Advertisement

ವಿಶ್ವಕಪ್ ಗೆದ್ದ ಆಸೀಸ್ ಗೆ 13 ಕೋಟಿ ರೂ ಬಹುಮಾನ; ಭಾರತ-ನಮೀಬಿಯಾಗೆ ಸಮಾನ ಮೊತ್ತ!

05:06 PM Nov 15, 2021 | Team Udayavani |

ದುಬೈ: ಐಸಿಸಿ ಟಿ20 ವಿಶ್ವಕಪ್ ಮುಗಿದಿದೆ. ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲ್ಯಾಂಡ್ ತಂಡ ಮತ್ತೆ ಫೈನಲ್ ನಲ್ಲಿ ಮುಗ್ಗರಿಸಿದೆ.

Advertisement

ಆಸೀಸ್ ತಂಡ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ನ್ಯೂಜಿಲ್ಯಾಂಡ್ ನ ವಿಶ್ವಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು. ಡೇವಿಡ್ ವಾರ್ನರ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಮಿಚೆಲ್ ಮಾರ್ಶ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಟಿ20 ವಿಶ್ವಕಪ್ 2021 ರ ಒಟ್ಟು ಬಹುಮಾನದ ಮೊತ್ತವನ್ನು $5.6 ಮಿಲಿಯನ್ (ಅಂದಾಜು ರೂ 42 ಕೋಟಿ) ಎಂದು ನಿಗದಿಪಡಿಸಲಾಗಿದೆ. ಈ ಬಹುಮಾನದ ಮೊತ್ತವನ್ನು ಪಂದ್ಯಾವಳಿಯಲ್ಲಿ ಭಾಗವಹಿಸುವ 16 ತಂಡಗಳಿಗೆ ಹಂಚಲಾಗುತ್ತದೆ.

ಚಾಂಪಿಯನ್ ಆಸ್ಟ್ರೇಲಿಯ ಒಟ್ಟು ರೂ 13.1 ಕೋಟಿ ಮೊತ್ತವನ್ನು ಪಡೆದಿದೆ. ವಿಶ್ವಕಪ್ ಗೆದ್ದಿದ್ದಕ್ಕಾಗಿ ರೂ 11.9 ಕೋಟಿ ಮತ್ತು ಸೂಪರ್ 12 ಹಂತಗಳಲ್ಲಿ ತಮ್ಮ 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿದ್ದಕ್ಕಾಗಿ ಹೆಚ್ಚುವರಿ ರೂ 1.2 ಕೋಟಿಗಳು ತಂಡದ ಪಾಲಾಗಿದೆ. ಮತ್ತೊಂದೆಡೆ, ರನ್ನರ್ ಅಪ್ ನ್ಯೂಜಿಲೆಂಡ್ 7.15 ಕೋಟಿ ರೂ ಪಡೆದಿದೆ.

ಇದನ್ನೂ ಓದಿ:ವಾರ್ನರ್ ಬದಲು ಬಾಬರ್ ಅಜಂ ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಕೊಡಬೇಕಿತ್ತು: ಅಖ್ತರ್

Advertisement

ಸೂಪರ್ 12 ಹಂತದಲ್ಲಿ ಹೊರಬಿದ್ದ ಭಾರತ ತಂಡ ಕೇವಲ 1.42 ಕೋಟಿ ರೂ ಪಡೆದಿದೆ. ಇಷ್ಟೇ ಮೊತ್ತವನ್ನು ನಮೀಬಿಯಾ ಮತ್ತು ಸ್ಕಾಟ್ಲೆಂಡ್ ತಂಡಗಳು ಪಡೆದಿದೆ.

ಬಹುಮಾನ ಪಟ್ಟಿ

ಆಸ್ಟ್ರೇಲಿಯಾ (ವಿಜೇತರು) – 13.1 ಕೋಟಿ ರೂ

ನ್ಯೂಜಿಲೆಂಡ್ (ರನ್ನರ್ಸ್-ಅಪ್) – 7.15 ಕೋಟಿ ರೂ

ಪಾಕಿಸ್ತಾನ (ಸೆಮಿಫೈನಲ್) – 4.5 ಕೋಟಿ ರೂ

ಇಂಗ್ಲೆಂಡ್ (ಸೆಮಿಫೈನಲ್) – 4.2 ಕೋಟಿ ರೂ

ಶ್ರೀಲಂಕಾ (ಸೂಪರ್ 12) – 2.02 ಕೋಟಿ ರೂ

ದಕ್ಷಿಣ ಆಫ್ರಿಕಾ (ಸೂಪರ್ 12) – 1.72 ಕೋಟಿ ರೂ

ಭಾರತ (ಸೂಪರ್ 12) – 1.42 ಕೋಟಿ ರೂ

ನಮೀಬಿಯಾ (ಸೂಪರ್ 12) – 1.42 ಕೋಟಿ ರೂ

ಸ್ಕಾಟ್ಲೆಂಡ್ (ಸೂಪರ್ 12) – 1.42 ಕೋಟಿ ರೂ

ಬಾಂಗ್ಲಾದೇಶ (ಸೂಪರ್ 12) – 1.12 ಕೋಟಿ ರೂ

ಅಫ್ಘಾನಿಸ್ತಾನ (ಸೂಪರ್ 12) – 1.12 ಕೋಟಿ ರೂ

ವೆಸ್ಟ್ ಇಂಡೀಸ್ (ಸೂಪರ್ 12) – 82 ಲಕ್ಷ ರೂ

ಓಮನ್ (ಕ್ವಾಲಿಫೈಯರ್ ನಲ್ಲಿ ಎಲಿಮಿನೇಟ್) – 60 ಲಕ್ಷ ರೂ

ಐರ್ಲೆಂಡ್ (ಕ್ವಾಲಿಫೈಯರ್ ನಲ್ಲಿ ಎಲಿಮಿನೇಟ್) – 60 ಲಕ್ಷ ರೂ

ಪಪುವಾ ನ್ಯೂಗಿನಿಯಾ (ಕ್ವಾಲಿಫೈಯರ್ ನಲ್ಲಿ ಎಲಿಮಿನೇಟ್) – 30 ಲಕ್ಷ ರೂ

ನೆದರ್ಲೆಂಡ್ಸ್ (ಕ್ವಾಲಿಫೈಯರ್ ನಲ್ಲಿ ಎಲಿಮಿನೇಟ್) – 30 ಲಕ್ಷ ರೂ

Advertisement

Udayavani is now on Telegram. Click here to join our channel and stay updated with the latest news.

Next