Advertisement

WTC; ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಗೆ ಯಾವ ತಂಡ ತಲುಪಬಹುದು? ಇಲ್ಲಿದೆ ಲೆಕ್ಕಾಚಾರ

03:37 PM Sep 23, 2024 | Team Udayavani |

ಮುಂಬೈ: ಒಂದು ದಿನದ ಅಂತರದಲ್ಲಿ ಎರಡು ಟೆಸ್ಟ್‌ ಪಂದ್ಯಗಳ ಫಲಿತಾಂಶ ಬಂದಿದೆ. ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಭಾರತ ಗೆದ್ದರೆ, ಸೋಮವಾರ (ಸೆ.23) ನ್ಯೂಜಿಲ್ಯಾಂಡ್‌ ವಿರುದ್ದ ಶ್ರೀಲಂಕಾ ಗೆಲುವು ಸಾಧಿಸಿದೆ. ಹೀಗಾಗಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ (Test Championship final) ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದೆ.

Advertisement

ಸದ್ಯ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಂಕಪಟ್ಟಿಯಲ್ಲಿ ಭಾರತ ತಂಡವು ಮೊದಲ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳನ್ನು ಏಳನ್ನು ಗೆದ್ದಿರುವ ರೋಹಿತ್‌ ಪಡೆ 71.67 ಶೇಕಡಾವಾರು ಅಂಕ ಹೊಂದಿದೆ. ಕಿವೀಸ್‌ ವಿರುದ್ದ ಗೆದ್ದ ಶ್ರೀಲಂಕಾ ಇದೀಗ ಮೂರನೇ ಸ್ಥಾನಕ್ಕೆ ಜಿಗಿದಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.

ಡಬ್ಲ್ಯೂಟಿಸಿ ಫೈನಲ್ ತಲುಪುವ ಅವಕಾಶವನ್ನು ಹೆಚ್ಚಿಸಲು, ಭಾರತವು ತನ್ನ ಉಳಿದ 9 ಪಂದ್ಯಗಳಲ್ಲಿ ಕನಿಷ್ಠ ಆರನ್ನು ಗೆಲ್ಲಬೇಕು. ಹೀಗಾಗಿ ಮುಂದಿನ ನ್ಯೂಜಿಲ್ಯಾಂಡ್‌ ಮತ್ತು ಆಸ್ಟ್ರೇಲಿಯಾ ವಿರುದ್ದದ ಸರಣಿ ಅತ್ಯಂತ ಪ್ರಮುಖವಾಗಲಿದೆ.

ಸದ್ಯದ ಡಬ್ಲ್ಯೂಟಿಸಿಯ ಅಂಕಪಟ್ಟಿಯ ಫಾರ್ಮ್ಯಾಟ್‌ ನಲ್ಲಿ ಗೆಲುವಿಗೆ ಅಂತ್ಯತ ಹೆಚ್ಚಿನ ಮಹತ್ವವಿದೆ. ಪಂದ್ಯಗಳನ್ನು ಗೆಲ್ಲುವುದು ಅಂಕಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅಂಕಪಟ್ಟಿಯಲ್ಲಿ ಅವರ ಶೇಕಡಾವಾರು ಪ್ರಮಾಣವನ್ನು ಸುಧಾರಿಸುತ್ತದೆ.

Advertisement

ಭಾರತವು ಉಳಿದ ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡರೂ ಫೈನಲ್‌ ಗೆ ಅರ್ಹತೆ ಪಡೆಯುವ ಅವಕಾಶ ಹೊಂದಿದೆ.

ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಕೂಡಾ ಮತ್ತೊಂದು ಫೈನಲ್‌ ಮೇಲೆ ಕಣ್ಣಿಟ್ಟಿದೆ. ಉಳಿದಿರುವ ಐದು ಪಂದ್ಯಗಳಲ್ಲಿ (ಭಾರತದ ವಿರುದ್ದವೇ) ನಾಲ್ಕು ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಅಥವಾ ಮೂರು ಗೆದ್ದು ಒಂದು ಪಂದ್ಯ ಡ್ರಾ ಆದರೂ ಆಸೀಸ್‌ ಗೆ ಅವಕಾಶವಿದೆ.

ಮತ್ತೊಂದೆಡೆ ಲಂಕಾ ವಿರುದ್ದ ಸೋಲನುಭವಿಸಿದ ನ್ಯೂಜಿಲ್ಯಾಂಡ್‌ ಉಳಿದಿರುವ ಏಳು ಪಂದ್ಯಗಳಲ್ಲಿ ಆರನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅದರಲ್ಲಿ ಮೂರು ಪಂದ್ಯಗಳನ್ನು ಅದು ಭಾರತದ ವಿರುದ್ದ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next