Advertisement

T20 Worldcup: ಪಾಕಿಸ್ಥಾನಕ್ಕೆ ಉಭಯಸಂಕಟ… ಗೆದ್ದರೂ ಹಾದಿ ದುರ್ಗಮ

10:21 AM Jun 11, 2024 | Team Udayavani |

ನ್ಯೂಯಾರ್ಕ್‌: ಅಮೆರಿಕ ಮತ್ತು ಭಾರತದ ಕೈಯಲ್ಲಿ ಸೋಲಿನೇಟು ತಿಂದಿರುವ ಪಾಕಿಸ್ಥಾನದ ಸ್ಥಿತಿ ಈಗ ಚಿಂತಾಜನಕವಾಗಿದೆ. ಬಾಬರ್‌ ಪಡೆಯ ಮೇಲೆ ಎಲ್ಲ ದಿಕ್ಕುಗಳಿಂದಲೂ ಒತ್ತಡ ಬಿದ್ದಿದೆ. ಮಂಗಳವಾರ ಗಡಗಡ ಎನ್ನುತ್ತಲೇ ಕೆನಡಾವನ್ನು ಎದುರಿಸಲಿದ್ದು, ಇದನ್ನು ಹಾಗೂ ಮುಂದಿನ ಐರ್ಲೆಂಡ್‌ ಎದುರಿನ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದರಷ್ಟೇ ಪಾಕ್‌ ಸೂಪರ್‌-8 ರೇಸ್‌ನಲ್ಲಿ ಉಳಿಯಲಿದೆ ಎಂಬುದು ಸದ್ಯದ ಸ್ಥಿತಿ.

Advertisement

ಇಷ್ಟೇ ಸಾಲದು. ಈ ನಡುವೆ ಬುಧವಾರ ಭಾರತ-ಅಮೆರಿಕ ಎದುರಾ ಗಲಿದ್ದು, ಇಲ್ಲಿ ಗೆದ್ದ ತಂಡಕ್ಕೆ ಮುಂದಿನ ಸುತ್ತಿನ ಟಿಕೆಟ್‌ ಪಕ್ಕಾ ಆಗಲಿದೆ. ಒಂದು ವೇಳೆ ಭಾರತ ಗೆದ್ದರೆ, ಅಮೆರಿಕ ತನ್ನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್‌ಗೆ ಸೋಲುಣಿಸಿದರೆ ಆಗ ಪಾಕಿಸ್ಥಾನದ ಕತೆ ಮುಗಿಯಲಿದೆ.

ಪಾಕಿಸ್ಥಾನದ ಮುಂದಿರುವ ಒಂದು ಕ್ಷೀಣ ಅವಕಾಶವೆಂದರೆ, ಅಮೆರಿಕ ಉಳಿದೆಡರಡೂ ಪಂದ್ಯಗಳಲ್ಲಿ ದೊಡ್ಡ ಸೋಲನುಭವಿಸುವುದು, ಪಾಕ್‌ ಎರಡನ್ನೂ ಭಾರೀ ಅಂತರದಿಂದ ಗೆಲ್ಲುವುದು. ಆಗ ಎರಡೂ ತಂಡಗಳ ಅಂಕ ಸಮನಾಗಲಿದ್ದು (ತಲಾ 4), ರನ್‌ರೇಟ್‌ ಗಣನೆಗೆ ಬರಲಿದೆ. ಸದ್ಯ ಅಮೆರಿಕ +0.626ರಷ್ಟು ಉತ್ಕೃಷ್ಟ ನೆಟ್‌ ರನ್‌ರೇಟ್‌ ಹೊಂದಿದ್ದು, ಪಾಕಿಸ್ಥಾನ ಕೇವಲ -0.150 ನೆಟ್‌ ರನ್‌ರೇಟ್‌ ಹೊಂದಿದೆ. ಇಲ್ಲಿಯೂ ಬಾಬರ್‌ ಪಡೆಗೆ ಭಾರೀ ಹಿನ್ನಡೆಯಾಗಿದೆ.

ಅಕಸ್ಮಾತ್‌ ಮಂಗಳವಾರ ರಾತ್ರಿ ಕೆನಡಾ ವಿರುದ್ಧ ಸೋತರೆ ಯಾವ ಲೆಕ್ಕಾಚಾರವೂ ಅಗತ್ಯ ಬೀಳದು. ಆಗ ಪಾಕಿಸ್ಥಾನ ಹ್ಯಾಟ್ರಿಕ್‌ ಸೋಲು ಹೊತ್ತು ನೇರವಾಗಿ ನಿರ್ಗಮಿಸಲಿದೆ.

ಭರವಸೆ ಮೂಡಿಸದ ಆಟ
2009ರ ಚಾಂಪಿಯನ್‌ ಆಗಿರುವ ಪಾಕಿಸ್ಥಾನ, ಈ ಬಾರಿ ಯಾವ ವಿಭಾಗ ದಲ್ಲೂ ಭರವಸೆಯ ಪ್ರದರ್ಶನ ನೀಡಿಲ್ಲ. ಭಾರತದೆದುರು ಬೌಲಿಂಗ್‌ನಲ್ಲಿ ಮಿಂಚಿದ್ದೊಂದೇ ಗಮನಾರ್ಹ ಸಾಧನೆ. ಇಲ್ಲಿ ನಸೀಮ್‌ ಶಾ ಮತ್ತು ಆಮಿರ್‌ ಉತ್ತಮ ನಿರ್ವಹಣೆಗೈದಿದ್ದರು. ಆದರೆ ಪ್ರಧಾನ ವೇಗಿ ಶಾಹೀನ್‌ ಶಾ ಅಫ್ರಿದಿ ಕ್ಲಿಕ್‌ ಆಗಿಲ್ಲ.

Advertisement

ಇತ್ತ ಕೆನಡಾ “ಎ’ ವಿಭಾಗದಲ್ಲಿ 3ನೇ ಸ್ಥಾನದಲ್ಲಿದೆ. ಅಮೆರಿಕಕ್ಕೆ 7 ವಿಕೆಟ್‌ಗಳಿಂದ ಸೋತ ಬಳಿಕ ಐರ್ಲೆಂಡ್‌ಗೆ 12 ರನ್ನುಗಳ ಸೋಲುಣಿಸಲು ಯಶಸ್ವಿಯಾಗಿದೆ. ಆದರೆ ಅಮೆರಿಕ ವಿರುದ್ಧ ಕೆನಡಾ 194 ರನ್‌ ಪೇರಿಸಿದ್ದನ್ನು ಮರೆ ಯುವಂತಿಲ್ಲ ಕೆನಡಾ ಕಳೆದುಕೊಳ್ಳುವಂಥ ದ್ದೇನೂ ಇಲ್ಲವಾದ ಕಾರಣ ಪಾಕ್‌ ವಿರುದ್ಧ ಬಿಂದಾಸ್‌ ಆಟವಾಡೀತು.

Advertisement

Udayavani is now on Telegram. Click here to join our channel and stay updated with the latest news.

Next