ಲಂಡನ್: ಕೆಲ ತಿಂಗಳ ಹಿಂದೆ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದೊಂದಿಗೆ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಕ್ರಿಕೆಟ್ ಆಡಿದ ಪ್ರಸಂಗ ನಡೆದಿದೆ.
2022ರ ನವೆಂಬರ್ ನಲ್ಲಿ ಆಸ್ಟ್ರೇಲಿಯಾದ ಎಂಸಿಜಿಯಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ಥಾನವನ್ನು ಐದು ವಿಕೆಟ್ ಅಂತರದಿಂದ ಸೋಲಿಸಿ ಜಯ ಸಾಧಿಸಿದೆ. ಇದು ಇಂಗ್ಲೆಂಡ್‌ನ ಎರಡನೇ ಟಿ20 ವಿಶ್ವಕಪ್ ಗೆಲುವು. 12 ವರ್ಷಗಳ ಮೊದಲು ಪಾಲ್ ಕಾಲಿಂಗ್ ವುಡ್ ತಂಡವು ಆಸ್ಟ್ರೇಲಿಯಾವನ್ನು ಸೋಲಿಸಿ ಮೊದಲ ಐಸಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಇದನ್ನೂ ಓದಿ:ಹಿಂಡೆನ್ ಬರ್ಗ್ ವರದಿ ಬಹಿರಂಗ; ಒಂದೇ ದಿನದಲ್ಲಿ ಜಾಕ್ ಡೋರ್ಸಿಗೆ 4,300 ಕೋಟಿ ರೂ. ನಷ್ಟ!
ಟಿ20 ವಿಶ್ವಕಪ್ ವಿಜೇತ ತಂಡ ಇತ್ತೀಚೆಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿತ್ತು. ಅವರು ಸ್ಯಾಮ್ ಕರ್ರನ್ ಮತ್ತು ಕ್ರಿಸ್ ಜೋರ್ಡಾನ್ ಅವರ ಎಸೆತಗಳನ್ನು ಎದುರಿಸಿದರು.
10 ಡೌನ್ ಸ್ಟ್ರೀಟ್ ನಲ್ಲಿ ರಿಷಿ ಸುನಕ್ ಅವರು ಜೋಸ್ ಬಟ್ಲರ್ ಮತ್ತು ಸಹ ಆಟಗಾರರೊಂದಿಗೆ ಸಮಯ ಕಳೆದರು. ಈ ವೇಳೆ ಕರ್ರನ್ ಮತ್ತು ಜೋರ್ಡಾನ್ ಎಸೆತಗಳಿಗೆ ಬ್ಯಾಟಿಂಗ್ ಮಾಡಿದರು. ಅಲ್ಲದೆ ತಾನೂ ಬೌಲಿಂಗ್ ಮಾಡಿ ಸಂತಸಪಟ್ಟರು.