Advertisement

Tagaru Palya: ಅನೌನ್ಸ್‌ ಆಗಿ 4 ದಿನ ಕಳೆದರೂ ಓಟಿಟಿಗೆ ಬಂದಿಲ್ಲ ʼಟಗರು ಪಲ್ಯʼ: ಆಗಿರೋದೇನು?

02:01 PM Dec 12, 2023 | Team Udayavani |

ಬೆಂಗಳೂರು: ಡಾಲಿ ಧನಂಜಯ ನಿರ್ಮಾಣದ ʼಟಗರು ಪಲ್ಯ‌ʼ ಮನರಂಜನೆ ನೀಡುವಲ್ಲಿ ಯಶಸ್ಸಾಗಿತ್ತು. ಸರಳ ಕಥೆಯನ್ನು ಹಳ್ಳಿ ಸೊಗಡಿನ ಶೈಲಿನಲ್ಲಿ ಪ್ರೆಸೆಂಟ್‌ ಮಾಡಿದ ರೀತಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.

Advertisement

ನವ ನಿರ್ದೇಶಕ ಉಮೇಶ್ ಕೆ. ಕೃಪಾ ನಿರ್ದೇಶನದಲ್ಲಿ ಬಂದ ʼಟಗರು ಪಲ್ಯʼ ಅಕ್ಟೋಬರ್‌ 27 ರಂದು ರಿಲೀಸ್‌ ಆಗಿತ್ತು. ನಾಗಭೂಷಣ್ ಹಾಗೂ ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ಸಿನಿಮಾದ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ. ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ, ಚಿತ್ರಾ ಶೆಣೈ, ವಾಸುಕಿ ವೈಭವ್, ಬಿರಾದಾರ್ ಚಿತ್ರದ ತಾರಾಗಣದಲ್ಲಿದ್ದಾರೆ.

ಇಡೀ ಸಿನಿಮಾದ ಕಥೆ ಮಂಡ್ಯ ಹಳ್ಳಿಯೊಂದರಲ್ಲಿ ಊರ ಗೌಡರ ಮಗಳ ಮದುವೆಯ ಸಂದರ್ಭದಲ್ಲಿ ಮನೆದೇವರಿಗೆ ಬಲಿ ಕೊಡಲು ತರುವ ಟಗರು ಸುತ್ತ ಸಾಗುತ್ತದೆ. ಗ್ರಾಮ್ಯ ಭಾಷೆ ಹಾಗೂ ಹಾಸ್ಯದಿಂದ ಸಿನಿಮಾದಲ್ಲಿ ಮನರಂಜನೆ ಭರಪೂರವಾಗಿದೆ.

ಥಿಯೇಟರ್‌ ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಬಳಿಕ ಸಿನಿಮಾ ಓಟಿಟಿ ರಿಲೀಸ್‌ ರೆಡಿಯಾಗಿತ್ತು. ಇದೇ ಡಿ.8 ರಂದು ಅಮೇಜಾನ್ ಪ್ರೈಮ್‌ ನಲ್ಲಿ  ಸಿನಿಮಾ ಸ್ಟ್ರೀಮ್‌ ಆಗಬೇಕಿತ್ತು. ಆದರೆ ನಾಲ್ಕು ದಿನ ಕಳೆದರೂ ಸಿನಿಮಾ ಇದುವರೆಗೂ ಸ್ಟ್ರೀಮ್‌ ಆಗದೇ ಇರುವುದಕ್ಕೆ ಕೆಲ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

“ಹೇಳಿದ ಸಮಯಕ್ಕೆ ಸ್ಟ್ರೀಮ್‌ ಮಾಡೋಕೆ ಆಗಲ್ಲ ಅಂದ್ರೆ ಯಾಕೆ ಸುಮ್ಮನೇ ಹೇಳ್ತೀರಾ” ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ. “ಎಲ್ಲಿದೆ ಟಗರು ಪಲ್ಯ” ಎಂದು ಮತ್ತೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

Advertisement

ಕೆಲ ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ಸ್ಟ್ರೀಮ್ ಆಗಲು ತಡವಾಗುತ್ತದೆ ಎನ್ನಲಾಗಿದೆ. ಶೀಘ್ರದಲ್ಲಿ ಸಿನಿಮಾ ಓಟಿಟಿಯಲ್ಲಿ ಬರಲಿದೆ ಎನ್ನಲಾಗಿದೆ.

ಕನ್ನಡ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಖರೀದಿಸಲು ಮುಂದೆ ಬರುತ್ತಿಲ್ಲ ಎಂದು ಡಾಲಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಾದ ಬಳಿಕ ಓಟಿಟಿಯಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಅನೌನ್ಸ್‌ ಮಾಡಿತ್ತು. ಕೆಲ ಮೂಲಗಳ ಪ್ರಕಾರ ʼಟಗರು ಪಲ್ಯʼ ಸೀಮಿತ ಅವಧಿಗೆ ಮಾತ್ರ ಓಟಿಟಿಯಲ್ಲಿ ಇರಲಿದೆ. 6 ತಿಂಗಳ ಬಳಿಕ ಸಿನಿಮಾ ಓಟಿಟಿಯಲ್ಲಿ ಇರುವುದಿಲ್ಲ ಎನ್ನಲಾಗಿದೆ.

ಈ ಹಿಂದೆ ಕನ್ನಡದ ʼಆರ್ಕೆಸ್ಟ್ರಾ ಮೈಸೂರುʼ ʼಡೇರ್‌ಡೆವಿಲ್ ಮುಸ್ತಫಾʼ ಸಿನಿಮಾ ಕೂಡ ಸೀಮಿತ ಅವಧಿಗೆ ಮಾತ್ರ ಸ್ಟ್ರೀಮ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next