Advertisement

ವನಿತಾ ತ್ರಿಕೋನ ಟಿ20: ಪ್ರಶಸ್ತಿಗಾಗಿ ಬಲಿಷ್ಠ ತಂಡಗಳ ಸೆಣಸಾಟ

07:00 AM Mar 31, 2018 | Team Udayavani |

ಮುಂಬಯಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವನಿತೆಯರ ತ್ರಿಕೋನ ಟಿ20 ಸರಣಿಯ ಫೈನಲ್‌ ಪಂದ್ಯ ಶನಿವಾರ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ನಡುವೆ ನಡೆಯಲಿದೆ. ಆದರೆ, ಆತಿಥ್ಯದ ರಾಷ್ಟ್ರವಾಗಿರುವ ಭಾರತ 4ಪಂದ್ಯದಲ್ಲಿ 3 ಪಂದ್ಯ ಸೋತು ಫೈನಲ್‌ನಿಂದ ಹೊರಬಿದ್ದಿದೆ.

Advertisement

ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ಎರಡೂ ತಂಡಗಳು ಬಲಿಷ್ಠವಾಗಿರುವುದರಿಂದ ಫೈನಲ್‌ನಲ್ಲಿ ತೀವ್ರ ಹೋರಾಟವನ್ನು ನಿರೀಕ್ಷಿಸಬಹುದು. ಲೀಗ್‌ ಹಂತದಲ್ಲಿ ಆಸ್ಟ್ರೇಲಿಯ ತಂಡ ಭಾರತದ ವಿರುದ್ಧ ಒಂದು ಪಂದ್ಯದಲ್ಲಿ 6 ವಿಕೆಟ್‌ನಿಂದ ಜಯ ಸಾಧಿಸಿದರೆ, ಮತ್ತೂಂದು ಪಂದ್ಯದಲ್ಲಿ 36 ರನ್‌ಗಳಿಂದ ಜಯ ಸಾಧಿಸಿದೆ. ಅದೇ ರೀತಿ ಇಂಗ್ಲೆಂಡ್‌ ವಿರುದ್ಧ ಒಂದು ಪಂದ್ಯದಲ್ಲಿ 8 ವಿಕೆಟ್‌ ಗೆಲುವು ಸಾಧಿಸಿದರೆ, ಮತ್ತೂಂದು ಪಂದ್ಯದಲ್ಲಿ 8 ವಿಕೆಟ್‌ನಿಂದ ಸೋಲುಂಡಿದೆ. ಈ ಮೂಲಕ 4 ಪಂದ್ಯದಲ್ಲಿ 6 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿಯೇ ಫೈನಲ್‌ ಪ್ರವೇಶಿಸಿದೆ.

ಅದೇ ರೀತಿ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯ ವಿರುದ್ಧ ಒಂದು ಪಂದ್ಯದಲ್ಲಿ 8 ವಿಕೆಟ್‌ ಸೋಲುಂಡರೆ, ಮತ್ತೂಂದು ಪಂದ್ಯದಲ್ಲಿ 8 ವಿಕೆಟ್‌ ಗೆಲುವು ಸಾಧಿಸಿದೆ. ಭಾರತದ ವಿರುದ್ಧ ಒಂದು ಪಂದ್ಯದಲ್ಲಿ 45 ರನ್‌ಗಳಿಂದ ಗೆಲುವು ಸಾಧಿಸಿದರೆ, ಮತ್ತೂಂದು ಪಂದ್ಯದಲ್ಲಿ 8 ವಿಕೆಟ್‌ನಿಂದ ಸೋಲುಂಡಿದೆ. ಒಟ್ಟು 4 ಪಂದ್ಯಗಳಿಂದ 4 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸಿದೆ.

ಇಂಗ್ಲೆಂಡ್‌ ಪರ ಬ್ಯಾಟಿಂಗ್‌ನಲ್ಲಿ ಡೇನಿಯಲ್‌ ವ್ಯಾಟ್‌ (179 ರನ್‌) ಭರ್ಜರಿಯಾಗಿ ಮಿಂಚಿದ್ದಾರೆ. ಭಾರತದ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿ ಶತಕ ದಾಖಲಿಸಿ ತಂಡದ ಗೆಲುವಿಗೆ ನೆರವಾಗಿದ್ದರು. ಅದೇ ರೀತಿ ಟಮ್ಮಿ ಬ್ಯೂಮಾಂಟ್‌ (120 ರನ್‌) ಒಂದು ಅರ್ಧಶತಕ ಸಿಡಿಸಿದ್ದಾರೆ. ನಟಾಲಿಯಾ ಸಿವರ್‌ (105 ರನ್‌) ಕೂಡ ಒಂದು ಅರ್ಧಶತಕ ಸಿಡಿಸಿ  ಫಾರ್ಮ್ ಸಾಬೀತುಪಡಿಸಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಹೊರಬರುತ್ತಿಲ್ಲ. ಆಲ್‌ರೌಂಡ್‌ ಪ್ರದರ್ಶನ ನೀಡುತ್ತಿರುವ ನಟಾಲಿಯಾ ಸಿವರ್‌ 4 ವಿಕೆಟ್‌ ಪಡೆದರೆ, ಡೇನಿಯಲ್‌ ಹೆಜೆಲ್‌ 3 ವಿಕೆಟ್‌ ಪಡೆದಿದ್ದಾರೆ. ಉಳಿದ ಬೌಲರ್‌ಗಳು ವಿಕೆಟ್‌ ಪಡೆಯುವಲ್ಲಿ ಎಡವುತ್ತಿದ್ದಾರೆ.

ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ಪ್ರಬಲ
ಆಸ್ಟ್ರೇಲಿಯ ಪರ ಬ್ಯಾಟಿಂಗ್‌ನಲ್ಲಿ ಮೂನಿ ಕೂಟದಲ್ಲಿ 120 ರನ್‌ ಬಾರಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕ ಸೇರಿದೆ. ವಿಲ್ಲಾನಿ ಕೂಟದಲ್ಲಿ 106 ರನ್‌ ಬಾರಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕ ಸೇರಿದೆ. ಆದರೆ ಬ್ಯಾಟಿಂಗ್‌ನಲ್ಲಿ ಇಂಗ್ಲೆಂಡ್‌ಗೆ ಹೋಲಿಸಿದರೆ ಸ್ವಲ್ಪ ವೀಕ್‌ ಆಗಿಯೇ ಕಾಣಿಸುತ್ತದೆ. ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಕೂಟದಲ್ಲಿ ಡೆಲಿಸ್ಸಾ ಕಿಮ್ಮಿನ್ಸ್‌ 6 ವಿಕೆಟ್‌, ಮೇಗನ್‌ ಸ್ಕಟ್‌ 6 ವಿಕೆಟ್‌, ಆ್ಯಶ್ಲೇ ಗಾಡ್ನìರ್‌ 4 ವಿಕೆಟ್‌ ಪಡೆದಿದ್ದಾರೆ. ಒಟ್ಟಾರೆ ಎರಡೂ ತಂಡಗಳ ಬಲಾಬಲವನ್ನು ನೋಡಿದರೆ ಆಸ್ಟ್ರೇಲಿಯ ಬೌಲಿಂಗ್‌ನಲ್ಲಿ ಮತ್ತು ಇಂಗ್ಲೆಂಡ್‌ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next