Advertisement

ಪ್ರೇಕ್ಷಕರಿಲ್ಲದೆ ಟಿ20 ವಿಶ್ವಕಪ್ ನಡೆಯುವುದು ಅಸಾಧ್ಯ: ಮ್ಯಾಕ್ಸ್ ವೆಲ್

03:17 PM Apr 14, 2020 | keerthan |

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯನ್ನು ಪ್ರೇಕ್ಷಕರಿಲ್ಲದೆಯೂ ಮುಚ್ಚಿದ ಕ್ರೀಡಾಂಗಣಗಳಲ್ಲಿ ಆಯೋಜಿಸಬಹುದು. ಆದರೆ, ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯನ್ನು ಈ ರೀತಿ ಸಂಘಟಿಸುವುದು ಖಂಡಿತಾ ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯ ತಂಡದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಕ್ರೀಡಾಂಗಣದಲ್ಲಿ ಅಭಿಮಾನಿಗಳಿಲ್ಲದೆ ವಿಶ್ವಕಪ್ ಪಂದ್ಯವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಮ್ಯಾಕ್ಸವೆಲ್ ಹೇಳಿದ್ದಾರೆ.

ಪುರುಷರ ಟಿ20 ವಿಶ್ವಕಪ್ ಆತಿಥ್ಯವನ್ನು ಆಸ್ತ್ರೇಲಿಯಾ ವಹಿಸಿದೆ. ಮುಂದಿನ ಅಕ್ಟೋಬರ್ 15ರಿಂದ ಟಿ20 ವಿಶ್ವಕಪ್ ನಡೆಸಲು ಆಯೋಜಿಸಲಾಗಿದೆ. ಆದರೆ ವಿಶ್ವದ್ಯಾಂತ ಸದ್ಯ ಕೋವಿಡ್ -19 ಸೋಂಕು ಭೀತಿ ಇದ್ದು, ಐಪಿಎಲ್ ನಡೆಯುತ್ತಿಲ್ಲ. ಹೀಗಾಗಿ ವಿಶ್ವಕಪ್ ಕೂಡಾ ಅನಿಶ್ಚಿತತೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next