Advertisement
ಜಗತ್ತನ್ನೇ ವ್ಯಾಪಿಸಿರುವ ಕೋವಿಡ್ ದಿಂದಾಗಿ ಐಪಿಎಲ್ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹಾಗೆಯೇ 2020ರ ಕೊನೆಯಲ್ಲಿ ಆಸ್ಟ್ರೇಲಿಯ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ಕೂಡ ಅನಿಶ್ಚಿತತೆಯಲ್ಲಿದೆ. ಈಗಿನ ಲೆಕ್ಕಾಚಾರವೊಂದರ ಪ್ರಕಾರ ಟಿ20 ವಿಶ್ವಕಪ್ ಪಂದ್ಯಾವಳಿ 2022ಕ್ಕೆ ಮುಂದೂಡಲ್ಪಡಲಿದೆ. ಇಲ್ಲಿ ಲಭಿಸಿದ ಅವಕಾಶದಲ್ಲಿ ಐಪಿಎಲ್ ಪಂದ್ಯಾ ವಳಿಯನ್ನು ಆಡಿಸುವುದು ಬಿಸಿಸಿಐ ಯೋಜನೆಯಾಗಿದೆ.
ಬಿಸಿಸಿಐ ಮೂಲದ ಪ್ರಕಾರ ಟಿ20 ವಿಶ್ವಕಪ್ ಮುಂದಿನ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇಲ್ಲಿ ನಾನಾ ಲೆಕ್ಕಾಚಾರಗಳಿವೆ. ಒಂದು ವೇಳೆ ಈ ವರ್ಷದ ಟಿ20 ವಿಶ್ವಕಪ್ ಜಾಗದಲ್ಲಿ ಐಪಿಎಲ್ ನಡೆದರೂ ಅನಂತರದ 3-4 ತಿಂಗಳಲ್ಲೇ 2021ರ ಐಪಿಎಲ್ ನಡೆಸು ವುದು ಎಷ್ಟು ಸಮಂಜಸ ಎಂಬುದು ಮುಖ್ಯ ಪ್ರಶ್ನೆ. ಇದರಲ್ಲಿ ಸ್ಟಾರ್ ಸ್ಪೋರ್ಟ್ಸ್ ಪಾತ್ರವೂ ನಿರ್ಣಾಯಕ ಎಂಬುದಾಗಿ ಬಿಸಿಸಿಐ ಹೇಳಿದೆ.
Related Articles
ಐಸಿಸಿ ವೇಳಾಪಟ್ಟಿ ಪ್ರಕಾರ 2021ರಲ್ಲೂ ಟಿ20 ವಿಶ್ವಕಪ್ ನಡೆಯಲಿದ್ದು, ಇದು ಭಾರತದ ಆತಿಥ್ಯದಲ್ಲಿ ಸಾಗಲಿರುವುದು ವಿಶೇಷ. ಇದರ ದಿನಾಂಕವಿನ್ನೂ ಪ್ರಕಟಗೊಂಡಿಲ್ಲ. ತನ್ನ ಆತಿಥ್ಯವನ್ನು ಐಸಿಸಿ ಕಸಿದುಕೊಳ್ಳದು ಎಂಬ ವಿಶ್ವಾಸ ಬಿಸಿಸಿಐನದ್ದು. ಆದರೆ ಸೀಮಿತ ಅವಧಿಯಲ್ಲಿ ಅದೆಷ್ಟು ವಿಶ್ವಕಪ್ ಪಂದ್ಯಾವಳಿಗಳನ್ನು ನಡೆಸಲು ಸಾಧ್ಯ ಎಂಬ ಪ್ರಶ್ನೆಗೂ ಇಲ್ಲಿ ಪರಿಹಾರ ಹುಡುಕಬೇಕಿದೆ.
Advertisement