ಬಸೆಟರ್: ಪ್ರವಾಸಿ ಭಾರತ ತಂಡದೆದುರಿನ ಮೂರನೇ ಟಿ20 ಪಂದ್ಯದಲ್ಲಿ ಆರಂಭದಲ್ಲಿ ರನ್ ಗಳಿಸಲು ಒದ್ದಾಡಿದರೂ ವೆಸ್ಟ್ಇಂಡೀಸ್ ತಂಡವು ಅಂತಿಮವಾಗಿ 5 ವಿಕೆಟಿಗೆ 164 ರನ್ ಗಳಿಸಲು ಶಕ್ತವಾಗಿದೆ. ಕೊನೆಹಂತದಲ್ಲಿ ಪೊವೆಲ್ ಮತ್ತು ಶಿಮ್ರಾನ್ ಹೆಟ್ಮೈರ್ ಸಿಡಿದ ಕಾರಣ ತಂಡದ ಮೊತ್ತ 150ರ ಗಡಿ ದಾಟುವಂತಾಯಿತು.
ಭಾರತೀಯ ಬೌಲರ್ಗಳ ಬಿಗು ದಾಳಿಗೆ ರನ್ ಗಳಿಸಲು ಒದ್ದಾಡಿದ ವಿಂಡೀಸ್ ಆಟಗಾರರು ಆರಂಭದಲ್ಲಿ ನಿಧಾನಗತಿಯಲ್ಲಿ ಎಚ್ಚರಿಕೆಯಿಂದ ಆಡಿದರು. ಆರಂಭಿಕ ಕೈಲ್ ಮೇರ್ ಅವರ ಸ್ಫೋಟಕ ಆಟದಿಂದಾಗಿ ತಂಡ ಉತ್ತಮ ಮೊತ್ತ ಪೇರಿಸುವಂತಾಯಿತು. ಅವರು 50 ಎಸೆತ ಎದುರಿಸಿ 8 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 73 ರನ್ ಗಳಿಸಿ ಭುವನೇಶ್ವರ್ಗೆ ವಿಕೆಟ್ ಒಪ್ಪಿಸಿದರು.
ಬಿಗು ದಾಳಿ ಸಂಘಟಿಸಿದ ಹಾರ್ದಿಕ್ ಪಾಂಡ್ಯ ತನ್ನ 4 ಓವರ್ಗಳ ದಾಳಿಯಲ್ಲಿ ಕೇವಲ 19 ರನ್ ನೀಡಿ ಒಂದು ವಿಕೆಟ್ ಪಡೆದರು. ಭುವನೇಶ್ವರ್ 35 ರನ್ನಿಗೆ 2 ವಿಕೆಟ್ ಹಾರಿಸಿದರು. ಆರ್. ಅಶ್ವಿನ್ ತನ್ನ 4 ಓವರ್ಗಳ ದಾಳಿಯಲ್ಲಿ 26 ರನ್ ಬಿಟ್ಟುಕೊಟ್ಟರು.