Advertisement

ಮೊದಲ ಟಿ20: ಮುಗ್ಗರಿಸಿದ ಭಾರತೀಯರು

12:30 AM Feb 07, 2019 | Team Udayavani |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ ನೆಲದಲ್ಲಿ ಭಾರೀ ಅಂತರದಿಂದ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿ ತೇಲಾಡುತ್ತಿದ್ದ ಭಾರತ ತಂಡ ಟಿ20 ಸರಣಿಯಲ್ಲಿ ಇದಕ್ಕೆ ವ್ಯತಿರಿಕ್ತ ಆರಂಭ ಕಂಡುಕೊಂಡಿದೆ. ಮೊದಲ ಮುಖಾಮುಖೀಯನ್ನು 80 ರನ್ನುಗಳಿಂದ ಸೋತಿದೆ. ಇದು ಟಿ20 ಇತಿಹಾಸದಲ್ಲೇ ಭಾರತ ಅನುಭವಿಸಿದ ರನ್‌ ಅಂತರದ ಅತೀ ದೊಡ್ಡ ಸೋಲು!

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ 6 ವಿಕೆಟಿಗೆ 219 ರನ್‌ ಸೂರೆಗೈದಾಗಲೇ ರೋಹಿತ್‌ ಪಡೆ ಈ ಗುರಿ ಮುಟ್ಟುವುದು ಕಷ್ಟ ಎಂಬ ಸೂಚನೆ ಲಭಿಸಿತ್ತು. ಇದು ನಿಜವಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. 19.2 ಓವರ್‌ಗಳಲ್ಲಿ 139ಕ್ಕೆ ಆಲೌಟಾಗಿ ಬೃಹತ್‌ ಸೋಲಿನ ಕಂಟಕಕ್ಕೆ ಸಿಲುಕಿತು. ಇದಕ್ಕೂ ಮುನ್ನ 2010ರ ಬ್ರಿಜ್‌ಟೌನ್‌ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 49 ರನ್ನುಗಳಿಂದ ಎಡವಿದ್ದು ಭಾರತದ ಭಾರೀ ಸೋಲಾಗಿತ್ತು.

ಜೋಶ್‌ ತೋರದ ಭಾರತ
ಇನ್ನೂರರಾಚೆಯ ಗುರಿಯನ್ನು ಬೆನ್ನಟ್ಟಲು ಅಗತ್ಯವುಳ್ಳ ಬ್ಯಾಟಿಂಗ್‌ ಜೋಶ್‌ ತೋರ್ಪಡಿಸಲು ಭಾರತ ಸಂಪೂರ್ಣ ವಿಫ‌ಲವಾಯಿತು. ರೋಹಿತ್‌ ಶರ್ಮ (1) ಮತ್ತು ಶಿಖರ್‌ ಧವನ್‌ (29) ಪವರ್‌-ಪ್ಲೇ ಅವಧಿಯಲ್ಲಿ ನಿರ್ಗಮಿಸಿದ್ದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಬಳಿಕ ವಿಜಯ್‌ ಶಂಕರ್‌ 18 ಎಸೆತಗಳಿಂದ 27 ರನ್‌ (2 ಬೌಂಡರಿ, 2 ಸಿಕ್ಸರ್‌) ಬಾರಿಸಿ ಅಬ್ಬರಿಸಿದರೂ ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾದರು.

“ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌’ಗಳಾಗಿ ಬಂದ ಕೀಪರ್ ರಿಷಬ್‌ ಪಂತ್‌ (4) ಮತ್ತು ದಿನೇಶ್‌ ಕಾರ್ತಿಕ್‌ (5) ಕ್ಲಿಕ್‌ ಆಗಲಿಲ್ಲ. 31 ಎಸೆತಗಳಿಂದ 39 ರನ್‌ (5 ಬೌಂಡರಿ, 1 ಸಿಕ್ಸರ್‌) ಬಾರಿಸಿದ ಪ್ರಧಾನ ಕೀಪರ್‌ ಧೋನಿ ಅವರದೇ ಭಾರತದ ಸರದಿಯ ಗರಿಷ್ಠ ಮೊತ್ತ.

ಬಿಗ್‌ ಹಿಟ್ಟರ್‌ ಹಾರ್ದಿಕ್‌ ಪಾಂಡ್ಯ (4) ಸಿಡಿಯದೇ ಹೋದರು. ಸೋದರ ಕೃಣಾಲ್‌ ಪಾಂಡ್ಯ ಅವರಿಂದ 20 ರನ್‌ ಬಂತು. ಕೊನೆಯ ಮೂವರು ತಲಾ ಒಂದೊಂದು ರನ್ನಿಗೆ ನಿರ್ಗಮಿಸಿ ಭಾರತದ ಕುಸಿತವನ್ನು ತ್ವರಿತಗೊಳಿಸಿದರು. ಸೌಥಿ, ಫ‌ರ್ಗ್ಯುಸನ್‌, ಸ್ಯಾಂಟ್ನರ್‌, ಸೋಧಿ ಸೇರಿಕೊಂಡು ಅಡಿಗಡಿಗೂ ಭಾರತಕ್ಕೆ ಅಗ್ನಿಪರೀಕ್ಷೆ ಒಡ್ಡುತ್ತಲೇ ಹೋದರು.

Advertisement

ಸೀಫ‌ರ್ಟ್‌: 14ರಿಂದ 84ಕ್ಕೆ!
ನ್ಯೂಜಿಲ್ಯಾಂಡಿನ ಬೃಹತ್‌ ಮೊತ್ತಕ್ಕೆ ಕಾರಣರಾದವರು ಓಪನರ್‌ ಟಿಮ್‌ ಸೀಫ‌ರ್ಟ್‌. ದೇಶಿ ಟಿ20 ಕ್ರಿಕೆಟ್‌ನಲ್ಲಿ ಕೇವಲ 40 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದ ಸೀಫ‌ರ್ಟ್‌, ಇಲ್ಲಿಯೂ ಅದೇ ಜೋಶ್‌ನಲ್ಲಿದ್ದರು. ಕೀಪರ್‌ ಕೂಡ ಆಗಿರುವ ಸೀಫ‌ರ್ಟ್‌ ಭಾರತದ ಬೌಲರ್‌ಗಳ ಮೇಲೆ ದಂಡೆತ್ತಿ ಹೋಗಿ ಕೇವಲ 43 ಎಸೆತಗಳಿಂದ 84 ರನ್‌ ಬಾರಿಸಿದರು. ಅವರ ಈ ಜೀವನಶ್ರೇಷ್ಠ ಹಾಗೂ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 6 ಪ್ರಚಂಡ ಸಿಕ್ಸರ್‌, 7 ಫೋರ್‌ ಸಿಡಿದಿತ್ತು. 24 ರನ್‌ ಮಾಡಿದ ವೇಳೆ ಅವರಿಗೆ ಧೋನಿಯಿಂದ ಜೀವದಾನವೊಂದು ಲಭಿಸಿತ್ತು. ಇದು ಸೀಫ‌ರ್ಟ್‌ ಅವರ 9ನೇ ಟಿ20 ಪಂದ್ಯವಾಗಿದ್ದು, ಹಿಂದಿನ ಸರ್ವಾಧಿಕ ಗಳಿಕೆ ಕೇವಲ 14 ರನ್‌ ಆಗಿತ್ತು!

ಮತ್ತೋರ್ವ ಓಪನರ್‌ ಕಾಲಿನ್‌ ಮುನ್ರೊ ಕೂಡ ಉತ್ತಮ ಲಯದಲ್ಲಿದ್ದರು. 2 ಬೌಂಡರಿ, 2 ಸಿಕ್ಸರ್‌ ನೆರವಿನಿಂದ ಅವರು 20 ಎಸೆತಗಳಿಂದ 34 ರನ್‌ ಹೊಡೆದರು. ಮೊದಲ ವಿಕೆಟಿಗೆ 8.2 ಓವರ್‌ಗಳಿಂದ 86 ರನ್‌ ಹರಿದು ಬಂತು. ವಿಲಿಯಮ್ಸನ್‌, ಕ್ಯುಗೆಲೀನ್‌ ಕೂಡ ಮಿಂಚಿನ ಆಟವಾಡಿದರು. ಕಿವೀಸ್‌ ಆರ್ಭಟದ ವೇಳೆ ಭಾರತದ ಯಾವುದೇ ಬೌಲಿಂಗ್‌ ತಂತ್ರ ಪ್ರಯೋಜನಕ್ಕೆ ಬರಲಿಲ್ಲ.

“200 ಪ್ಲಸ್‌ ಮೊತ್ತವನ್ನು ಬೆನ್ನಟ್ಟುವುದು ಯಾವತ್ತೂ ಸುಲಭವಲ್ಲ. ಇಂಥ ಸಂದರ್ಭದಲ್ಲಿ ದೊಡ್ಡ ಜತೆಯಾಟ ಅಗತ್ಯ. ನಾವು ಇದರಲ್ಲಿ ವಿಫ‌ಲರಾದೆವು’
– ರೋಹಿತ್‌ ಶರ್ಮ

ಸ್ಕೋರ್‌ಪಟ್ಟಿ
ನ್ಯೂಜಿಲ್ಯಾಂಡ್‌
ಟಿಮ್‌ ಸೀಫ‌ರ್ಟ್‌    ಬಿ ಅಹ್ಮದ್‌    84
ಕಾಲಿನ್‌ ಮುನ್ರೊ    ಸಿ ಶಂಕರ್‌ ಬಿ ಕೆ.ಪಾಂಡ್ಯ    34
ಕೇನ್‌ ವಿಲಿಯಮ್ಸನ್‌    ಸಿ ಹಾರ್ದಿಕ್‌ ಬಿ ಚಾಹಲ್‌    34
ಡ್ಯಾರಿಲ್‌ ಮಿಚೆಲ್‌    ಸಿ ಕಾರ್ತಿಕ್‌ ಬಿ ಹಾರ್ದಿಕ್‌    8
ರಾಸ್‌ ಟಯ್ಲರ್‌    ಸಿ ಅಹ್ಮದ್‌ ಬಿ ಭುವನೇಶ್ವರ್‌    23
ಸಿ. ಗ್ರ್ಯಾಂಡ್‌ಹೋಮ್‌    ಸಿ ಶಮಿ (ಬದಲಿ) ಬಿ ಹಾರ್ದಿಕ್‌    3
ಮಿಚೆಲ್‌ ಸ್ಯಾಂಟ್ನರ್‌    ಔಟಾಗದೆ    7
ಸ್ಕಾಟ್‌ ಕ್ಯುಗೆಲೀನ್‌    ಔಟಾಗದೆ    20
ಇತರ        6
ಒಟ್ಟು  (20 ಓವರ್‌ಗಳಲ್ಲಿ 6 ವಿಕೆಟಿಗೆ)        219
ವಿಕೆಟ್‌ ಪತನ: 1-86, 2-134, 3-164, 4-164, 5-189, 6-191.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        4-0-47-1
ಖಲೀಲ್‌ ಅಹ್ಮದ್‌        4-0-48-1
ಕೃಣಾಲ್‌ ಪಾಂಡ್ಯ        4-0-37-1
ಹಾರ್ದಿಕ್‌ ಪಾಂಡ್ಯ        4-0-51-2
ಯಜುವೇಂದ್ರ ಚಾಹಲ್‌        4-0-35-1

ಭಾರತ
ರೋಹಿತ್‌ ಶರ್ಮ    ಸಿ ಫ‌ರ್ಗ್ಯುಸನ್‌ ಬಿ ಸೌಥಿ    1
ಶಿಖರ್‌ ಧವನ್‌    ಬಿ ಫ‌ರ್ಗ್ಯುಸನ್‌    29
ವಿಜಯ್‌ ಶಂಕರ್‌    ಸಿ ಗ್ರ್ಯಾಂಡ್‌ಹೋಮ್‌ ಬಿ ಸ್ಯಾಂಟ್ನರ್‌    27
ರಿಷಬ್‌ ಪಂತ್‌    ಬಿ ಸ್ಯಾಂಟ್ನರ್‌    4
ಎಂ.ಎಸ್‌. ಧೋನಿ    ಸಿ ಫ‌ರ್ಗ್ಯುಸನ್‌ ಬಿ ಸೌಥಿ    39
ದಿನೇಶ್‌ ಕಾರ್ತಿಕ್‌    ಸಿ ಸೌಥಿ ಬಿ ಸೋಧಿ    5
ಹಾರ್ದಿಕ್‌ ಪಾಂಡ್ಯ    ಸಿ ಮಿಚೆಲ್‌ ಬಿ ಸೋಧಿ    4
ಕೃಣಾಲ್‌ ಪಾಂಡ್ಯ    ಸಿ ಸೀಫ‌ರ್ಟ್‌ ಬಿ ಸೌಥಿ    20
ಭುವನೇಶ್ವರ್‌ ಕುಮಾರ್‌    ಸಿ ಸೀಫ‌ರ್ಟ್‌ ಬಿ ಫ‌ರ್ಗ್ಯುಸನ್‌    1
ಯಜುವೇಂದ್ರ ಚಾಹಲ್‌    ಬಿ ಮಿಚೆಲ್‌    1
ಖಲೀಲ್‌ ಅಹ್ಮದ್‌    ಔಟಾಗದೆ    1
ಇತರ        7
ಒಟ್ಟು  (19.2 ಓವರ್‌ಗಳಲ್ಲಿ ಆಲೌಟ್‌)        139
ವಿಕೆಟ್‌ ಪತನ: 1-18, 2-51, 3-64, 4-65, 5-72, 6-77, 7-129, 8-132, 9-136.
ಬೌಲಿಂಗ್‌:
ಟಿಮ್‌ ಸೌಥಿ        4-0-17-3
ಸ್ಕಾಟ್‌ ಕ್ಯುಗೆಲೀನ್‌        2-0-34-0
ಲಾಕಿ ಫ‌ರ್ಗ್ಯುಸನ್‌        4-0-22-2
ಮಿಚೆಲ್‌ ಸ್ಯಾಂಟ್ನರ್‌        4-0-24-2
ಡ್ಯಾರಿಲ್‌ ಮಿಚೆಲ್‌        2.2-0-13-1
ಈಶ್‌ ಸೋಧಿ        3-0-26-2
ಪಂದ್ಯಶ್ರೇಷ್ಠ: ಟಿಮ್‌ ಸೀಫ‌ರ್ಟ್‌
2ನೇ ಪಂದ್ಯ: ಆಕ್ಲೆಂಡ್‌ (ಫೆ. 8)

Advertisement

Udayavani is now on Telegram. Click here to join our channel and stay updated with the latest news.

Next