Advertisement
ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನ ಹೊಂದಿದ್ದರೂ, ಎರಡನೇ ಸೆಮಿಫೈನಲ್ ಭಾರತ ಮತ್ತು ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನವಿಲ್ಲ. ಪಂದ್ಯವನ್ನು ಅದೇ ದಿನ ಪೂರ್ಣಗೊಳಿಸಬೇಕಾಗುತ್ತದೆ ಏಕೆಂದರೆ ಬಾರ್ಬಡೋಸ್‌ನಲ್ಲಿ ಫೈನಲ್ ಪಂದ್ಯ ಶನಿವಾರ ನಡೆಯುತ್ತಿದೆ. ಕೆರಿಬಿಯನ್ ದ್ವೀಪಗಳ ನಡುವಿನ ಪ್ರಯಾಣದ ಯೋಜನೆಗಳನ್ನು ಸರಿಹೊಂದಿಸಲು ಪಂದ್ಯಗಳ ನಡುವೆ 24-ಗಂಟೆಗಳ ಅಂತರವಿರುತ್ತದೆ. ಮಳೆಯು ಆಟಕ್ಕೆ ಅಡ್ಡಿಪಡಿಸಿದರೆ ಫಲಿತಾಂಶ ಪಡೆಯಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ.
Related Articles
Advertisement
2002ರಲ್ಲಿ ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಮಳೆಯಿಂದ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಭಾರತ ಮತ್ತು ಆತಿಥೇಯ ಶ್ರೀಲಂಕಾ ಎರಡು ದಿನಗಳ ಕಾಲ 50 ಓವರ್‌ಗಳ ಫೈನಲ್‌ನಲ್ಲಿ ಆಡಿದ್ದವು. ಎರಡೂ ದಿನ ಸಂಜೆಯ ವೇಳೆಗೆ ಮಳೆ ಬೀಳುವ ಮುನ್ಸೂಚನೆ ನೀಡಲಾಗಿತ್ತು.
ಕೊಲಂಬೊದಲ್ಲಿ ನಡೆದ ಫೈನಲ್‌ನ ಮೊದಲ ದಿನ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 244-5 ರನ್ ಗಳಿಸಿತು. ಮಳೆ ಅಡ್ಡಿಪಡಿಸುವ ಮೊದಲು ಭಾರತ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿಸಿತ್ತು. ಭಾರಿ ಮಳೆ ಸುರಿದ ಕಾರಣ ಮರುದಿನ ಹೊಸ ಪಂದ್ಯ ನಡೆಯಿತು. ಆತಿಥೇಯರು ಮತ್ತೆ ಮೊದಲು ಬ್ಯಾಟ್ ಮಾಡಿ 222ಕ್ಕೆ 7 ಸ್ಕೋರ್ ಮಾಡಿದರು. ಭಾರತ ತಂಡ 38 ಕ್ಕೆ 1ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು, ಮತ್ತೆ ಸುರಿದ ಮಳೆಯು ಆಟವನ್ನು ನಿಲ್ಲಿಸಿತು. ಈ ವೇಳೆ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು.