Advertisement

ಟೀಮ್‌ ಇಂಡಿಯಾಕ್ಕೆ ಟಿ20 ಸರಣಿ

05:38 PM Aug 05, 2019 | Team Udayavani |

ಲಾಡರ್‌ಹಿಲ್‌: ಮಳೆಯಿಂದ ತೊಂದರೆಗೊಳಗಾದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತವು ವೆಸ್ಟ್‌ಇಂಡೀಸ್‌ ತಂಡವನ್ನು ಡಕ್‌ವರ್ತ್‌ ಲೂಯಿಸ್‌ ನಿಯಮದಡಿ 22 ರನ್ನುಗಳಿಂದ ಸೋಲಿಸಿದೆ. ಈ ಗೆಲುವಿನಿಂದ ಭಾರತವು ಮೂರು ಪಂದ್ಯಗಳ ಸರಣಿ ಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಭಾರತವು ರೋಹಿತ್‌ ಶರ್ಮ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ 5 ವಿಕೆಟಿಗೆ 167 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ವೆಸ್ಟ್‌ಇಂಡೀಸ್‌ 15.3 ಓವರ್‌ಗಳಲ್ಲಿ 4 ವಿಕೆಟಿಗೆ 98 ರನ್‌ ಗಳಿಸಿದ ವೇಳೆ ಭಾರೀ ಮಳೆ ಸುರಿಯಿತು. ಇದರಿಂದಾಗಿ ಮತ್ತೆ ಆಟ ನಡೆಯಲು ಸಾಧ್ಯ ವಾಗಲಿಲ್ಲ. ಹೀಗಾಗಿ ಡಕ್‌ವರ್ತ್‌ ಲೂಯಿಸ್‌ ನಿಯಮ ಅಳವಡಿಸಲಾಯಿತು. ಈ ನಿಯಮದಂತೆ ಒಂದು ವೇಳೆ ವೆಸ್ಟ್‌ಇಂಡೀಸ್‌ ಈ ಹಂತದಲ್ಲಿ 120 ರನ್‌ ಗಳಿಸಿದ್ದರೆ ಗೆಲ್ಲುತ್ತಿತ್ತು. ಹೀಗಾಗಿ ಭಾರತ 22 ರನ್ನುಗಳಿಂದ ಜಯ ಸಾಧಿಸಿತು.

ರವಿವಾರದ ಈ ಮುಖಾ ಮುಖೀಯಲ್ಲಿ ಭಾರತ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ಶನಿವಾರವಷ್ಟೇ ನಡೆದ ಮೊದಲ ಪಂದ್ಯದಲ್ಲಿ ಸಣ್ಣ ಮೊತ್ತದ ಹೋರಾಟದಿಂದ ಹತಾಶರಾಗಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ಇಲ್ಲಿ ಕೊಹ್ಲಿ ಪಡೆ ನಿರಾಸೆಗೊಳಿಸಲಿಲ್ಲ. ರೋಹಿತ್‌ – ಧವನ್‌ 7.5 ಓವರ್‌ಗಳಲ್ಲಿ 67 ರನ್‌ ಪೇರಿಸಿ ಭರ್ಜರಿ ಆರಂಭ ಒದಗಿಸಿದರು.

ರೋಹಿತ್‌ ಸರ್ವಾಧಿಕ 67 ರನ್‌ ಬಾರಿಸಿ ವಿಂಡೀಸ್‌ ಬೌಲರ್‌ಗಳನ್ನು ಕಾಡಿದರು. 51 ಎಸೆತಗಳ ಈ ಆಟದಲ್ಲಿ 6 ಬೌಂಡರಿ, 3 ಸಿಕ್ಸರ್‌ ಸೇರಿತ್ತು.

ನಾಯಕ ವಿರಾಟ್‌ ಕೊಹ್ಲಿ 23 ಎಸೆತಗಳಿಂದ 28 ರನ್‌ ಹೊಡೆದರು. ಇದರಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ರೋಹಿತ್‌-ಕೊಹ್ಲಿ ಜೋಡಿಯಿಂದ ದ್ವಿತೀಯ ವಿಕೆಟಿಗೆ 48 ರನ್‌ ಒಟ್ಟುಗೂಡಿತು.

Advertisement

ಆದರೆ ಒಶೇನ್‌ ಥಾಮಸ್‌ ಈ ಜೋಡಿಯನ್ನು ಬೇರ್ಪಡಿಸಿದ ಬಳಿಕ ಭಾರತದ ರನ್‌ಗತಿ ಕುಂಟಿತಗೊಂಡಿತು. ರಿಷಭ್‌ ಪಂತ್‌ (4), ಮನೀಷ್‌ ಪಾಂಡೆ (6) ಹೆಚ್ಚು ಹೊತ್ತು ನಿಲ್ಲಲಿಲ್ಲ.

ಸ್ಕೋರ್‌ ಪಟ್ಟಿ

ಭಾರತ
ರೋಹಿತ್‌ ಶರ್ಮ ಸಿ ಹೆಟ್‌ಮೈರ್‌ ಬಿ ಥಾಮಸ್‌ 67
ಶಿಖರ್‌ ಧವನ್‌ ಬಿ ಕಿಮೊ ಪೌಲ್‌ 23
ವಿರಾಟ್‌ ಕೊಹ್ಲಿ ಬಿ ಕಾಟ್ರೆಲ್‌ 28
ರಿಷಭ್‌ ಪಂತ್‌ ಸಿ ಪೊಲಾರ್ಡ್‌ ಬಿ ಥಾಮಸ್‌ 4
ಮನೀಷ್‌ ಪಾಂಡೆ ಸಿ ಪೂರನ್‌ ಬಿ ಕಾಟ್ರೆಲ್‌ 6
ಕೃಣಾಲ್‌ ಪಾಂಡ್ಯ ಔಟಾಗದೆ 20
ರವೀಂದ್ರ ಜಡೇಜ ಔಟಾಗದೆ 9
ಇತರ 10
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 167
ವಿಕೆಟ್‌ ಪತನ: 1-67, 2-115, 3-126, 4-132, 5-143.
ಬೌಲಿಂಗ್‌: ಓಶೇನ್‌ ಥಾಮಸ್‌ 4-0-27-2
ಶೆಲ್ಡನ್‌ ಕಾಟ್ರೆಲ್‌ 4-0-25-2
ಸುನೀಲ್‌ ನಾರಾಯಣ್‌ 4-0-28-0
ಕಿಮೊ ಪೌಲ್‌ 4-0-46-1
ಕಾರ್ಲೋಸ್‌ ಬ್ರಾತ್‌ವೇಟ್‌ 2-0-22-0
ಖಾರಿ ಪಿಯರೆ 2-0-16-0
ವೆಸ್ಟ್‌ ಇಂಡೀಸ್‌
ಸುನೀಲ್‌ ನಾರಾಯಣ್‌ ಬಿ ಸುಂದರ್‌ 4
ಎವಿನ್‌ ಲೆವಿಸ್‌ ಸಿ ಮತ್ತು ಬಿ ಭುವನೇಶ್ವರ್‌ 0
ನಿಕೋಲಸ್‌ ಪೂರನ್‌ ಸಿ ಪಾಂಡೆ ಬಿ ಪಾಂಡ್ಯ 19
ರೊಮನ್‌ ಪೊವೆಲ್‌ ಎಲ್‌ಬಿಡಬ್ಲ್ಯುಬಿ ಪಾಂಡ್ಯ 54
ಕೈರನ್‌ ಪೊಲಾರ್ಡ್‌ ಔಟಾಗದೆ 8
ಶಿಮ್ರಾನ್‌ ಹೆಟ್‌ಮೈರ್‌ ಔಟಾಗದೆ 6
ಇತರ 7
ಒಟ್ಟು (15.3 ಓವರ್‌ಗಳಲ್ಲಿ 4ವಿಕೆಟಿಗೆ) 98
ವಿಕೆಟ್‌ ಪತನ: 1-2, 2-8, 3-84, 4-85
ಬೌಲಿಂಗ್‌ ವಾಷಿಂಗ್ಟನ್‌ ಸುಂದರ್‌ 3-1-12-1
ಭುವನೇಶ್ವರ್‌ ಕುಮಾರ್‌ 2-0-7-1
ಖಲೀಲ್‌ ಅಹ್ಮದ್‌ 3-0-22-0
ನವದೀಪ್‌ ಸೈನಿ 3-0-27-0
ಕೃಣಾಲ್‌ ಪಾಂಡ್ಯ 3.3-0-23-2
ರವೀಂದ್ರ ಜಡೇಜ 1-0-6-0

Advertisement

Udayavani is now on Telegram. Click here to join our channel and stay updated with the latest news.

Next