Advertisement

ಬಾಂಗ್ಲಾವನ್ನು ಬಲೆಗೆ ಬೀಳಿಸೀತೇ ಇಂಗ್ಲೆಂಡ್‌?

11:18 PM Oct 26, 2021 | Team Udayavani |

ಅಬುಧಾಬಿ: ವೆಸ್ಟ್‌ ಇಂಡೀಸ್‌ ಎದುರು ಅನುಭವಿಸಿದ ಕಳೆದ ವಿಶ್ವಕಪ್‌ ಫೈನಲ್‌ ಸೋಲಿಗೆ ಭರ್ಜರಿಯಾಗಿ ಸೇಡು ತೀರಿಸಿಕೊಂಡ ಉತ್ಸಾಹದಲ್ಲಿ ರುವ ಇಂಗ್ಲೆಂಡ್‌ ಬುಧವಾರ ಬಾಂಗ್ಲಾದೇಶಕ್ಕೂ ಆಘಾತವಿಕ್ಕುವ ಯೋಜನೆಯಲ್ಲಿದೆ.

Advertisement

ಇನ್ನೊಂಡೆ ಬಾಂಗ್ಲಾ ಪಡೆ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮುಗ್ಗರಿಸಿದ ಸಂಕಟದಲ್ಲಿದ್ದು, ಗೆಲುವಿನ ಹಳಿ ಏರಲೇಬೇಕಾದ ಅನಿವಾರ್ಯತೆಯಲ್ಲಿದೆ.

ಇಯಾನ್‌ ಮಾರ್ಗನ್‌ ಸಾರಥ್ಯದ ಇಂಗ್ಲೆಂಡ್‌ ಬಲಿಷ್ಠ ಕೆರಿಬಿಯನ್‌ ಪಡೆಯನ್ನು ಜುಜುಬಿ 55ಕ್ಕೆ ದಿಂಡುರುಳಿಸಿತ್ತು. ಆದರೆ ಇದರ ಸಂಪೂರ್ಣ ಶ್ರೇಯವನ್ನು ಇಂಗ್ಲೆಂಡ್‌ ಬೌಲರ್‌ಗಳಿಗೆ ನೀಡುವುದು ತಪ್ಪಾಗುತ್ತದೆ. ಇದರಲ್ಲಿ ವಿಂಡೀಸ್‌ ಕ್ರಿಕೆಟಿಗರ ಬೇಜವಾಬ್ದಾರಿ ಆಟದ ಪಾಲು ಕೂಡ ಸಾಕಷ್ಟಿದೆ.

ಇಂಗ್ಲೆಂಡ್‌ ಕೇವಲ 14.2 ಓವರ್‌ಗಳಲ್ಲಿ ವಿಂಡೀಸ್‌ ಇನ್ನಿಂಗ್ಸಿಗೆ ತೆರೆ ಎಳೆದಿತ್ತು. ಆದರೆ ಏಶ್ಯದ ಟ್ರ್ಯಾಕ್‌ಗಳಲ್ಲಿ ಏಶ್ಯನ್‌ ತಂಡವನ್ನು ಎದುರಿಸುವುದು ಇಂಗ್ಲೆಂಡಿಗೆ ಯಾವತ್ತೂ ದೊಡ್ಡ ಸವಾಲಾಗಿರುತ್ತದೆ. ಅಲ್ಲದೇ ಅಬುಧಾಬಿಯ 32 ಡಿಗ್ರಿಯಷ್ಟು ಬಿಸಿಯನ್ನು ಎದುರಿಸಿ ನಿಲ್ಲುವುದು ಕೂಡ ಸುಲಭವಲ್ಲ. ವಿಂಡೀಸ್‌ ಎದುರಿನ ಪಂದ್ಯವನ್ನು ಇಂಗ್ಲೆಂಡ್‌ ದುಬಾೖಯಲ್ಲಿ ರಾತ್ರಿ ಆಡಿತ್ತು. ಆದರೆ ಬಾಂಗ್ಲಾವನ್ನು ಅಪರಾಹ್ನ ಎದುರಿಸಬೇಕಿದೆ.

ಇದನ್ನೂ ಓದಿ:ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

Advertisement

ಹೆಚ್ಚುವರಿ ಪೇಸರ್‌?
ಅಬುಧಾಬಿ ಟ್ರ್ಯಾಕ್ ಪೇಸ್‌ ಬೌಲಿಂಗಿಗೆ ಹೆಚ್ಚಿನ ನೆರವು ನೀಡಲಿದೆ. ಚೇಸಿಂಗ್‌ ಸುಲಭ. ಹೀಗಾಗಿ ಹೆಚ್ಚುವರಿಯಾಗಿ ಮಾರ್ಕ್‌ ವುಡ್‌ ಅವರಿಗೆ ಅವಕಾಶ ನೀಡುವ ಯೋಜನೆ ಇಂಗ್ಲೆಂಡಿನದ್ದು. ಆದರೆ ವಿಂಡೀಸಿಗೆ ಹಾನಿಗೈದ ಜೋಡಿ ಸ್ಪಿನ್ನರ್ ಮೊಯಿನ್‌ ಅಲಿ ಮತ್ತು ಆದಿಲ್‌ ರಶೀದ್‌ ಇದ್ದೇ ಇರುತ್ತಾರೆ. ಅಲಿ ಪವರ್‌ ಪ್ಲೇಯಲ್ಲಿ ವಿಂಡೀಸಿಗೆ ಅವಳಿ ಆಘಾತವಿಕ್ಕಿದ್ದರು. ರಶೀದ್‌ 2 ರನ್ನಿಗೆ 4 ವಿಕೆಟ್‌ ಉಡಾಯಿಸಿ ಫಿನಿಶಿಂಗ್‌ ಟಚ್‌ ಕೊಟ್ಟಿದ್ದರು. ಬಾಂಗ್ಲಾ ಸ್ಪಿನ್‌ ಈಗಲೂ ಶಕಿಬ್‌ ಅವರನ್ನೇ ನಂಬಿಕೊಂಡಿದೆ.

ಇಂಗ್ಲೆಂಡಿನ ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠ. ಆದರೆ ವಿಂಡೀಸ್‌ ಎದುರು 55 ರನ್‌ ಚೇಸಿಂಗ್‌ ವೇಳೆ 4 ವಿಕೆಟ್‌ ಉರುಳಿಸಿಕೊಂಡಿದ್ದನ್ನು ಮರೆಯುವಂತಿಲ್ಲ. ಬಾಂಗ್ಲಾ ಬೌಲರ್ ಆರಂಭಿಕ ಆಘಾತವಿಕ್ಕಿದರೆ ಸ್ಪರ್ಧೆ ಅತ್ಯಂತ ರೋಚಕವಾಗಿರಲಿದೆ.

ಅಂದಹಾಗೆ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌-ಬಾಂಗ್ಲಾದೇಶ ತಂಡಗಳದ್ದು 2-2 ಸಮಬಲದ ಸಾಧನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next