Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವೆ ಅನನ್ಯ: ನಂಜುಂಡಸ್ವಾಮಿ

04:09 PM Nov 10, 2020 | Suhan S |

ಯಳಂದೂರು: ಕೃಷಿ, ಶಿಕ್ಷಣ, ಬಡವರ, ಮಹಿಳೆಯರ ಆರ್ಥಿಕ ಸಬಲೀಕರಣ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವೆಅನನ್ಯವಾಗಿದ್ದು ವೀರೇಂದ್ರ ಹೆಗ್ಗಡೆ ಅವರ ದೂರದರ್ಶಿತ್ವದ ಚಿಂತನೆ ಮಾದರಿಯಾಗಿದೆ ಎಂದು ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ ತಿಳಿಸಿದರು.

Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಕಚೇರಿಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಟ್ಯಾಬ್‌ ಹಾಗೂ ಲ್ಯಾಪ್‌ಟಾಪ್‌ ವಿತರಣೆಯ ಜ್ಞಾನತಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಾಮಾಣಿಕತೆ, ಸೇವಾ ಚಟುವಟಿಕೆಗಳಲ್ಲಿ ಸಂಸ್ಥೆ ಅನೇಕ ಪ್ರಥಮಗಳನ್ನು ಸಾಧಿಸಿದೆ. ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸುವಲ್ಲಿ ಸರ್ಕಾರದ ಜತೆಗೂಡಿ ನಿರಂತರವಾಗಿ ತನ್ನ ಸೇವೆ ಮಾಡುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಬಡ ವಿದ್ಯಾರ್ಥಿಗಳಿಗೆ ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌ನ ಅವಶ್ಯಕತೆ ಇದೆ. ಆದರೆ ಇದನ್ನು ಅಷ್ಟು ದುಡ್ಡುಕೊಟ್ಟುಕೊಂಡುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರಿಯಾಯ್ತಿ ದರದಲ್ಲಿ ಬಡ ಮಕ್ಕಳಿಗೆ ನೀಡುವಕಾರ್ಯಕ್ರಮ ಶ್ಲಾಘನೀಯವೆಂದರು.

ಉಪ ತಹಶೀಲ್ದಾರ್‌ ವೈ.ಎಂ.ನಂಜಯ್ಯ ಮಾತನಾಡಿ, ಧರ್ಮಸ್ಥಳ ಸಂಸ್ಥೆ ವತಿಯಿಂದ ರಾಜ್ಯಾದ್ಯಂತ ಹಲವು ಪ್ರಥಮಗಳು ನಡೆದಿವೆ. ಕೋವಿಡ್‌ನ‌ಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಇವರು ಮಾಡಿರುವ ಹಲವು ಕಾರ್ಯಕ್ರಮಗಳಿಂದ ಬಡಕುಟುಂಬಗಳು ನೆಮ್ಮದಿ ಪಡೆದಿವೆ ಎಂದರು.

ಸಂಸ್ಥೆ ಯೋಜನಾಧಿಕಾರಿ ಪ್ರವೀಣ್‌ ಮಾತನಾಡಿ, ರಾಜ್ಯಾದ್ಯಂತ ಏಕ ಕಾಲದಲ್ಲಿ ಸಂಸ್ಥೆ ವತಿಯಿಂದ ಜ್ಞಾನತಾಣ ಯೋಜನೆಯಡಿ 1 ಲಕ್ಷ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಸರ್ಕಾರಿ ಶಾಲೆಯ 5 -10 ನೇ ತರಗತಿವಿದ್ಯಾರ್ಥಿಗಳಿಗೆಕೇವಲ 6 ಸಾವಿರ ರೂ.ಗೆ ಮೊದಲೇ ಪಠ್ಯ ಚಟುವಟಿಕೆ ತುಂಬಿರುವ ಟ್ಯಾಬ್‌ ನೀಡಲಾಗುತ್ತದೆ. ನೆಟ್‌ ಇಲ್ಲದಿದ್ದರೂ ವಿದ್ಯಾರ್ಥಿಗಳು ಇದರಿಂದ ಪಾಠ ಕಲಿಯಬಹುದು. ಇದನ್ನು 100 ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದರು.

Advertisement

ಹಾಗೆಯೇ 18 ಸಾವಿರ, 24 ಸಾವಿರ ರೂ.ಗಳ ರಿಯಾಯ್ತಿ ದರದಲ್ಲಿ ಲ್ಯಾಪ್‌ ಟಾಪ್‌ಗಳನ್ನು 50 ವಿದ್ಯಾರ್ಥಿಗಳಿಗೆ ನೀಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ರಾಜ್ಯಾದ್ಯಂತ ಸಂಸ್ಥೆ 81 ಕೋಟಿ ರೂ. ವಿನಿಯೋಗ ಮಾಡಲಿದೆ ಎಂದು ಮಾಹಿತಿ ನೀಡಿದರು. ಶಿಕ್ಷಣ ಸಂಯೋಜಕ ಶಿವಲಂಕಾರ್‌ ಮಾತನಾಡಿದರು. ಪಪಂ ಮಾಜಿ ಉಪಾಧ್ಯಕ್ಷ ಭೀಮಪ್ಪ, ಮುಖಂಡ ನಿಂಗರಾಜು, ಪ್ರಿನ್ಸ್‌ ಪ್ರವೀಣ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next