Advertisement

Women’s T20 World Cup 2024: ನ್ಯೂಜಿಲ್ಯಾಂಡ್‌ ತಂಡ ಪ್ರಕಟ

10:52 PM Sep 11, 2024 | Team Udayavani |

ವೆಲ್ಲಿಂಗ್ಟನ್‌: ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಾಗಿ ನ್ಯೂಜಿಲ್ಯಾಂಡ್‌ ತಂಡವನ್ನು ಪ್ರಕಟಿಸಲಾಗಿದೆ. ಪೇಸ್‌ ಬೌಲರ್‌ ರೋಸ್‌ಮೇರಿ ಮೈರ್‌ ಮತ್ತು ಆಫ್ಸ್ಪಿನ್ನರ್‌ ಲೀಗ್‌ ಕಾಸ್ಪರೆಕ್‌ ಅವರ ಪುನರಾಗಮನವಾಗಿದೆ.

Advertisement

ರೋಸ್‌ಮೇರಿ ಮೈರ್‌ ಕಳೆದ ಮಾರ್ಚ್‌ನಲ್ಲಿ ಇಂಗ್ಲೆಂಡ್‌ ಪ್ರವಾಸದ ವೇಳೆ ಬೆನ್ನಿನ ನೋವಿಗೆ ಸಿಲುಕಿದ್ದರು. ಇನ್ನೊಂದೆಡೆ ಕಾಸ್ಪರೆಕ್‌ ಒಂದು ವರ್ಷದ ಬಳಿಕ ಕಿವೀಸ್‌ ಟಿ20 ತಂಡಕ್ಕೆ ಮರಳುತ್ತಿದ್ದಾರೆ.

ಅನುಭವಿ ಆಟಗಾರ್ತಿಯರಾದ, ನಾಯಕಿ ಸೋಫಿ ಡಿವೈನ್‌ ಮತ್ತು ಮಾಜಿ ನಾಯಕಿ ಸುಝೀ ಬೇಟ್ಸ್‌ ಸತತ 9ನೇ ವಿಶ್ವಕಪ್‌ ಆಡುತ್ತಿರುವುದು ವಿಶೇಷ. ಇವರಿಬ್ಬರೂ 2009ರ ಚೊಚ್ಚಲ ಟಿ20 ವಿಶ್ವಕಪ್‌ನಿಂದಲೂ ಆಡುತ್ತ ಬಂದಿದ್ದರು.

ನ್ಯೂಜಿಲ್ಯಾಂಡ್‌ ತಂಡ: ಸೋಫಿ ಡಿವೈನ್‌ (ನಾಯಕಿ), ಸುಝೀ ಬೇಟ್ಸ್‌, ಈಡನ್‌ ಕಾರ್ಸನ್‌, ಇಝೀ ಗೇಜ್‌, ಮ್ಯಾಡಿ ಗ್ರೀನ್‌, ಬ್ರೂಕ್‌ ಹಾಲಿಡೇ, ಫ್ರಾನ್‌ ಜೊನಾಸ್‌, ಲೀಗ್‌ ಕಾಸ್ಪರೆಕ್‌, ಜೆಸ್‌ ಕೆರ್‌, ಮಿಲೀ ಕೆರ್‌, ರೋಸ್‌ಮೇರಿ ಮೈರ್‌, ಮೋಲಿ ಪೆನ್‌ಫೋಲ್ಡ್‌, ಜಾರ್ಜಿಯಾ ಪ್ಲಿಮ್ಮರ್‌, ಹನ್ನಾ ರೋವ್‌, ಲೀ ಟಹುಹು.

Advertisement

Udayavani is now on Telegram. Click here to join our channel and stay updated with the latest news.

Next