ನ್ಯೂಯಾರ್ಕ್ನಲ್ಲಿ ಈಗಾಗಲೇ ಭಾರತದ ಆಟ ಮುಗಿದಿದೆ. ಇಲ್ಲಿಂದ 1,850 ಕಿ.ಮೀ. ದೂರದ ಫ್ಲೋರಿಡಾದಲ್ಲಿ ಕೆನಡಾ ಎದುರಿನ ಮುಖಾಮುಖಿ ಸಾಗಲಿದೆ. ಆದರೆ ಇಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಈ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತದೆ ಹವಾಮಾನ ವರದಿ.
Advertisement
ಮೀಸಲು ಸಾಮರ್ಥ್ಯಭಾರತದ ಮೀಸಲು ಸಾಮರ್ಥ್ಯವನ್ನು ತೋರ್ಪಡಿಸಲು ಕೆನಡಾ ಎದುರಿನ ಪಂದ್ಯ ವೇದಿಕೆ ಆಗಬೇಕಿದೆ. ಆಗ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಕುಲದೀಪ್ ಯಾದವ್, ಯಜುವೇಂದ್ರ ಚಹಲ್ ಅವರಲ್ಲಿ ಒಂದಿಬ್ಬರಾದರೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇರಿಸಿಕೊಳ್ಳಬಹುದು. ಆದರೆ ಇದಕ್ಕೂ ಮಿಗಿಲಾಗಿ ಈವರೆಗಿನ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ಆಟಗಾರರ ಸಾಮರ್ಥ್ಯವನ್ನು ಮತ್ತೂಮ್ಮೆ ಒರೆಗೆ ಹಚ್ಚಬೇಕಾದ ಜರೂರತು ಕೂಡ ಇದೆ.
Related Articles
Advertisement
ನ್ಯೂಯಾರ್ಕ್ನ “ಡ್ರಾಪ್-ಇನ್ ಪಿಚ್’ಗಳಲ್ಲಿ ಅರ್ಷದೀಪ್, ಪಾಂಡ್ಯ (ತಲಾ 7 ವಿಕೆಟ್), ಬುಮ್ರಾ (5 ವಿಕೆಟ್) ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಕ್ಷರ್ ಪಟೇಲ್ ಓಕೆ. ಆದರೆ ಸಿರಾಜ್ (1 ವಿಕೆಟ್), ಜಡೇಜ (ಯಾವುದೇ ವಿಕೆಟ್ ಇಲ್ಲ) ಬೌಲಿಂಗ್ ಟ್ರ್ಯಾಕ್ನಲ್ಲೂ ವಿಫಲರಾಗಿದ್ದಾರೆ. ಸೂಪರ್-8 ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿದ್ದು, ಇಲ್ಲಿನ ಪಿಚ್ಗಳು ಸ್ಪಿನ್ ಫ್ರೆಂಡ್ಲಿ ಆಗಿವೆ.
ಕೆನಡಾ ಒಂದು ಜಯಕೆನಡಾವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಅದು ಐರ್ಲೆಂಡ್ಗೆ 12 ರನ್ ಸೋಲುಣಿಸುವಲ್ಲಿ ಯಶಸ್ವಿಯಾಗಿದೆ. ಆರಂಭಕಾರ ಆರನ್ ಜಾನ್ಸನ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಕಿವೀಸ್-ಉಗಾಂಡ:ಲೆಕ್ಕ ಭರ್ತಿಯ ಪಂದ್ಯ
ಟರೂಬ: ಶನಿವಾರದ ಟಿ20 ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ಉಗಾಂಡ ತಂಡಗಳು ಸೆಣಸಲಿವೆ. ಇದು ಎರಡೂ ತಂಡಗಳಿಗೂ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯವಾಗಿರಲಿದೆ. ಕಾರಣ, ಗ್ರೂಪ್ “ಸಿ’ಯಲ್ಲಿರುವ ಈ ಎರಡೂ ತಂಡಗಳು ಈಗಾಗಲೇ ಹೊರಬಿದ್ದಿವೆ. ಉಗಾಂಡ 3 ಪಂದ್ಯಗಳಲ್ಲಿ ಒಂದನ್ನು ಗೆದ್ದು 2 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಆದರೆ ಬಲಿಷ್ಠ ತಂಡಗಳ ಸಾಲಿನಲ್ಲಿದ್ದ ನ್ಯೂಜಿಲ್ಯಾಂಡ್ 2 ಪಂದ್ಯಗಳನ್ನು ಸೋತು ಕೊನೆಯ ಸ್ಥಾನಕ್ಕೆ ಕುಸಿದಿದೆ.