Advertisement

ಅಲೆಮಾರಿಗಳ ಗುಡಿಸಲಿಗೆ ಹೋಗಿ ರೇಷನ್ ಹಂಚಿದ ಶಹಾಬಾದ ತಹಶೀಲ್ದಾರ್

03:52 PM Apr 10, 2020 | keerthan |

ಕಲಬುರಗಿ: ಬೇರೆ ರಾಜ್ಯದಿಂದ‌ ಇಲ್ಲಿಗೆ ಬಂದು ಸ್ವಯಂ ಉದ್ಯೋಗ‌ವಾಗಿ ಕಲ್ಲಿನಲ್ಲಿ ಗೃಹೋಪಯೋಗಿ ಸಾಮಾನುಗಳನ್ನು ಕೆತ್ತನೆ‌ ಮಾಡಿ ಮಾರಾಟದಿಂದ ಬರುವ ಅಲ್ಪ ಹಣದಲ್ಲಿ ಬದುಕು ಸಾಗಿಸುವ ಅಲೆಮಾರಿ ಜನಾಂಗದವರ ಗುಡಿಸಲಿಗೆ ಶಹಾಬಾದ ತಹಶೀಲ್ದಾರ್ ಸುರೇಶ ವರ್ಮಾ ಶುಕ್ರವಾರ ಭೇಟಿ ನೀಡಿ ಸ್ವತಃ ಕಿರಾಣಿ ದಿನಸಿಗಳನ್ನು ನೀಡಿದರು.

Advertisement

ಲಾಕ್ ಡೌನ್ ಪರಿಣಾಮ‌ ಅಲೆಮಾರಿ, ಭಿಕ್ಷುಕರಿಗೆ, ನಿರ್ಗತಿಕರಿಗೆ ಆಹಾರ ಸಮಸ್ಯೆಯನ್ನು ಮನಗಂಡು ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಇಂತವರಿಗೆ ಅಹಾರ ಸರಬರಾಜು ಮಾಡಲು ಕ್ರಮ‌ ವಹಿಸಿದೆ.

ಅಂತೆಯೇ ಶುಕ್ರವಾರ ಶಹಾಬಾದ ಪಟ್ಟಣದ ಬಸವೇಶ್ವರ ಚೌಕ್, ಜೇವರ್ಗಿ ರಸ್ತೆಯ ಬೆಟ್ಟ ಪ್ರದೇಶ, ಭಂಕೂರ ಗ್ರಾಮದಲ್ಲಿ‌ ಟೆಂಟ್ ಹಾಕಿ ನೆಲೆಸಿರುವ ಅಲೆಮಾರಿ ಜನಾಂಗಕ್ಕೆ ಮತ್ತು ಬಡ‌ ಕೂಲಿ ಕಾರ್ಮಿಕರಿಗೆ ತರಕಾರಿ, ಅಕ್ಕಿ, ಬೇಳೆ‌ ಹೀಗೆ ಅಡುಗೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿದರು.

ಇನ್ನು ಬೀದಿ ಬದಿಯಲ್ಲಿರುವ ಭಿಕ್ಷುಕರಿಗೆ, ನಿರ್ಗತಿಕರಿಗೆ ಸಿದ್ಧ ಆಹಾರ, ಸ್ವಚ್ಚ ಕುಡಿಯುವ ನೀರನ್ನು ತಹಶೀಲ್ದಾರ‌್ ನೇತೃತ್ವದ ಅಧಿಕಾರಿಗಳ ನೀಡಿ ಹಸಿವು ತಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next