ಎಂದು ತಿಳಿಸುತ್ತಾರೆ ಹೊರತು ಎಲ್ಲಿದೆ ಎಂಬುದು ಕೇಳಿದರೆ ಸಿಬ್ಬಂದಿಗಳು ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ, ಜನರಿಗೆ ಕೇಳಿ ವಿಚಾರಿಸಿದರೆ ಕಾಕಲವಾರ ರಸ್ತೆಯ ಕ್ರಾಸ್‌ನಲ್ಲಿ ಇದೆ ಎಂದು ತಿಳಿಸುತ್ತಾರೆ. ಅಲ್ಲಿಗೆ ಹೋಗುವ ಮಾರ್ಗ ಕುರತು ಸರಿಯಾದ ಬೋರ್ಡ್‌ ಇಲ್ಲದಿರುವುದರಿಂದ ನಾನು ಗೊಂದಲಕ್ಕೆ ಒಳಗಾಗಿ ಹುಡುಕುವುದರಲ್ಲಿ ಸುಸ್ತು ಆಗಿದ್ದೇನೆ. -ಮೌಲ್ಲಾಲಿ, ನಸಾಲವಾಯಿ ಗ್ರಾಮಸ್ಥ

Advertisement

ಪುರಸಭೆ ಸಮುದಾಯ ಭವನದಲ್ಲಿ ತಹಶೀಲ್ದಾರ್‌ ಕಚೇರಿ ಸ್ಥಳಾಂತರಿಸಲಾಗಿದೆ. ಕಟ್ಟಡ ಮುಖ್ಯ ದ್ವಾರದಲ್ಲಿ ಬರೆಯಬೇಕಾಗಿದೆ. ಇನ್ನೂ ಮೂರು ದಿನಗಳಲ್ಲಿ ನಾಮಫಲಕ ಆಳವಡಿಸಲಾಗುವುದು. -ಶರಣಬಸವ, ಗುರುಮಠಕಲ್‌ ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next