Advertisement
ಒಮಾನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪ್ರಾಥಮಿಕ ಸುತ್ತಿನ ಪಂದ್ಯಗಳಿಗೆ 3 ಸಾವಿರದಷ್ಟು ವೀಕ್ಷಕರಿಗೆ ಅವಕಾಶ ನೀಡಲಾ ಗುವುದು ಎಂದು ಐಸಿಸಿ ತಿಳಿಸಿದೆ. ಅಲ್ಲೀಗ ಶಹೀನ್ ಚಂಡಮಾರುತ ಬೀಸುತ್ತಿದ್ದು, ಸ್ಟೇಡಿ ಯಂಗಳಿಗೂ ಸಾಕಷ್ಟು ಹಾನಿ ಉಂಟು ಮಾಡಿದ ಬಗ್ಗೆ ವರದಿಯಾಗಿದೆ. ಒಮಾನ್ ಪ್ರವೇಶಿಸುವ ಹಾಗೂ ಇಲ್ಲಿಂದ ತೆರಳುವ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ.
“ಕೊರೊನಾ ತೀವ್ರತೆ ಕಡಿಮೆ ಗೊಂಡ ಬಳಿಕ ನಡೆಯಲಿರುವ ವಿಶ್ವ ಮಟ್ಟದ ಅತೀ ದೊಡ್ಡ ಕ್ರಿಕೆಟ್ ಪಂದ್ಯಾವಳಿ ಇದಾಗಿದೆ. ಹೀಗಾಗಿ ಯುಎಇ ಆರೋಗ್ಯ ಮಾರ್ಗಸೂಚಿಯನ್ವಯ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ವೀಕ್ಷಕರಿಗೆ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶ’ ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ. ಇದನ್ನೂ ಓದಿ:ಕೈ ಕೊಟ್ಟ ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಂ | ಬಳಕೆದಾರರ ಪರದಾಟ
Related Articles
Advertisement