Advertisement

ಮುಂಬೈ ದಾಳಿ ಸಂಚುಕೋರ ರಾಣಾ ಹಸ್ತಾಂತರ ಸಾಧ್ಯತೆ

12:35 AM Jan 15, 2019 | Team Udayavani |

ವಾಷಿಂಗ್ಟನ್‌: ಮುಂಬಯಿ ದಾಳಿ ಸಂಚುಕೋರರಲ್ಲೊಬ್ಬನಾದ ಉಗ್ರ ತಹವ್ವುರ್‌ ಹುಸೇನ್‌ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Advertisement

ಈತ ಅಮೆರಿಕದಲ್ಲಿ 14 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದು, 2021ರಲ್ಲಿ ಈತನ ಶಿಕ್ಷೆ ಅವಧಿ ಮುಗಿಯಲಿದೆ. ಈತನ ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ದಟ್ಟವಾಗಿದೆ. ಪಾಕ್‌ ಮೂಲದ ಕೆನಡಾ ಪ್ರಜೆ ರಾಣಾ ನನ್ನು 2009ರಲ್ಲಿ ಬಂಧಿಸಲಾಗಿತ್ತು. ಈತ ಲಷ್ಕರ್‌ ಎ ತೋಯ್ಬಾ ಉಗ್ರರ ಜತೆ ಸಂಪರ್ಕದಲ್ಲಿದ್ದ ಎಂಬ ಕಾರಣಕ್ಕೆ ಬಂಧಿಸಲಾಗಿತ್ತು.  ಇದೇ ವೇಳೆ ಮುಂಬೈ ದಾಳಿ ಸಂಚಿನಲ್ಲಿ ಪಾತ್ರ ವಹಿಸಿದ್ದ ಇನ್ನೊಬ್ಬ ಉಗ್ರ ಡೇವಿಡ್‌ ಹೆಡ್ಲಿಯನ್ನೂ ಭಾರತಕ್ಕೆ ಹಸ್ತಾಂತರಿಸ ಬೇಕೆಂದು ಭಾರತೀಯ ಅಧಿಕಾರಿಗಳು ಮನವಿ ಮಾಡಿದ್ದಾರೆ. 

ಡೊನಾಲ್ಡ್‌ ಟ್ರಂಪ್‌ ಸರಕಾರವು ಈ ವಿಚಾರದಲ್ಲಿ ಭಾರತಕ್ಕೆ ಸಂಪೂರ್ಣ ನೆರವು ನೀಡುತ್ತಿದೆ. ಈಗಾಗಲೇ ಮುಂಬೈ ದಾಳಿ ವಿಚಾರದಲ್ಲಿ ಈತ ಶಿಕ್ಷೆ ಅನುಭವಿಸುತ್ತಿರುವುದರಿಂದ ಡಿಫೆನ್ಸ್‌ ಕಾಲೇಜು, ಚಾಬಾದ್‌ ಹೌಸ್‌ ಸ್ಫೋಟ ಸಂಚು ಪ್ರಕರಣ ದಲ್ಲಿ ಈತನ ಹಸ್ತಾಂತರಕ್ಕೆ ಅಮೆರಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next