ದುಬಾೖ: ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೇಜ್ ಶಮ್ಸಿ ನೂತನ ಐಸಿಸಿ ರ್‍ಯಾಂಕಿಂಗ್‌ನಲ್ಲಿ ನಂ.1 ಟಿ20 ಬೌಲರ್ ಆಗಿದ್ದಾರೆ. ಆಸ್ಟ್ರೇಲಿಯದ ವೇಗಿ ಜೋಶ್ ಹ್ಯಾಝಲ್‌ವುಡ್ ಜೀವನಶ್ರೇಷ್ಠ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
ಅಗ್ರಸ್ಥಾನದಲ್ಲಿದ್ದ ವನಿಂದು ಹಸರಂಗ 3ನೇ ಸ್ಥಾನಕ್ಕೆ ಇಳಿದರು. ಅವರೀಗ ಕೋವಿಡ್ ಪಾಸಿಟಿವ್‌ನಿಂದಾಗಿ ಕ್ವಾರಂಟೈನ್‌ನಲ್ಲಿದ್ದಾರೆ. ಶಮ್ಸಿ 784, ಹ್ಯಾಝಲ್‌ವುಡ್ 783 ಅಂಕ ಹೊಂದಿದ್ದು, ನಿಕಟ ಪೈಪೋಟಿಯೊಂದು ಕಂಡುಬಂದಿದೆ.
ಪ್ರವಾಸಿ ಶ್ರೀಲಂಕಾ ಎದುರಿನ ಮೊದಲ 3 ಟಿ20 ಪಂದ್ಯಗಳಲ್ಲಿ 8 ವಿಕೆಟ್ ಉಡಾಯಿಸುವ ಮೂಲಕ ಹ್ಯಾಝಲ್‌ವುಡ್ ಒಮ್ಮಲೇ 4 ಸ್ಥಾನ ಮೇಲೇರಿದರು. ಹೀಗಾಗಿ ಆದಿಲ್ ರಶೀದ್, ರಶೀದ್ ಖಾನ್, ಆ್ಯಡಂ ಝಂಪ ಒಂದೊಂದು ಸ್ಥಾನ ಕುಸಿಯಬೇಕಾಯಿತು.
ಇದನ್ನೂ ಓದಿ:ಪ್ರೊ ಕಬಡ್ಡಿ: ಪ್ಲೇಆಫ್ ನಿಂದ ಹೊರಬಿದ್ದ ತಮಿಳ್ ತಲೈವಾಸ್
ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಆರನ್ ಫಿಂಚ್ ಒಂದು ಸ್ಥಾನ ಕುಸಿದು 7ಕ್ಕೆ ಬಂದಿದ್ದಾರೆ. ಡೇವನ್ ಕಾನ್ವೆ ಒಂದು ಸ್ಥಾನ ಮೇಲೇರಿದ್ದು, 6ನೇ ಸ್ಥಾನಿಯಾಗಿದ್ದಾರೆ. ಮೊದಲೆರಡು ಸ್ಥಾನದಲ್ಲಿ ರುವವರು ಪಾಕಿಸ್ಥಾನದ ಬಾಬರ್ ಆಜಂ (805) ಮತ್ತು ಮೊಹಮ್ಮದ್ ರಿಜ್ವಾನ್ (798).
ಏಕದಿನ: ಯಥಾಸ್ಥಿತಿ: ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನ ಅಗ್ರಸ್ಥಾನದಲ್ಲಿ ಹೆಚ್ಚೇನೂ ಬದಲಾವಣೆ ಸಂಭವಿಸಿಲ್ಲ. ಬಾಬರ್ ಆಜಂ, ಕೊಹ್ಲಿ, ಶರ್ಮ ಮೊದಲ 3 ಸ್ಥಾನದಲ್ಲಿದ್ದಾರೆ. ಬೌಲ್ಟ್ ಮತ್ತು ಶಕಿಬ್ ಕ್ರಮವಾಗಿ ನಂ.1 ಬೌಲರ್ ಹಾಗೂ ಆಲ್‌ರೌಂಡರ್ ಆಗಿ ಉಳಿದಿದ್ದಾರೆ.