Advertisement

ಟಿ20 ರ್‍ಯಾಂಕಿಂಗ್‌ ವಿಂಡೀಸ್‌ ಕ್ರಿಕೆಟಿಗರ ಪ್ರಗತಿ

06:00 AM Dec 24, 2018 | |

ದುಬಾೖ: ಆತಿಥೇಯ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಗೆದ್ದ ಬೆನ್ನಲ್ಲೇ ವೆಸ್ಟ್‌ ಕ್ರಿಕೆಟಿಗರ ರ್‍ಯಾಂಕಿಂಗ್‌ನಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಆರಂಭಕಾರ ಎವಿನ್‌ ಲೆವಿಸ್‌, ಬೌಲರ್‌ಗಳಾದ ಕೀಮೊ ಪೌಲ್‌, ಶೆಲ್ಡನ್‌ ಕಾಟ್ರೆಲ್‌, ಫ್ಯಾಬಿಯನ್‌ ಅಲನ್‌ ಅವರೆಲ್ಲ ರ್‍ಯಾಂಕಿಂಗ್‌ ಯಾದಿಯಲ್ಲಿ ಸಾಕಷ್ಟು ಮೇಲೇರಿದ್ದಾರೆ.

Advertisement

ಶನಿವಾರದ ನಿರ್ಣಾಯಕ ಪಂದ್ಯದಲ್ಲಿ 89 ರನ್‌ ಸಿಡಿಸಿದ ಎವಿನ್‌ ಲೆವಿಸ್‌ 11 ಸ್ಥಾನ ಮೇಲೇರಿದ್ದು, 4ನೇ ಸ್ಥಾನ ಅಲಂಕರಿಸಿದ್ದಾರೆ. 15 ರನ್ನಿಗೆ 5 ವಿಕೆಟ್‌ ಉಡಾಯಿಸಿದ ಕೀಮೊ ಪೌಲ್‌ ಅವರದು ಒಮ್ಮೆಲೇ 42 ಸ್ಥಾನಗಳ ನೆಗೆತ. ಬ್ಯಾಟಿಂಗ್‌ನಲ್ಲೂ ಮಿಂಚಿದ ಪೌಲ್‌ 34 ಸ್ಥಾನ ಜಿಗಿದದ್ದು ವಿಶೇಷ.

ಮೂರೂ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ ಶೈ ಹೋಪ್‌ 82 ಸ್ಥಾನಗಳ ನೆಗೆತದೊಂದಿಗೆ 82ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಉಳಿದ ಬ್ಯಾಟ್ಸ್‌ಮನ್‌ಗಳಾದ ನಿಕೋಲಸ್‌ ಪೂರಣ್‌ 16 ಸ್ಥಾನ ಹಾಗೂ ರೋವ್‌ಮನ್‌ ಪೊವೆಲ್‌ 26 ಸ್ಥಾನ ಮೇಲೆರಿದ್ದಾರೆ (ನಂ. 88, ನಂ. 110).

ಸರಣಿಯಲ್ಲಿ 7 ವಿಕೆಟ್‌ ಕಿತ್ತ ಶೆಲ್ಡನ್‌ ಕಾಟ್ರೆಲ್‌ 64 ಸ್ಥಾನಗಳ ಜಿಗಿತ ಸಾಧಿಸಿದರೆ (88), ಫ್ಯಾಬಿಯನ್‌ ಅಲನ್‌ ಅವರದು 86 ಸ್ಥಾನಗಳ ಜಂಪ್‌ (99). 8 ಸ್ಥಾನ ಮೇಲೇರಿ 22ನೇ ಸ್ಥಾನ ಅಲಂಕರಿಸಿರುವ ಕಾರ್ಲೋಸ್‌ ಬ್ರಾತ್‌ವೇಟ್‌ ವಿಂಡೀಸಿನ ಟಾಪ್‌ ಬೌಲರ್‌ ಆಗಿದ್ದಾರೆ.

ದ್ವಿತೀಯ ಸ್ಥಾನಕ್ಕೇರಿದ ಶಕಿಬ್‌
ಬಾಂಗ್ಲಾದೇಶ ಸರಣಿ ಸೋತರೂ ನಾಯಕ ಶಕಿಬ್‌ ಅಲ್‌ ಹಸನ್‌ ಸಂತಸಪಡಲು ಕಾರಣವೊಂದು ಸಿಕ್ಕಿದೆ. ಅವರು ಆಲ್‌ರೌಂಡ್‌ ಯಾದಿಯಲ್ಲಿ ಒಂದು ಸ್ಥಾನ ಮೇಲೇರಿ ದ್ವಿತೀಯ ಸ್ಥಾನಿಯಾಗಿದ್ದಾರೆ.

Advertisement

ತಂಡ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ಥಾನ (138) ಮತ್ತು ಭಾರತ (126) ಮೊದಲೆರಡು ಸ್ಥಾನದಲ್ಲಿವೆ.

ಟಾಪ್‌-10 ಟಿ20 ಬ್ಯಾಟ್ಸ್‌ಮನ್‌
1. ಬಾಬರ್‌ ಆಜಂ    858
2. ಕಾಲಿನ್‌ ಮುನ್ರೊ    815
3. ಆರನ್‌ ಫಿಂಚ್‌    806
4. ಎವಿನ್‌ ಲೆವಿಸ್‌    751
5. ಫ‌ಕಾರ್‌ ಜಮಾನ್‌    749
6. ಗ್ಲೆನ್‌ ಮ್ಯಾಕ್ಸ್‌ವೆಲ್‌    745
7. ಕೆ.ಎಲ್‌. ರಾಹುಲ್‌    719
8. ಮಾರ್ಟಿನ್‌ ಗಪ್ಟಿಲ್‌    703
9. ಅಲೆಕ್ಸ್‌ ಹೇಲ್ಸ್‌    697
10. ರೋಹಿತ್‌ ಶರ್ಮ    689

 ಟಾಪ್‌-10 ಟಿ20 ಬೌಲರ್
1. ರಶೀದ್‌ ಖಾನ್‌    793
2. ಶಾದಾಬ್‌ ಖಾನ್‌    752
3. ಕುಲದೀಪ್‌ ಯಾದವ್‌    714
4. ಆದಿಲ್‌ ರಶೀದ್‌    676
5. ಆ್ಯಡಂ ಝಂಪ    670
6. ಐಶ್‌ ಸೋಧಿ    668
7. ಶಕಿಬ್‌ ಅಲ್‌ ಹಸನ್‌    658
8. ಫಾಹಿಮ್‌ ಅಶ್ರಫ್    652
9. ಇಮಾದ್‌ ವಾಸಿಮ್‌    651
10. ಇಮ್ರಾನ್‌ ತಾಹಿರ್‌    640

Advertisement

Udayavani is now on Telegram. Click here to join our channel and stay updated with the latest news.

Next