Advertisement

T20 World Cup; ನೆದರ್ಲೆಂಡ್ಸ್‌ಗೆ ಎಡ್ವರ್ಡ್ಸ್‌ ನಾಯಕ

11:53 PM May 13, 2024 | Team Udayavani |

ಆಮ್‌ಸ್ಟರ್ಡಮ್‌: ಅನುಭವಿ ಆಟಗಾರ ಸ್ಕಾಟ್‌ ಎಡ್ವರ್ಡ್ಸ್‌ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ನೆದರ್ಲೆಂಡ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. 27 ವರ್ಷದ ಎಡ್ವರ್ಡ್ಸ್‌ 56 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 671 ರನ್‌ ಗಳಿಸಿದ್ದಾರೆ.

Advertisement

ತಂಡದಲ್ಲಿ ಭಾರತೀಯ ಮೂಲದ ಮೂವರು ಆಟಗಾರರೂ ಇದ್ದಾರೆ. ಇವರೆಂದರೆ ತೇಜ ನಿಡಮನೂರು, ವಿಕ್ರಮ್‌ ಸಿಂಗ್‌ ಮತ್ತು ಆರ್ಯನ್‌ ದತ್ತ.
ಇದು ನೆದರ್ಲೆಂಡ್ಸ್‌ ಪಾಲ್ಗೊಳ್ಳುತ್ತಿರುವ ಸತತ 3ನೇ ಟಿ20 ವಿಶ್ವಕಪ್‌ ಆಗಿದೆ. ಜೂ. 4ರಂದು ನೇಪಾಲ ವಿರುದ್ಧ ಡಲ್ಲಾಸ್‌ನಲ್ಲಿ ಮೊದಲ ಪಂದ್ಯ ಆಡಲಿದೆ.

ನೆದರ್ಲೆಂಡ್ಸ್‌ ತಂಡ: ಸ್ಕಾಟ್‌ ಎಡ್ವರ್ಡ್ಸ್‌ (ನಾಯಕ), ಆರ್ಯನ್‌ ದತ್ತ, ಬಾಸ್‌ ಡಿ ಲೀಡ್‌, ಡೇನಿಯಲ್‌ ಡೋರಮ್‌, ಫ್ರೆಡ್‌ ಕ್ಲಾಸೆನ್‌, ಕೈಲ್‌ ಕ್ಲೀನ್‌, ಲೋಗನ್‌ ವಾನ್‌ ಬೀಕ್‌, ಮ್ಯಾಕ್ಸ್‌ ಓ’ಡೌಡ್‌, ಮೈಕಲ್‌ ಲೆವಿಟ್‌, ಪಾಲ್‌ ವಾನ್‌ ಮೀಕೆರೆನ್‌, ಸಿಬ್ರಾಂಡ್‌ ಏಂಜೆಲ್‌ಬ್ರೆಟ್‌, ತೇಜ ನಿಡಮನೂರು, ಟಿಮ್‌ ಪ್ರಿಂಗ್ಲ್, ವಿಕ್ರಮ್‌ ಸಿಂಗ್‌, ವೆಸ್ಲಿ ಬರೇಸಿ.

Advertisement

Udayavani is now on Telegram. Click here to join our channel and stay updated with the latest news.

Next